ನೋಟು ರದ್ದತಿ ಕಪ್ಪುಹಣದ ವಿರುದ್ಧ ಅತ್ಯಂತ ವಿನಾಶಕಾರಿ ನೀತಿ : ಆರ್‌ಬಿಐ ಮಾಜಿ ಗವರ್ನರ್ ಸುಬ್ಬರಾವ್ ಪ್ರಶಂಸೆ

ಹೈದರಾಬಾದ್,ಜ.5: ಆರ್‌ಬಿಐನ ಮಾಜಿ ಗವರ್ನರ್ ಡಿ.ಸುಬ್ಬರಾವ್ ಅವರು ಇಂದಿಲ್ಲಿ ಸರಕಾರದ ನೋಟು ರದ್ದತಿ ನಿರ್ಣಯವನ್ನು ಕಪ್ಪುಹಣವನ್ನು ನಿರ್ಮೂಲಿಸುವಲ್ಲಿ ‘‘1991ರ ಸುಧಾರಣೆಗಳಿಂದೀಚೆಗೆ ರಚನಾತ್ಮಕ ವಿನಾಶಕಾರಿ ಮತ್ತು ಅತ್ಯಂತ ವಿಧ್ವಂಸಕ ನೀತಿಯಾಗಿದೆ ’’ಎಂದು ಬಣ್ಣಿಸಿದರು.
ಆದರೆ ಇದು ಅತ್ಯಂತ ವಿಶಿಷ್ಟ ಮಾದರಿಯ ರಚನಾತ್ಮಕ ವಿನಾಶಕಾರಿ ನೀತಿಯಾಗಿದೆ, ಏಕೆಂದರೆ ಇದು ವಿನಾಶಕಾರಿ ಸೃಷ್ಟಿಯಾಗಿದ್ದ ಕಪ್ಪುಹಣವನ್ನು ನಿರ್ಮೂಲಿಸಿದೆ ಎಂದು ಬ್ಯಾಂಕಿಂಗ್ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ಐಡಿಆರ್‌ಬಿಟಿ)ಯು ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಸುಬ್ಬರಾವ್ ಹೇಳಿದರು.
ನೋಟು ರದ್ದತಿಯು ಡಿಜಿಟಲ್ ಹಣ ಪಾವತಿಗಳ ಮೂಲಕ ಭಾರತೀಯ ಹಣಕಾಸು ಕ್ಷೇತ್ರದಲ್ಲಿ ಅನೇಕ ಹೊಸತನಗಳಿಗೆ ಕಾರಣವಾಗುತ್ತಿದೆ ಎಂದರು.
Next Story





