ಧೋನಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೆ ಮನೆ ಮುಂದೆ ಧರಣಿ ಮಾಡುತ್ತಿದ್ದೆ : ಗವಾಸ್ಕರ್

ಹೊಸದಿಲ್ಲಿ, ಜ.5: ಭಾರತದ ಸೀಮಿತ ಓವರ್‌ಗಳ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿ ತಂಡದಲ್ಲಿ ಆಟಗಾರನಾಗಿ ಮುಂದುವರಿಯುವ ಮಹೇಂದ್ರ ಸಿಂಗ್ ಧೋನಿ ನಿಲುವಿನ ಬಗ್ಗೆ ಮಾಜಿ ನಾಯಕ ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.
ಧೋನಿ ಒಂದು ವೇಳೆ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ರಾಜೀನಾಮೆ ನೀಡಿದ್ದರೆ ನಾನು ಎಲ್ಲರಿಗಿಂತ ಮೊದಲು ಧೋನಿ ಮನೆಯ ಮುಂದೆ ಹಾಜರಾಗಿ ನಿರ್ಧಾರವನ್ನು ಬದಲಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದೆ ’’ಎಂದು ಗವಾಸ್ಕರ್ ಹೇಳಿದ್ದಾರೆ.
‘‘ ಧೋನಿ ಆಟಗಾರನಾಗಿ ತಂಡದಲ್ಲಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ನನಗೆ ಸಂತಸವಾಗಿದೆ. ಧೋನಿ ತಂಡದ ನಾಯಕರಾಗಿ ಇನ್ನು ಇಲ್ಲದಿದ್ದರೂ, ಅವರು ತಂಡಕ್ಕೆ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ಸಹಾಯ ಮಾಡಬಲ್ಲರು ’’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
Next Story





