ನೇಣು ಬಿಗಿದು ಆತ್ಮಹತ್ಯೆ

ಕೋಟ, ಜ.5: ಹೊಳೆಯಲ್ಲಿ ಸ್ನಾನ ಮಾಡಿಬರುವುದಾಗಿ ನಿನ್ನೆ ಅಪರಾಹ್ನ 12:00ರ ಸುಮಾರಿಗೆ ಹೇಳಿ ಹೋದ ನಂಚಾರು ಗ್ರಾಮದ ಹೆಸ್ಕುಂದ ದೊಡಹಕ್ಲುವಿನ ಸಂತೋಷ್ (28) ಎಂಬ ಯುವಕ ಬಳಿಕ ತಾಯಿ ಹೋಗಿ ನೋಡಿದಾಗ ಮನೆಯ ಸಮೀಪದ ಹೊಳೆಯ ಬದಿಯಲ್ಲಿ ಮರಕ್ಕೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸ್ನಾನಕ್ಕೆ ಹೋದ ಮಗ ಎಷ್ಟು ಹೊತ್ತಾದರೂ ಹಿಂದಿರುಗಿ ಬಾರದಿದ್ದಾಗ 1:30ರ ಸುಮಾರಿಗೆ ತಾಯಿ ಹುಡುಕಿಕೊಂಡು ಹೋದಾಗ ಈ ಕೃತ್ಯ ಬಯಲಿಗೆ ಬಂದಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





