ನೋಟು ಅಮಾನ್ಯ ವಿರುದ್ಧ ರಾಷ್ಷ್ರೀಯ ಹೋರಾಟ ಅಗತ್ಯ: ವಿಎಸ್ ಅಚ್ಯುತಾನಂದನ್
.jpg)
ತಿರುವನಂತಪುರಂ, ಜ.5: ನೋಟು ನಿಷೇಧದ ವಿರುದ್ದ ರಾಷ್ಷ್ರೀಯ ಮಟ್ಟದಲ್ಲಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಿಪಿಎಂ ಕೇಂದ್ರ ನಾಯಕರಿಗೆ ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಎಸ್ ಅಚ್ಯತಾನಂದನ್ ಪತ್ರ ಬರೆದಿದ್ದಾರೆ. ಕೇರಳದಲ್ಲಿ ಹಲವು ಕಡೆ ಪಕ್ಷ ದುರ್ಬಲವಾಗಿದೆ ಎಂದು ಪತ್ರದಲ್ಲಿ ಕೇಂದ್ರದ ನಾಯಕರ ಗಮನಸೆಳೆದಿದ್ದಾರೆ.
ಪುತ್ರ ಅರುಣ್ ಕುಮಾರ್ ಮೂಲಕ ಅಚ್ಯುತಾನಂದನ್ ಪತ್ರವನ್ನು ತಲುಪಿಸಿದ್ದಾರೆ. ನೋಟು ಅಮಾನ್ಯ ವಿರುದ್ಧ ಪ್ರತಿಭಟನೆ ಹೋರಾಟನಡೆಸಬೇಕು. ಜನತಾ ಹೋರಾಟವನ್ನು ಸಿಪಿಎಂ ವಹಿಸಿಕೊಳ್ಳಬೇಕು, ಕೇಂದ್ರ ಸಮಿತಿ ಈ ಕುರಿತು ಚರ್ಚಿಸಬೇಕೆಂದು ಪತ್ರದಲ್ಲಿ ವಿಎಸ್ ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.
Next Story





