ಸುನ್ನಿ ಸಂದೇಶ ವಾರ್ಷಿಕದ ಪ್ರಚಾರಕ್ಕೆ ಚಾಲನೆ
ಮಂಗಳೂರು, ಜ.5: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಪ್ರಕಾಶಿತ ಸುನ್ನಿ ಸಂದೇಶ ಮಾಸಿಕದ 15ನೆ ವಾರ್ಷಿಕ ಸಮ್ಮೇಳನದ ಅಂಗವಾಗಿ ಫೆ.18ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯುವ ಎ.ಎಂ. ನೌಶಾದ್ ಬಾಖವಿಯ ಪ್ರಭಾಷಣದ ಪ್ರಚಾರಕ್ಕೆ ಕಲ್ಲಿಕೋಟೆ ವರೆಕ್ಕಲ್ ಶಂಸುಲ್ ಉಲೆಮಾ ಸಮುಚ್ಚಯದಲ್ಲಿ ನೌಶಾದ್ ಬಾಖವಿ ಚಾಲನೆ ನೀಡಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುರ್ರಹ್ಮಾನ್ ಫೈಝಿ, ಯಮಾನಿ ಅರಬಿಕ್ ಕಾಲೇಜಿನ ಮುಖ್ಯಸ್ಥ ಕುಟ್ಟಿ ಹಸನ್ ದಾರಿಮಿ, ಕೆ.ಟಿ. ಅಬ್ದುಲ್ಲಾ ಫೈಝಿ ವಳಿಮುಕ್, ಜಿಲ್ಲಾ ಜಂಇಯತುಲ್ ಮುಅಲ್ಲಿಂ ಅಧ್ಯಕ್ಷ ಕೆ. ಎಲ್. ಉಮರ್ ದಾರಿಮಿ ಪಟ್ಟೋರಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಕೆ.ಎಂ.ಎಸ್. ಸಿದ್ಧೀಕ್ ಫೈಝಿ ಕರಾಯ, ಅಶ್ರಫ್ ಪೆರ್ಲಂಬಾಡಿ, ಮುಸ್ತಫಾ ಫೈಝಿ ಕಿನ್ಯ, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಸಿತಾರ್ ಅಬ್ದುಲ್ ಮಜೀದ್ ಹಾಜಿ, ನೌಷಾದ್ ಹಾಜಿ ಸೂರಲ್ಪಾಡಿ, ಎಂ.ಎ. ಅಬ್ದುಲ್ಲ ಹಾಜಿ ಬೆಳ್ಮ, ಫಳ್‌ಲ್ ರಹ್ಮಾನ್ ದಾರಿಮಿ, ಶರೀಫ್ ಕೆಳಿಂಜ ಉಪಸ್ಥಿತರಿದ್ದರು....
Next Story





