ಅಮೆರಿಕದ ಸೇನೆಯಲ್ಲಿ ಪೇಟ, ಹಿಜಾಬ್, ಗಡ್ಡಕ್ಕೆ ಅನುಮತಿ

ವಾಶಿಂಗ್ಟನ್, ಜ. 5: ಅಮೆರಿಕದ ಸೇನೆಯು ನೂತನ ನಿಯಮಾವಳಿಗಳನ್ನು ಹೊರಡಿಸಿದ್ದು, ಇದರ ಪ್ರಕಾರ ಪೇಟ ಮತ್ತು ಹಿಜಾಬ್‌ಗಳನ್ನು ಧರಿಸುವವರು ಹಾಗೂ ಗಡ್ಡ ಬಿಟ್ಟವರು ಸೇನೆಗೆ ಸೇರಬಹುದಾಗಿದೆ. ಇದರೊಂದಿಗೆ ಅಮೆರಿಕದ ಸೇನೆಯ ಬಾಗಿಲನ್ನು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಭಿನ್ನ ಸಂಸ್ಕೃತಿಗಳ ಜನರಿಗೆ ತೆರೆದಂತಾಗಿದೆ.
ಸೇನಾ ಕಾರ್ಯದರ್ಶಿ ಎರಿಕ್ ಫ್ಯಾನಿಂಗ್ ಹೊರಡಿಸಿದ ನೂತನ ನಿಯಮಾವಳಿಗಳ ಪ್ರಕಾರ, ಧಾರ್ಮಿಕ ಸಂಕೇತಗಳನ್ನು ಧರಿಸುವ ಅಭ್ಯರ್ಥಿಗಳು ಬ್ರಿಗೇಡ್ ಮಟ್ಟದಲ್ಲಿ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಈ ಮೊದಲು, ಇಂಥ ಅನುಮೋದನೆಯನ್ನು ಕಾರ್ಯದರ್ಶಿ ಮಟ್ಟದಲ್ಲಿ ಪಡೆಯಬೇಕಾಗಿತ್ತು.
Next Story





