Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೇಡಿಕೆ ಈಡೇರಿಕೆಗೆ ಒತ್ತಾಯ : ಎಂಡೋ ...

ಬೇಡಿಕೆ ಈಡೇರಿಕೆಗೆ ಒತ್ತಾಯ : ಎಂಡೋ ಸಂತ್ರಸ್ಥರ ಹೋರಾಟ ರಾಜಧಾನಿಗೆ

ವಾರ್ತಾಭಾರತಿವಾರ್ತಾಭಾರತಿ6 Jan 2017 6:30 PM IST
share
ಬೇಡಿಕೆ ಈಡೇರಿಕೆಗೆ  ಒತ್ತಾಯ : ಎಂಡೋ  ಸಂತ್ರಸ್ಥರ ಹೋರಾಟ ರಾಜಧಾನಿಗೆ

ಕಾಸರಗೋಡು ,ಜ.6 : ಎಂಡೋಸಲ್ಫಾನ್  ಸಂತ್ರಸ್ಥರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.  

ಸಂತ್ರಸ್ಥರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಿಲ್ಲ ಎಂದು ಆರೋಪಿಸಿ ,   ಜನವರಿ 30 ರಂದು  ಬೆಳಿಗ್ಗೆ 10ಗಂಟೆಗೆ  ಎಂಡೋಸಲ್ಫಾನ ಸಂತ್ರಸ್ತರು ಮತ್ತು ಕುಟುಂಬಸ್ಥರು  ತಿರುವನಂತಪುರದ ರಾಜಭವನ ಮುಂಭಾಗದಲ್ಲಿ  ಜಾಥಾ ಮತ್ತು ಸತ್ಯಾಗ್ರಹ ನಡೆಸುವ ಮೂಲಕ ಮತ್ತೆ ಹೋರಾಟಕ್ಕಿಳಿಯಲಿದ್ದಾರೆ.

ಹೋರಾಟವನ್ನು ರಾಜಧಾನಿ ತಿರುವನಂತಪುರಕ್ಕೆ  ವಿಸ್ತರಿಸಲು ತೀರ್ಮಾನಿಸಿದ್ದು , ರಾಜಭವನ್ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಿದ್ದಾರೆ.

ಸಂತ್ರಸ್ಥರಿಗೆ ಲಭಿಸಬೇಕಾದ ಸವಲತ್ತು ಗಳು ಕೈ ತಪ್ಪಿ ಹೋಗುತ್ತಿದ್ದು , ಅಧಿಕಾರಿಗಳು ಈ ನಿಟ್ಟಿನಲ್ಲಿ ವಿಫಲಗೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಸಂತ್ರಸ್ಥರು ಹಲವು ನಿರೀಕ್ಷೆಗಳನ್ನು  ಇಟ್ಟಿದ್ದರು. ಆದರೆ ಎಂಟು  ತಿಂಗಳು ಕಳೆದರೂ ಬೇಡಿಕೆ ಈಡೇರಿಸಲು ಸರಕಾರ ಮುತುವರ್ಜಿ  ವಹಿಸುತ್ತಿಲ್ಲ  ಎಂದು ಸಂತ್ರಸ್ಥರ ಆರೋಪವಾಗಿದೆ.

ಚಿಕಿತ್ಸಾ ವೆಚ್ಚ ಮತ್ತು ಸವಲತ್ತು ಮೊಟಕುಗೊಂಡ ಹಿನ್ನಲೆಯಲ್ಲಿ  ನವಂಬರ್ ತಿಂಗಳಲ್ಲಿ  ಇಬ್ಬರು ಸಂತ್ರಸ್ಥರು  ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾಲ ಮಾಡಿ ಚಿಕಿತ್ಸಾ ವೆಚ್ಚ ಭರಿಸಿದ್ದರು. ಆದರೆ ಸರಕಾರದಿಂದ ಅನುದಾನ ಲಭಿಸದ  ಹಿನ್ನಲೆಯಲ್ಲಿ ಬೇಸತ್ತು  ಆತ್ಮಹತ್ಯೆಗೆ ಶರಣಾಗಿದ್ದರು.

ಸಂತ್ರಸ್ಥರಿಗೆ ಲಭಿಸಬೇಕಾದ ಸವಲತ್ತು ಲಭಿಸುತ್ತಿಲ್ಲ.   ಎಂಡೋಸಲ್ಫಾನ್  ಸಂತ್ರಸ್ತರನ್ನು ಪಾಲನೆ ಮಾಡುವವರಿಗೆ   ಆಶಾಕಿರಣ್ ಎಂಬ ಯೋಜನೆಯಡಿ ಮಾಶಾಸನ  ಲಭಿಸುತ್ತಿತ್ತು . ಆದರೆ ಈಗಲಭಿಸದ ಸ್ಥಿತಿ ಉಂಟಾಗಿದೆ.

ಇದು ಮಾತ್ರವಲ್ಲ ಉಚಿತ ಪಡಿತರ ಸಾಮಾಗ್ರಿ  ಎಂಡೋಸಲ್ಫಾನ್ ಸಂತ್ರಸ್ಥರಿಗೆ ಲಭಿಸುತ್ತಿಲ್ಲ . ಹೊಸ ಪಡಿತರ ಚೀಟಿಯ ಗೊಂದಲ ಇದಕ್ಕೆ ಕಾರಣವಾಗಿದ್ದು , ಇದರಿಂದ ಎಲ್ಲಾ ಸಂತ್ರಸ್ತರನ್ನು ಬಿಪಿಎಲ್ ( ಆದ್ಯತಾ )  ಪಟ್ಟಿಗೆ ಸೇರ್ಪಡೆಗೊಳಿಸುವಂತೆ  ಸಂತ್ರಸ್ಥರು  ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ 3054 ಮಂದಿ ಎಂಡೋ  ಸಂತ್ರಸ್ಥರಿದ್ದು , ಪಡಿತರ ಚೀಟಿ ನವೀಕರಣ ಸಂದರ್ಭದಲ್ಲಿ  ಎಪಿಎಲ್  ಪಡಿತರ ಚೀಟಿದಾರರು ಎ ಪಿ ಎಲ್  ಪಟ್ಟಿಗೆ ಸೇರ್ಪಡೆಗೊಳ್ಳುವಂತಾಗಿದೆ.

ಇದರಿಂದ ಹಲವಾರು ಸವಲತ್ತುಗಳಿಂದ ಸಂತ್ರಸ್ಥರು ವಂಚಿತರಾಗುತ್ತಿದ್ದು, ಹೋರಾಟವನ್ನು ರಾಜಧಾನಿಗೆ ವಿಸ್ತರಿಸಲು ತೀರ್ಮಾನಿಸಿದ್ದಾರೆ . 

ಎಂಡೋ ಸೆಲ್ ಮರು ಅಸ್ತಿತ್ವಕ್ಕೆ 

ಒಂದು ವರ್ಷದಿಂದ ಸ್ಥಗಿತಗೊಂಡಿದ್ದ  ಎಂಡೋಸಲ್ಫಾನ್ ಸೆಲ್    ರಾಜ್ಯ ಕಂದಾಯ ಸಚಿವ  ಇ. ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ಮರುಜೀವ ಪಡೆದಿದೆ.  ಜಿಲ್ಲಾಧಿಕಾರಿ ಕೆ . ಜೀವನ್ ಬಾಬು  ಸೆಲ್ನ ಸಂಚಾಲಕರಾಗಿದ್ದಾರೆ.  

ಎಂ . ರಾಜಗೋಪಾಲ್,  ಪಿ . ಬಿ ಅಬ್ದುಕ್ ರಜಾಕ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ . ಜಿ ಸಿ ಬಷೀರ್ , ಬದಿಯಡ್ಕ , ಬೆಳ್ಳೂರು , ಎಣ್ಮಕಜೆ , ಕಾರಡ್ಕ , ಮುಳಿಯಾರ್ ,  ಕುಂಬ್ಡಾಜೆ,  ಅಜನೂರು , ಕಲ್ಲಾರೆ , ಪನತ್ತಡಿ ,  ಕಯ್ಯೂರು - ಚಿಮೇನಿ,  ಪುಲ್ಲೂರು - ಪೆರಿಯ ಮೊದಲಾದ ಎಂಡೋ ಸಂತ್ರಸ್ಥ ವಲಯದ  ಅಧ್ಯಕ್ಷರು, ಮಾಜಿ ಶಾಸಕರಾದ  ಚೆರ್ಕಳಂ ಅಬ್ದುಲ್ಲ, ಸಿ . ಟಿ ಆಹಮ್ಮದಾಲಿ , ಸಿ. ಎಚ್  ಕುಞ೦ಬು, ಹೆಚ್ಚುವರಿ ದಂಡಾಧಿಕಾರಿ ಸೆಲ್ ಸದಸ್ಯರಾಗಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X