ಬಾಲಯೇಸು ಮಹೋತ್ಸವಕ್ಕೆ ಇಂದು ಚಾಲನೆ
ಮಂಗಳೂರು, ಜ.5: ಅಲಂಗಾರಿನ ಬಾಲಯೇಸುವಿನ ಮಹೋತ್ಸವವು ಜ.15ರಂದು ಆಚರಿಸಲ್ಪಡಲಿದೆ. ಇದರ ಪೂರ್ವಭಾವಿ ಪ್ರಾರ್ಥನಾವಿಧಿಯು ಜ.6ರಂದು ಆರಂಭವಾಗಲಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಪ್ರಧಾನ ಗುರುವಂ. ಡೆನಿಸ್ ಮೊರಾಸ್ ಪ್ರಭು ನೊವೆನವನ್ನು ಪೂ. 11:30ಕ್ಕೆ ಉದ್ಘಾಟಿಸುವರು. ಸಂಜೆ 4.30ಕ್ಕೆ ಪ್ರಾರ್ಥನೆ ನೆರವೇರಲಿದೆ.
ಜ.13ರಂದು ಧ್ಯಾನಕೂಟ, ಅಪರಾಹ್ನ 3:30ಕ್ಕೆ ಹೊರೆಕಾಣಿಕೆ ಮೆರವಣಿಗೆಯು ಅಲಂಗಾರು ಮುಖ್ಯತಾಣದಿಂದ ಪುಣ್ಯಕ್ಷೇತ್ರದವರೆಗೆ ಸಾಗಲಿದೆ. ಜ.14, 15ರಂದು ಬಲಿಪೂಜೆ ನೆರವೇರಲಿದೆ. ಜ.15ರಂದು ಸಂಜೆ 5ಕ್ಕೆ ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ನೇತೃತ್ವದಲ್ಲಿ ವಿಶಿಷ್ಟ ಬಲಿಪೂಜೆ ನೆರವೇರಲಿದೆ. ವಂ.ವಾಲ್ಟರ್ ಡಿಮೆಲ್ಲೊ ಕನ್ನಡದಲ್ಲಿ ಪ್ರವಚನ ನೀಡುವರು ಎಂದು ಪ್ರಕಟನೆ ತಿಳಿಸಿದೆ.
Next Story





