ಕರ್ಣಾಟಕ ಬ್ಯಾಂಕ್ ‘ಕೆಬಿಎಲ್ ಮೊಬೈಲ್’ ಸುಧಾರಿತ ವ್ಯವಸ್ಥೆಗೆ ಚಾಲನೆ

ಮಂಗಳೂರು, ಜ.6: ದಿನದ 24 ಗಂಟೆಯೂ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್ ಆರಂಭಿಸಿರುವ ಮೊಬೈಲ್ ಆ್ಯಪ್ ‘ಕೆಬಿಎಲ್ ಮೊಬೈಲ್’ನ ಸುಧಾರಿತ ವ್ಯವಸ್ಥೆಗೆೆ ಇಂದಿಲ್ಲಿ ಚಾಲನೆ ನೀಡಲಾಯಿತು.
ಯಾವುದೇ ವೇಳೆಯಲ್ಲಿ ಮತ್ತು ಯಾವುದೇ ಸ್ಥಳದಿಂದ ಮೊಬೈಲ್ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸುವ ಅತ್ಯಂತ ಸರಳ ಮತ್ತು ಸುರಕ್ಷಿತ ವ್ಯವಸ್ಥೆ ಇದಾಗಿದೆ. ಈ ಹೊಸ ಆ್ಯಪ್‌ನಲ್ಲಿ - ನಿಧಿ ವರ್ಗಾವಣೆ- ಬ್ಯಾಂಕ್‌ನ ಶಾಖೆಗಳ ನಡುವೆ ಹಾಗೂ ಬ್ಯಾಂಕಿನಿಂ ಬ್ಯಾಂಕ್ ಗೆ. ಐಎಂಪಿಎಸ್ ವರ್ಗಾವಣೆ, ಎನ್‌ಇಎಫ್‌ಟಿ ವರ್ಗಾವಣೆ, ಮೊಬೈಲ್/ಡಿಟಿಎಚ್ ರಿಚಾರ್ಜ್, ಬಿಲ್‌ಗಳ ಪಾವತಿ, ಬ್ಯಾಲೆನ್ಸ್ ಮಾಹಿತಿ, ಕಿರು ಜಮಾಖರ್ಚು ತಖ್ತೆ (ಸ್ಟೇಟ್‌ಮೆಂಟ್) ಹಾಗೂ ಇತರ ಸೇವೆಗಳು ಗ್ರಾಹಕರಿಗೆ ಲಭ್ಯವಿರುತ್ತವೆ . ಆಂಡ್ರಾಯ್ಡಾ, ವಿಂಡೋಸ್ (ಮೈಕ್ರೋಸಾಫ್ಟ್), ಐಒಎಸ್ ಪ್ಲಾಟ್‌ಫಾರಂಗಳಲ್ಲಿ ಈ ಆ್ಯಪ್ ಲಭ್ಯವಿದ್ದು ಇದನ್ನು ಗ್ರಾಹಕರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಬ್ಯಾಂಕಿನ ಎಂಡಿ ಮತ್ತು ಸಿಇಒ ಪಿ.ಜಯರಾಮ ಭಟ್ ತಿಳಿಸಿದ್ದಾರೆ.
ಬ್ಯಾಂಕಿನ ಗ್ರಾಹಕರಲ್ಲಿ ಈ ಆ್ಯಪ್ ಜನಪ್ರಿಯವಾಗಿದೆ ಎಂದು ಐ- ಎಕ್ಸೀಡ್ ಟೆಕ್ನಾಲಜಿ ಸೊಲ್ಯೂಷನ್ಸ್‌ನ ನಿರ್ದೇಶಕ ಎಸ್.ಸುಂದರರಾಜನ್ ತಿಳಿಸಿದ್ದಾರೆ.
ಮುಖ್ಯ ಪ್ರಧಾನ ವ್ಯವಸ್ಥಾಪಕ ಮಹಾಬಲೇಶ್ವರ ಎಂಎಸ್, ಜಿಎಂಗಳಾದ ಎನ್.ಉಪೇಂದ್ರ ಪ್ರಭು, ಡಾ. ಮೀರಾ ಅರಾನ್ಹಾ, ರಘುರಾಮ, ರಾಘವೇಂದ್ರ ಭಟ್ ಎಂ, ಚಂದ್ರಶೇಖರ್ ರಾವ್ ಬಿ, ಸುಭಾಷ್ಚಂದ್ರ ಪುರಾಣಿಕ್, ಡಿಜಿಎಂಗಳಾದ ವಿಜಯಶಂಕರ ರೈ ಹಾಗೂ ರವಿಶಂಕರ್, ಎಜಿಎಂ ಶ್ರೀಮತಿ ರೇಣುಕಾ ಎನ್.ಬಂಗೇರಾ, ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ದೇಶಪಾಂಡೆ, ಶರತ್‌ಚಂದ್ರ ಹೊಳ್ಳ , ಪ್ರಶಾಂತ್ ಜಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.







