ಮಣಿಪಾಲದಲ್ಲಿ ಇಂದಿನಿಂದ ರಾಜಸ್ತಾನಿ ಗ್ರಾಮೀಣ ಮೇಳ
ಉಡುಪಿ, ಜ.5: ರಾಜಸ್ತಾನ ರಾಜ್ಯದ ಗ್ರಾಮೀಣ ಕರಕುಶಲ ಮೇಳವೊಂದು ನಾಳೆಯಿಂದ ಜ.17ರವರೆಗೆ ಮಣಿಪಾಲದ ಆರ್‌ಎಸ್‌ಬಿ ಭವನದಲ್ಲಿ ನಡೆಯಲಿದೆ ಎಂದು ಮೇಳದ ಸಂಘಟಕ ದಿನೇಶ್ ಶರ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರಕುಶಲ ವಸ್ತುಗಳ ಈ ಮೇಳವನ್ನು ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಅಪರಾಹ್ನ 11:00 ಗಂಟೆಗೆ ಉದ್ಘಾಟಿಸಲಿದ್ದಾರೆ. ರಾಜಸ್ತಾನದ ಕೈಮಗ್ಗದ ಬಟ್ಟೆಗಳಲ್ಲೇ, ಕರಕುಶಲ ಜ್ಯುವೆಲ್ಲರಿ, ಪೈಂಟಿಂಗ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಇದರೊಂದಿಗೆ ಸಿಲ್ಕ್ ಪೈಂಟಿಂಗ್, ರವಿವರ್ಮ ಪೈಂಟಿಂಗ್, ಮೀನಾಕ್ಷಿ ಜ್ಯುವೆಲ್ಲರಿ, ಎಲ್ಲಾ ತರದ ರೇಶ್ಮೆ ಮತ್ತು ಬೆಂಗಾಲ್ ಸೀರೆಗಳ ಪ್ರದರ್ಶನವಿರುತ್ತದೆ. ಮೇಳವು ಬೆಳಗ್ಗೆ 10ರಿಂದ ರಾತ್ರಿ 8:30ರವರೆಗೆ ತೆರೆದಿರುತ್ತದೆ.
ಮೇಳವನ್ನು ರಾಜಸ್ತಾನ್ ಆರ್ಟ್ ಮತ್ತು ಕ್ರಾಫ್ಟ್ ಆಯೋಜಿಸಿದೆ ಎಂದು ಶರ್ಮ ತಿಳಿಸಿದರು. ಮಂಗಳೂರಿನ ಸುಜೀರ್ ವಿನೋದ್ ಉಪಸ್ಥಿತರಿದ್ದರು.
Next Story





