ಉಳ್ಳಾಲ ದರ್ಗಾ ಸಮಿತಿ ವತಿಯಿಂದ ಹಜ್ ಫಾರಮ್ ಬಿಡುಗಡೆ

ಉಳ್ಳಾಲ, ಜ.6 : 2017ನೇ ಅವಧಿಯ ಹಜ್ ಯಾತ್ರೆ ಕೈಗೊಳ್ಳುವವರಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಬಂದ ಹಜ್ ಫಾರಮ್ ವಿತರಣಾ ಕಾರ್ಯಕ್ರಮವು ಉಳ್ಳಾಲ ದರ್ಗಾ ಸಮಿತಿಯ ವತಿಯಿಂದ ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ ಜರುಗಿತು.
ಹಜ್ ಯಾತ್ರೆ ಕೈಗೊಳ್ಳಲು ಇಚ್ಚಿಸುವರಿಗೆ ಉಚಿತ ಹಜ್ ಫಾರಮ್ ಮತ್ತು ಸಾರ್ವಜನಿಕ ಮಾಹಿತಿ ನೀಡಲಾಗುವುದೆಂದು ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಉಳ್ಳಾಲ್‌ರವರು ತಿಳಿಸಿದರು.
ದರ್ಗಾ ಉಪಾಧ್ಯಕ್ಷ ಯು.ಕೆ ಮೋನು, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಅಡಿಟರ್ ಇಲ್ಯಾಸ್ ಯು.ಟಿ, ಜತೆ ಕಾರ್ಯದರ್ಶಿ ನೌಷದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಸದಸ್ಯರಾದ ಮುಹಮ್ಮದ್ ಹಾಜಿ, ಹಾಜಿ ಇಬ್ರಾಹೀಮ್ ಉಳ್ಳಾಲಬೈಲು, ಆಸಿಫ್ ಅಬ್ದುಲ್ಲ, ಅದ್ದ ಕೋಟೆಪುರ, ಹಮ್ಮಬ್ಬ ಕೋಟೆಪುರ, ಹಮೀದ್ ಕಲ್ಲಾಪು, ಶಾಹುಲ್ ಹಮೀದ್ ತಂಙಳ್, ಮಹ್ಮೂದ್ ಅಳೇಕಲ, ಮಯ್ಯದ್ದಿ ಕೋಡಿ, ಮುಹಿಯದ್ದೀನ್ ಬೊಟ್ಟು, ಯು.ಪಿ ಅಬ್ದುಲ್ ಹಮೀದ್ ಅಳೇಕಲ, ಹಾಜಿ ಯು.ಕೆ ಇಬ್ರಾಹೀಮ್ ಅಳೇಕಲ ಮೇನೇಜರ್ ಯು.ಎಮ್ ಯೂಸುಫ್, ಕಾರ್ಯನಿರ್ವಹಣಾಧಿಕಾರಿ ಸಯ್ಯಿದ್ ಶಿಹಾಬ್ ಉಪಸ್ಥಿತರಿದ್ದರು.





