ಉಡುಪಿ : ಎಪಿಎಂಸಿ ಚುನಾವಣೆಗೆ ಸಿದ್ಧರಾಗಲು ಜಿಲ್ಲಾಧಿಕಾರಿ ಕರೆ
ಉಡುಪಿ, ಜ.6: ಉಡುಪಿ ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಜ.12ರಂದು ಚುನಾವಣೆ ನಡೆಯಲಿದ್ದು, ಚುನಾವಣೆ ಶಾಂತಿಯುತ ಹಾಗೂ ನ್ಯಾಯಯುತವಾಗಿ ನಡೆಸುವ ಸಂಬಂಧ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಟಿ ವೆಂಕಟೇಶ್ ನಡೆಸಿದರು.
ಸಭೆಯಲ್ಲಿ ಚುನಾವಣೆಯ ಪೂರ್ವಭಾವಿ ಕೈಗೊಳ್ಳಬೇಕಾದ ಸಿದ್ಧತೆ ಹಾಗೂ ಈವರೆಗೆ ನಡೆದಿರುವ ಅವಿರೋಧ ಆಯ್ಕೆ ಮತ್ತು ಇತರ ಪ್ರಕ್ರಿಯೆಗಳ ಸಮಗ್ರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರಲ್ಲದೆ ನಡೆಸಿರುವ ಪೂರ್ವತಯಾರಿಗಳ ಪರಿಶೀಲನೆ ನಡೆಸಿದರು.
ಮತಪಟ್ಟಿಗಳ ವಿವರ, ಮತದಾನ ಕೇಂದ್ರ, ವಾಹನ ವ್ಯವಸ್ಥೆ, ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ತರಬೇತಿ ಮುಂತಾದ ವಿಷಯಗಳ ಬಗ್ಗೆ ಅವಲೋಕಿಸಿದರು. ಮತಪಟ್ಟಿಗಳ ವಿವರ, ಮತದಾನ ಕೇಂದ್ರ, ವಾಹನ ವ್ಯವಸ್ಥೆ, ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ತರಬೇತಿ ಮುಂತಾದ ವಿಷಯಗಳ ಬಗ್ಗೆ ಅವಲೋಕಿಸಿದರು.
ಜಿಲ್ಲೆಯಲ್ಲಿ ಉಡುಪಿ ತಾಲೂಕಿನಲ್ಲಿ 127 ಮತಗಟ್ಟೆ, ಕುಂದಾಪುರದಲ್ಲಿ 80, ಕಾರ್ಕಳದಲ್ಲಿ 75 ಮತಗಟ್ಟೆಗಳಿವೆ. ಇದರಲ್ಲಿ ಉಡುಪಿಯಲ್ಲಿ 13 ಅತಿಸೂಕ್ಷ್ಮ, ಕುಂದಾಪುರದಲ್ಲಿ 12, ಕಾರ್ಕಳದಲ್ಲಿ 10 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದೇ ರೀತಿ ಸೂಕ್ಷ್ಮ 68, 22, 14 ಮತಗಟ್ಟೆಗಳು. ಉಡುಪಿಯಲ್ಲಿ 620 ಸಿಬ್ಬಂದಿಗಳು, ಕುಂದಾಪುರದಲ್ಲಿ 520 ಮತ್ತು ಕಾರ್ಕಳ ದಲ್ಲಿ 498 ಸಿಬ್ಬಂದಿಗಳನ್ನು ಮತಗಟ್ಟೆಗೆ ನೇಮಿಸಲಾಗಿದೆ. ಜಿ
ಲ್ಲೆಯಲ್ಲಿ ಉಡುಪಿ ತಾಲೂಕಿನಲ್ಲಿ 127 ಮತಗಟ್ಟೆ, ಕುಂದಾಪುರದಲ್ಲಿ 80, ಕಾರ್ಕಳದಲ್ಲಿ 75 ಮತಗಟ್ಟೆಗಳಿವೆ. ಇದರಲ್ಲಿ ಉಡುಪಿಯಲ್ಲಿ 13 ಅತಿಸೂಕ್ಷ್ಮ, ಕುಂದಾಪುರದಲ್ಲಿ 12, ಕಾರ್ಕಳದಲ್ಲಿ 10 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದೇ ರೀತಿ ಸೂಕ್ಷ್ಮ 68, 22, 14 ಮತಗಟ್ಟೆಗಳು. ಉಡುಪಿಯಲ್ಲಿ 620 ಸಿಬ್ಬಂದಿಗಳು, ಕುಂದಾಪುರದಲ್ಲಿ 520 ಮತ್ತು ಕಾರ್ಕಳ ದಲ್ಲಿ 498 ಸಿಬ್ಬಂದಿಗಳನ್ನು ಮತಗಟ್ಟೆಗೆ ನೇಮಿಸಲಾಗಿದೆ.
ಚುನಾವಣೆಯ ಮಸ್ಟರಿಂಗ್ ಕಾರ್ಯ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ, ಕುಂದಾಪುರದ ಮಿನಿ ವಿಧಾನಸೌಧ, ತಾಲೂಕು ಕಚೇರಿ ಕಾರ್ಕಳದಲ್ಲಿ ನಡೆಯಲಿದೆ. ಡಿಮಸ್ಟರಿಂಗ್ ಸಹ ಇದೇ ಸ್ಥಳದಲ್ಲಿ ನಡೆಯಲಿದೆ. ಚುನಾವಣೆಯ ಮಸ್ಟರಿಂಗ್ ಕಾರ್ಯ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ, ಕುಂದಾಪುರದ ಮಿನಿ ವಿಾನಸೌ, ತಾಲೂಕು ಕಚೇರಿ ಕಾರ್ಕಳದಲ್ಲಿ ನಡೆಯಲಿದೆ. ಡಿಮಸ್ಟರಿಂಗ್ ಸಹ ಇದೇ ಸ್ಥಳದಲ್ಲಿ ನಡೆಯಲಿದೆ. ಚುನಾವಣೆ ನಡೆಯುವ ಪ್ರದೇಶ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ, ಮದ್ಯಪಾನ ರಹಿತ ದಿನ ಘೋಷಣೆಯ ಬಗ್ಗೆಯೂ ಆದೇಶ ಹೊರಡಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಕಂದಾಯ ಇಲಾಖೆಯಲ್ಲಿ ಅಧೀನ ಅಧಿಕಾರಿ ಹಾಗೂ ಸಿಬ್ಬಂದಿಗೆ ರಜೆ ನೀಡದಿರುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದರು. ಚುನಾವಣೆ ನಡೆಯುವ ಪ್ರದೇಶ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ, ಮದ್ಯಪಾನ ರಹಿತ ದಿನ ಘೋಷಣೆಯ ಬಗ್ಗೆಯೂ ಆದೇಶ ಹೊರಡಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಕಂದಾಯ ಇಲಾಖೆಯಲ್ಲಿ ಅಧೀನ ಅಧಿಕಾರಿ ಹಾಗೂ ಸಿಬ್ಬಂದಿಗೆ ರಜೆ ನೀಡದಿರುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದರು.
ಚುನಾವಣೆಗೆ ಸಾಮಾನ್ಯವಾಗಿ ಚುನಾವಣಾ ಕಚೇರಿ ಘೋಷಿಸುವ ಗುರುತುಪತ್ರದೊಂದಿಗೆ ಹಾಜರಾಗಿ ಮತಹಾಕಬಹುದಾಗಿದೆ. ನಡುಬೆರಳಿಗೆ ಶಾಯಿ ಹಾಕುವ ಬಗ್ಗೆಯೂ ಸೂಚನೆಯನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಉಪನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಯೋಗೇಶ್ವರ್, ಎಲ್ಲಾ ತಹಶೀಲ್ದಾರರು ಉಪಸ್ಥಿತ ರಿದ್ದರು.







