ರೈಲಿನಲ್ಲಿ ಸೊತ್ತು ಕಳವು: ಶಾಸಕರ ದೂರು
ಪಶ್ಚಿಮಬಂಗಾಲ, ಜ.6: ತಾವು ಸೀಲ್ದಾ- ಮಾಲ್ದಾ ಟೌನ್ ಗೋವರ್ ಎಕ್ಸ್‌ಪ್ರೆಸ್‌ನ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ತಮ್ಮ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಇಬ್ಬರು ಕಾಂಗ್ರೆಸ್ ಶಾಸಕರು ದೂರು ನೀಡಿದ್ದಾರೆ.
ಎಸಿ ಫಸ್ಟ್‌ಕ್ಲಾಸ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ಶಾಸಕ ಆಸಿಫ್ ಮೆಹ್‌ಬೂಬ್ ಅವರು ತಮ್ಮ ಟ್ಯಾಬ್ ಕಳವಾಗಿದೆ ಎಂದು ದೂರು ನೀಡಿದ್ದರೆ, ಎಸಿ ಟು ಟೈರ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೋರ್ವ ಕಾಂಗ್ರೆಸ್ ಶಾಸಕ ಸಮರ್ ಮುಖರ್ಜಿ ತನ್ನ ಮತದಾರರ ಗುರುತು ಚೀಟಿ, ಎಸ್‌ಬಿಐ ಪಾಸ್ ಪುಸ್ತಕ ಮತ್ತು ನಗದು ಕಳವಾಗಿದೆ ಎಂದು ದೂರು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Next Story







