ಸುನಿಲ್ ಗ್ರೋವರ್ 'ಕಾಫಿ ವಿದ್ ಡಿ' ಬಿಡುಗಡೆ ಮುಂದೂಡಿಕೆಗೆ ನಿಜವಾದ ಕಾರಣ ಯಾರು ?

ಮುಂಬೈ , ಜ. 5 : ಹೊಸವರ್ಷದ ಪ್ರಪ್ರಥಮ ಬಾಲಿವುಡ್ ಬಿಡುಗಡೆಯಾಗಬೇಕಿದ್ದ ' ಕಾಫಿ ವಿದ್ ಡಿ' ಈಗ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದ ಪ್ರಥಮ ಟ್ರೇಲರ್ ಬಿಡುಗಡೆಯ ಬೆನ್ನಿಗೆ ಜನರ ಉತ್ತಮ ಪ್ರತಿಕ್ರಿಯೆಯ ಜೊತೆ ಜೊತೆಗೆ ಭೂಗತ ಲೋಕದ ಬೆದರಿಕೆ ಬಂದಿದ್ದು ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಭೂಗತ ದೊರೆ ದಾವೂದ್ ಇಬ್ರಾಹಿಂ ಬಗ್ಗೆ ಚಿತ್ರ ಮಾಡುವುದು ದುಬಾರಿಯಾಗಲಿದೆ ಎಂಬುದು ಈಗ ಚಿತ್ರ ತಂಡಕ್ಕೆ ಅರಿವಾಗಿದೆ.
ನಿರ್ಮಾಪಕ ವಿನೊಂದ್ ರಮಣಿ, ನಿರ್ದೇಶಕ ವಿಶಾಲ್ ಮಿಶ್ರಾ ಹಾಗು ನಟ ಸುನಿಲ್ ಗ್ರೋವರ್ ಅವರಿಗೆ ಅನಾಮಿಕ ಬೆದರಿಕೆ ಕರೆಗಳು ಬರುತ್ತಿವಿ . ಚಿತ್ರದಲ್ಲಿ ದಾವೂದ್ ಕುರಿತ ಹೇಳಿಕೆ, ದೃಶ್ಯಗಳನ್ನು ತೆಗೆಯದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಚಿತ್ರ ತಂಡ ಈ ಬೆದರಿಕೆ ಕರೆಗಳ ವಿರುದ್ಧ ಕ್ರಮಕ್ಕೆ ದಿಲ್ಲಿ ಪೋಲೀಸರ ಮೊರೆ ಹೋಗಿದೆ.
ಆದರೆ ನಿರ್ದೇಶಕ ಮಾತ್ರ ಬಿಡುಗಡೆ ವಿಳಂಬವಾಗಲು ಇದು ಕಾರಣ ಎಂದು ನೇರವಾಗಿ ಹೇಳುತ್ತಿಲ್ಲ. " ಟ್ರೇಲರ್ ಬಿಡುಗಡೆಯಾದ ಬಳಿಕದ ದಿನಗಳು ನಮ್ಮ ಪಾಲಿಗೆ ಸುಲಭವಾಗಿರಲಿಲ್ಲ. ನಾವು ಧನಾತ್ಮಕ ಚಿಂತನೆಯಲ್ಲಿದ್ದೇವೆ. ಪ್ರತಿದಿನವನ್ನು ಬಂದಂತೆ ಎದುರಿಸುತ್ತಿದ್ದೇವೆ. ಸದ್ಯಕ್ಕೆ , ಬಿಡುಗಡೆ ಮುಂದೂಡಲಾಗಿದೆ " ಎಂದಷ್ಟೇ ನಿರ್ದೇಶಕ ವಿಶಾಲ್ ಹೇಳಿದ್ದಾರೆ .
ದಾವೂದ್ ನನ್ನ ತಮಾಷೆ ಮಾಡಿದ ದೃಶ್ಯಗಳನ್ನು ಕಟ್ ಮಾಡಿ ಅಥವಾ ಇಡೀ ಚಿತ್ರ ಬಿಡುಗಡೆಯನ್ನೇ ರದ್ದು ಮಾಡಿ ಎಂದು ಛೋಟಾ ಶಕೀಲ್ ಬಂಟರು ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ವಿನೊಂದ್ ರಮಣಿ ಹಾಗು ನಿರ್ದೇಶಕ ವಿಶಾಲ್ ಮಿಶ್ರಾ ದೂರು ದಾಖಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿತ್ರಗಳಿಗೆ ಸೆನ್ಸರ್ ಓಕೆ ಸಿಗುವುದೇ ದೊಡ್ಡ ತಲೆನೋವು. ಆದರೆ ' ಕಾಫಿ ವಿದ್ ಡಿ' ಅಲ್ಲಿಂದ ಪಾಸಾಗಿದೆ. ಆದರೆ ಭೂಗತ ಲೋಕವೇ ಅದಕ್ಕಿಂತ ದೊಡ್ಡ ತಡೆಯಾಗಿ ಬಿಟ್ಟಿದೆ.
ಚಿತ್ರದ ಟ್ರೇಲರ್ ಇಲ್ಲಿದೆ :







