ಸಾಗರ: ಬಸ್-ಬೈಕ್ ಢಿಕ್ಕಿ: ಓರ್ವ ಸಾವು
ಸಾಗರ, ಜ.5: ತಾಲೂಕಿನ ಬ್ಯಾಕೋಡು ಸಮೀಪ ಮಿನಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃಪಟ್ಟ ವ್ಯಕ್ತಿಯನ್ನು ಮಲ್ಪೆನಿವಾಸಿ ಹರೀಶ್(35) ಎಂದು ಗುರುತಿಸಲಾಗಿದೆ. ಸಿಗಂದೂರಿನಲ್ಲಿ ಪೂಜೆ ಮುಗಿಸಿ ಬುಲೆಟ್ ಬೈಕ್‌ನಲ್ಲಿ ವಾಪಸ್ ತೆರಳುತ್ತಿದ್ದ ಹರಿೀಶ್‌ಗೆ ಕೊಲ್ಲೂರಿನಿಂದ ಸಿಂದೂರಿಗೆ ಬರುತ್ತಿದ್ದ ಜಮಖಂಡಿ ತಾಲೂಕಿನ ಅಲಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವಾಸಿ ಬಸ್ ನಡುವೆ ಢಿಕ್ಕಿ ಸಂಭವಿ ಸಿದೆ ಎನ್ನಲಾಗಿದೆ.
ಅಪಘಾತದಲ್ಲಿ ಬೈಕ್ ಸವಾರ ಹರೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಬಸ್‌ನಲ್ಲಿದ್ದ ಶಾಲಾ ಮಕ್ಕಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





