ಕಣ್ಣೂರು: ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾಕೂಟ
ಮಂಗಳೂರು, ಜ.5: ಕಣ್ಣೂರು ಮಹಿಳಾ ಪದವಿ ಪೂರ್ವ ಕಾಲೇಜು, ಕಣ್ಣೂರು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.
ಪೊಲೀಸ್ ಸಹಾಯಕ ಆಯುಕ್ತ ವೆಲೆಂಟೆನ್ ಡಿಸೋಜ ಕ್ರೀಡಾಕೂಟ ಉದ್ಘಾಟಿಸಿದರು. ಕಣ್ಣೂರು ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಎಸ್.ಎಚ್. ಅಬ್ದುಲ್ ಖಾದರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲ ಅಬೂಬಕರ್ ಸ್ವಾಗತಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಜಿ ಕೆ. ಬಿ. ಅಬ್ದುರ್ರಹ್ಮಾನ್, ಕಾರ್ಯದರ್ಶಿ ಹಾಜಿ ಸಿತಾರ್ ಮಜೀದ್ ಮತ್ತು ಟ್ರಸ್ಟಿ ಹಮೀದ್ ಕೆ. ಉಪಸ್ಥಿತರಿದ್ದರು.
ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಾಜಿ ಎಸ್. ಎಚ್. ಅಬ್ದುಲ್ ಖಾದರ್ ವಹಿಸಿದ್ದರು. ಹಾಜಿ ಸಿತಾರ್ ಮಜೀದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ನಗದು ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಪೋರೇಟರ್ ಸುಧೀರ್ ಶೆಟ್ಟಿ, ಸುನ್ನಿ ಸಂದೇಶ ಪತ್ರಿಕೆಯ ನಿರ್ದೇಶಕ ನೌಶಾದ್ ಹಾಜಿ ಸೂರಲ್ಪಾಡಿ, ಟಿಆರ್‌ಎಫ್‌ನ ರಫೀಕ್ ಮಾಸ್ಟರ್, ಮುಹಮ್ಮದ್ ಸ್ವರೂಪ್, ರಫೀಕ್ ಇ.ಕೆ. ಟಿಂಬರ್, ಉಪಾಧ್ಯಕ್ಷ ಕೆ. ಅಬ್ದುರ್ರಹ್ಮಾನ್, ಕಾರ್ಯದರ್ಶಿ ಎಸ್. ಉಮರಬ್ಬ, ಟ್ರಸ್ಟಿ ಬಿ. ಮುಹಮ್ಮದ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಜಯಲತಾ ಮತ್ತು ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ತ್ರಿವೇಣಿ ವಂದಿಸಿದರು....







