ಗರ್ಭಿಣಿ ಯುವತಿ ನಾಪತ್ತೆ
ಉಡುಪಿ, ಜ.4: ಉಡುಪಿ ನಿಟ್ಟೂರಿನ ಸ್ತ್ರೀ ಸೇವಾನಿಕೇತನ ಎಂಬ ಸಂಸ್ಥೆಯಲ್ಲಿದ್ದ ಸುಮಾರು 20 ವರ್ಷ ಪ್ರಾಯದ ಅನಾಥ ಮಹಿಳೆ 4ತಿಂಗಳ ಗರ್ಭಿಣಿ ಭವಾನಿ ಎಂಬವರನ್ನು ತುರ್ತು ಚಿಕಿತ್ಸೆಗಾಗಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದು ಕಳೆದ ವರ್ಷದ ಜುಲೈ 17ರಂದು ಬೆಳಗ್ಗೆ 7:30ರ ಸುಮಾರಿಗೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಕಾಣೆಯಾಗಿದ್ದು, ಈವರೆಗೂ ಸಿಗದೆ ನಾಪತ್ತೆಯಾಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿ 152 ಸೆ.ಮೀ ಎತ್ತರವಿದ್ದು, ಕಪ್ಪುತಲೆ ಕೂದಲು, ಗೋಧಿ ಮೈ ಬಣ್ಣ, ಗುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಇವರು ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಈ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಠಾಣೆ ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





