20,21, 22ರಂದು ಕಸಾಪದಿಂದ ಕಾವ್ಯ , ಜಾಣ, ರತ್ನಪರೀಕ್ಷೆ
ಮಂಗಳೂರು, ಜ. 4: 2016-17ನೆ ಸಾಲಿನ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಪ್ರವೇಶ ಕಾವ್ಯ , ಜಾಣ ಮತ್ತು ರತ್ನ ಪರೀಕ್ಷೆಗಳು ರಾಜ್ಯದ18 ಕೇಂದ್ರಗಳಲ್ಲಿ ಹಾಗೂ ಗಡಿನಾಡ ಘಟಕದ 1 ಕೇಂದ್ರದಲ್ಲಿ ಜನವರಿ 20, 21 ಹಾಗೂ22 ರಂದು ಒಟ್ಟು ಮೂರು ದಿನ ನಡೆಯಲಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪರೀಕ್ಷಾ ಕೇಂದ್ರವು ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯವಾಗಿರುತ್ತದೆ.
ಬೆಳಗ್ಗೆ 10ಗಂಟೆಯಿಂದ1 ಹಾಗೂಮಧ್ಯಾಹ್ನ2ರಿಂದ5 ಗಂಟೆಯವರೆಗೆ ಪರೀಕ್ಷಾ ಸಮಯವಾಗಿದೆ.
ಹೆಚ್ಚಿನಮಾಹಿತಿಗಾಗಿ ಶಾರದಾದ್ಯಾಲಯದ ಉಪಪ್ರಾಂಶುಪಾಲ ದಯಾನಂದ ಕಟೀಲು(9448545578) ಇವರನ್ನುಸಂಪರ್ಕಿಸುವಂತೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





