ಸಂಪ್ಯದಲ್ಲಿ ನೂತನ ಬಸ್ಸು ತಂಗುದಾಣ ಉದ್ಘಾಟನೆ

ಪುತ್ತೂರು,ಜ.5: ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಸಂಪ್ಯ ಘಟಕದ ವತಿಯಿಂದ ಸಂಪ್ಯದಲ್ಲಿ ನೂತನವಾಗಿ ನಿರ್ಮಿಸಿದ ಬಸ್ಸು ತಂಗುದಾಣವನ್ನು ಸುನ್ನೀ ವಿಧ್ವಾಂಸ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮಂಗಳವಾರ ಉದ್ಘಾಟಿಸಿದರು.
ರಾಜ್ಯ ಎಸ್‌ವೈಎಸ್ ನಾಯಕ ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಹಾಗೂ ಆರ್ಯಾಪು ಗ್ರಾ.ಪಂ ಸದಸ್ಯ ವಿಜಯ ಬಿ.ಎಸ್ ಮಾತನಾಡಿ ಶುಭ ಹಾರೈಸಿದರು.ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್‌ನ ಅಬೂ ಸುಫಿಯಾನ್ ಮದನಿ, ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಬಿ.ಕೆ ಮುಹಮ್ಮದ್ ಅಲಿ ಫೈಝಿ, ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ ಸಿದ್ದಿಕ್ ಮೋಂಟುಗೋಳಿ, ಹಂಝ ಮದನಿ ಮಿತ್ತೂರು, ಕುಂಬ್ರ ಮರ್ಕಝುಲ್ ಹುದಾ ಕಾರ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ, ಅಬುಲ್ ಬುಶ್ರಾ ಅಬ್ದುಲ್ ರಹ್ಮಾನ್ ಫೈಝಿ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಎಂ, ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಸದಸ್ಯ ಅಬ್ದುಲ್ ಜಬ್ಬಾರ್ ಎಸ್ ಮತ್ತಿತರರು ಉಪಸ್ಥಿತರಿದ್ದರು.
ಬಿ.ಆರ್ ಯಹ್ಯಾ ಝುಹುರಿ ಸ್ವಾಗತಿಸಿ ರಿಯಾರ್ ವಂದಿಸಿದರು.
Next Story





