ಉಡುಪಿ : ಹಜ್‌ಯಾತ್ರಿಗಳಿಂದ ಅರ್ಜಿ ಆಹ್ವಾನ
ಉಡುಪಿ, ಜ.6: 2017-18ನೆ ಸಾಲಿನ ಹಜ್‌ಯಾತ್ರೆ ಕೈಗೊಳ್ಳುವ ಯಾತ್ರಿಗಳು ಅರ್ಜಿ ಫಾರಂಗಳನ್ನು ಈ ಕೆಳಕಂಡ ವಿಳಾಸದಿಂದ ಪಡೆದು ಕೊಳ್ಳುವಂತೆ ಸೂಚಿಸಲಾಗಿದೆ.
ಉಡುಪಿ ಜಾಮೀಯ ಮಸೀದಿಯಲ್ಲಿ ಕಾರ್ಯದರ್ಶಿ ಖಲೀಲ್ ಅಹ್ಮದ್, ಉಡುಪಿ ಜಮಾಅತೆ ಇಸ್ಲಾಮೀ ಹಿಂದ್ ಕಚೇರಿಯಲ್ಲಿ ಮುಹಮ್ಮದ್ ಮರಕಡ, ಕಾಪುವಿನಲ್ಲಿ ಅಮೀರ್ ಹಂಝಾ, ಕಾರ್ಕಳದಲ್ಲಿ ಅಶ್ಪಾಕ್‌ಅಹ್ಮದ್, ಕುಂದಾಪುರ ಜಾಮೀಯ ಮಸೀದಿಯಲ್ಲಿ ಕಾರ್ಯದರ್ಶಿ ಅಲ್ತಾಫ್ ಖುರೇಷಿ ಅವರಲ್ಲಿ ಅರ್ಜಿಗಳನ್ನು ಪಡೆಯಬಹುದು.
ಅರ್ಜಿ ಫಾರಂ ಜೊತೆ ಪಾಸ್‌ಪೋರ್ಟ್ ಅಳತೆಯ ಬಳಿ ಬ್ಯಾಕ್‌ಗ್ರೌಂಡ್ ಕಲರ್ ಫೋಟೋ, ಸ್ವಯಂ ದೃಢೀಕೃತ ಪತ್ರ, ಕ್ಯಾನ್ಸೆಲ್ಡ್ ಚೆಕ್ ಅಥವಾ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪಾಸ್‌ಪೋರ್ಟ್ ಪ್ರತಿಯನ್ನು ಸಲ್ಲಿಸಬೇಕು. ನೋಂದಣಿ ಶುಲ್ಕ 300ರೂ.ನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಗಳಲ್ಲಿ ಜಮಾ ಮಾಡಬಹುದು.
70ವರ್ಷ ಮೇಲ್ಪಟ್ಟ ವಯಸ್ಸಿನ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಹಾಗೂ ಸತತ ಮೂರು ಬಾರಿ ಅರ್ಜಿ ಹಾಕಿ ನಾಲ್ಕನೆ ಬಾರಿ ಹೋಗಲು ಬಯಸುವ ಯಾತ್ರಿಗಳಿಗೆ ನೇರ ಆಯ್ಕೆ ಮಾಡಲಾಗುವುದು.
ಭರ್ತಿ ಮಾಡಿದ ಅರ್ಜಿಯನ್ನು ಜ.24ರೊಳಗೆ ನ್ಯೂ ಚಿಲ್ಲಿಸ್ ರೆಸ್ಟೋರೆಂಟ್, ಬೀಚ್ ರಸ್ತೆ, ಮಲ್ಪೆ ಇಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-9945565905ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.





