ಗಂಜಿಮಠ: 10ರಿಂದ ಎನ್‌ಪಿಎಲ್ ಕ್ರಿಕೆಟ್ ಟೂರ್ನಿ

ಮಂಗಳೂರು, ಜ. 6: ಗಂಜಿಮಠದ ನಾರ್ಲಪದವು ಆಳ್ವಾಸ್ ಕ್ರೀಡಾಂಗಣದಲ್ಲಿ ಜ.10ರಿಂದ 15ರ ವರೆಗೆ ನೆಕ್ಸಸ್ ಪ್ರೀಮಿಯರ್ ಲೀಗ್ (ಎನ್‌ಪಿಎಲ್) ಓವರ್ ಆರ್ಮ್ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಜಿಮಠ ಗ್ರಾ.ಪಂ. ಮಂಡಲ ಪ್ರಧಾನ ಅಬ್ದುಲ್ ಮಜೀದ್ ಅವರು, ಬಂಟ್ವಾಳ-ಬಿ.ಸಿರೋಡ್, ಮೂಡಬಿದ್ರೆ, ಸುರತ್ಕಲ್ ಹಾಗೂ ಗುರುಪುರ ವಲಯದ ಸ್ಥಳೀಯ ಯುವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಗಂಜಿಮಠದ ಜಿ.ಎಂ.ಇಮ್ತಿಯಾಝ್ ಅವರ ಸಾರಥ್ಯದಲ್ಲಿ ಎನ್‌ಪಿಎಲ್ ನಡೆಯಲಿದೆ ಎಂದರು.
8 ಓವರ್‌ಗಳ ಈ ಪಂದ್ಯಾವಳಿಯಲ್ಲಿ ಪ್ರತಿದಿನ 8 ಪಂದ್ಯಾಟಗಳು ನಡೆಯಲಿವೆ. ವಿಜೇತರಿಗೆ ಪ್ರಥಮ ಬಹುಮಾನ 3,25,000 ರೂ. ನಗದು ಮತ್ತು ಫಲಕ, ದ್ವಿತೀಯ 2,25,000 ನಗದು ಮತ್ತು ಫಲಕ, ತೃತೀಯ 75,000 ನಗದು ಮತ್ತು ಫಲಕ ಹಾಗೂ ಚತುರ್ಥ ಬಹುಮಾನ 55,000 ನಗದು ಮತ್ತು ಫಲಕ ನೀಡಲಾಗುವುದು. ಅಲ್ಲದೆ, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ 7,500, ಉತ್ತಮ ದಾಂಡಿಗ ಮತ್ತು ಉತ್ತಮ ಬೌಲರ್‌ಗೆ ತಲಾ 5,000 ರೂ. ನೀಡಿ ಪುರಸ್ಕರಿಸಲಾಗುವುದು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಮುಖ್ಯ ಸಚೇತಕ ಐವನ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೊದಿನ್ ಬಾವ, ಅಭಯಚಂದ್ರ ಜೈನ್, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಕೃಷ್ಣ ಜೆ.ಪಾಲೆಮಾರ್, ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಹಮ್ಮದ್ ಕುಂಞಿ, ಜಿ.ಪಂ. ಹಾಗೂ ತಾ.ಪಂ. ಸದಸ್ಯರು, ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಜೀದ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಎಂ.ಇಮ್ತಿಯಾಝ್, ನೌಶಾದ್ ಹಾಜಿ, ಎ.ಕೆ.ಅಶ್ರಫ್, ಎಂ.ಎ.ರಝಾಕ್, ರಫೀಕ್, ಸಾಕಿಬ್ ಮೊದಲಾದವರು ಉಪಸ್ಥಿತರಿದ್ದರು.







