ಬೆಂಗಳೂರಿನಲ್ಲಿ 'ಭಾರತೀಯ ಪ್ರವಾಸಿ ದಿವಸ್'ಗೆ ಚಾಲನೆ

ಬೆಂಗಳೂರು, ಜ.7: ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೂರು ದಿನಗಳ 14ನೆ 'ಭಾರತೀಯ ಪ್ರವಾಸಿ ದಿವಸ್'ಗೆ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು.
ಕೇಂದ್ರ ಯುವಜನ ಮತ್ತು ಕ್ರೀಡಾ ಖಾತೆ ಸಚಿವ ವಿಜಯ್ ಗೋಯಲ್ ಚಾಲನೆ ನೀಡಿದರು. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ , ಕರ್ನಾಟಕದ ಕೈಗಾರಿಕಾ ಸಚಿವ ಆರ‍್.ವಿ.ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.
ಸಮಾವೇಶದ ಅಂಗವಾಗಿ ಹದಿನಾಲ್ಕು ರಾಜ್ಯಗಳ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ.
Next Story





