ಕಾಪು ತಾಲ್ಲೂಕು ಹೋರಾಟ: ಎರಡು ದಿನಗಳ ಕಾಲ್ನಡಿಗೆ ಜಾಥಾ
ಪಡುಬಿದ್ರಿ, ಜ.6 : ಕಾಪು ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಕಾಪು ತಾಲ್ಲೂಕು ರಚನೆಯ ಅರಿವು ಮೂಡಿಸಲು ಒತ್ತಾಯಿಸಿ ಜನವರಿ 7ಮತ್ತು 8ರಂದು ಬೃಹತ್ ಕಾಲ್ಗಡಿಗೆ ಜಾಥಾ ಏರ್ಪಡಿಸಲಾಗಿದೆ.
7ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಹೆಜಮಾಡಿಯಿಂದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಗುವುದು. ಹೆಜಮಾಡಿಯಿಂದ ಆರಂಭವಾಗುವ ಜಾಥಾವು ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಕಾಪುವರೆಗೆ ನಡೆಯಲಿದೆ. 8ರಂದು ಕಾಪುವಿನಿಂದ ಆರಂಭವಾಗುವ ಜಾಥಾವು ಕಟಪಾಡಿ ಮೂಲಕ ಉಡುಪಿ ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.
ಸಮಾಜ ರತ್ನ ಲೀಲಾಧರ ಶೆಟ್ಟಿ ನೇತೃತ್ವದಲ್ಲಿ ನಡೆಯಲಿರುವ ಕಾಪು ತಾಲ್ಲೂಕು ಹೋರಾಟದ ಜಾಥಾದಲ್ಲಿ ಶಾಸಕ ವಿನಯಕುಮಾರ್ ಸೊರಕೆ, ವಿವಿಧ ಪಕ್ಷಗಳ, ಧರ್ಮಗಳ ಮುಖಂಡರು ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





