ಕೊಯ್ಲದಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ

ಉಪ್ಪಿನಂಗಡಿ, ಜ.6: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೊಯಿಲದ ಪಶು ಸಂಗೋಪನಾ ಕೇಂದ್ರದ ಜಾಗದಲ್ಲಿ ನಡೆದಿದ್ದು, ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪುತ್ತೂರಿನ ಕುರಿಯ ನಿವಾಸಿ, ಕೊಂಬೆಟ್ಟುವಿನ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಅತ್ಯಾಚಾರ ಯತ್ನಕ್ಕೊಳಗಾದವಳು. ಈಕೆ ಶುಕ್ರವಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ನಿನ್ನೆ ಮಧ್ಯಾಹ್ನ ತನ್ನ ಮೊಬೈಲ್ ಫೋನ್‌ಗೆ ವ್ಯಕ್ತಿಯೋರ್ವ ಕರೆ ಮಾಡಿದ್ದು, ಉಪ್ಪಿನಂಗಡಿಗೆ ಬರಲು ತಿಳಿಸಿದ್ದ. ಅದರಂತೆ ನಾನು ಉಪ್ಪಿನಂಗಡಿಗೆ ಬಂದಿದ್ದೆ. ಅಲ್ಲಿ ನನ್ನನ್ನು ಭೇಟಿಯಾದ ಆತ ತನ್ನ ಅಜ್ಜಿ ಮನೆ ಆತೂರಿನಲ್ಲಿದ್ದು ಅಲ್ಲಿಗೆ ಹೋಗುವ ಎಂದು ಹೇಳಿ ನನ್ನನ್ನು ಡಿಯೋ ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದಾನೆ. ದಾರಿಮಧ್ಯೆ ಸಿಗುವ ಕೊಯಿಲ ಪಶು ಸಂಗೋಪನಾ ಕೇಂದ್ರದೊಳಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





