9 ಸದಸ್ಯರ ಸಮಿತಿಗೆ ಬಿಂದ್ರಾ, ಪಡುಕೋಣೆ ಆಯ್ಕೆ

ಹೊಸದಿಲ್ಲಿ, ಜ.5: ಎಲ್ಲ ಕ್ರೀಡೆಗಳಲ್ಲಿ ವಿಸ್ತಾರವಾದ ರಾಷ್ಟ್ರೀಯ ಕ್ರೀಡಾಭಿವೃದ್ದಿ ನೀತಿ ಸಂಹಿತೆಯ ಬಗ್ಗೆ ಶಿಫಾರಸು ಮಾಡಲು ಸರಕಾರ ರಚಿಸಿರುವ 9 ಸದಸ್ಯರ ಸಮಿತಿಯಲ್ಲಿ ಮಾಜಿ ಒಲಿಂಪಿಯನ್ ಅಭಿನವ್ ಬಿಂದ್ರಾ, ಬ್ಯಾಡ್ಮಿಂಟನ್ ಲೆಜೆಂಡ್ ಪ್ರಕಾಶ್ ಪಡುಕೋಣೆ ಸಹಿತ 9 ಸದಸ್ಯರು ಆಯ್ಕೆಯಾಗಿದ್ದಾರೆ.
ಸಮಿತಿಗೆ ಕ್ರೀಡಾ ಕಾರ್ಯದರ್ಶಿ ಐ. ಶ್ರೀನಿವಾಸ್ ಅಧ್ಯಕ್ಷರಾಗಿದ್ದಾರೆ. ಸಮಿತಿಯು ಶ್ರೇಷ್ಠ ಅಂತಾರಾಷ್ಟ್ರೀಯ ಪ್ರಾಕ್ಟೀಸ್ ಸಹಿತ ಕ್ರೀಡಾ ಆಡಳಿತಕ್ಕೆ ಸಂಬಂಧಿತ ವಿಷಯಗಳನ್ನು ಅಭ್ಯಶಿಸಲಿದೆೆ.
ಸಮಿತಿಯಲ್ಲಿ ಕ್ರೀಡಾ ಕಾರ್ಯದರ್ಶಿ ಸಹಿತ ಇತರ ಕ್ರೀಡಾಪಟುಗಳಾದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತ ಏಕೈಕ ಅಥ್ಲೀಟ್ ಅಂಜು ಬಾಬಿ ಜಾರ್ಜ್, ಎಐಎಚ್ ಅಧ್ಯಕ್ಷ ನರೇಂದ್ರ ಬಾತ್ರಾ, ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್, ಕೋಚ್ ಬಿಶ್ವೇಶ್ವರ ನಂದಿ, ವಕೀಲ ನಂದನ್ ಕಾಮತ್ ಹಾಗೂ ಕ್ರೀಡಾ ಪತ್ರಕರ್ತ ವಿಜಯ್ ಲೊಕಪಲ್ಲಿ ಅವರಿದ್ದಾರೆ.
Next Story





