3 ಟೆಸ್ಟ್ ಗಳ ಸರಣಿಯಲ್ಲಿ ಆಸ್ಟ್ರೇಲಿಯ ಕ್ಲೀನ್ ಸ್ವೀಪ್
ಮೂರನೆ ಟೆಸ್ಟ್ ನಲ್ಲಿ ಪಾಕ್ ವಿರುದ್ಧ 220 ರನ್ ಗಳ ಜಯ

ಸಿಡ್ನಿ, ಜ.7 : ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆದ ಮೂರನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ತ್ರೇಲಿಯ 220 ರನ್ ಗಳ ಜಯ ಗಳಿಸಿದ್ದು, 3 ಟೆಸ್ಟ್ ಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಟೆಸ್ಟ್ ನ ಅಂತಿಮ ದಿನವಾಗಿರುವ ಇಂದು ಎರಡನೆ ಇನಿಂಗ್ಸ್ ನಲ್ಲಿ ಗೆಲುವಿಗೆ 465 ರನ್ ಗಳ ಸವಾಲು ಪಡೆದಿದ್ದ ಪಾಕಿಸ್ತಾನ ತಂಡ 80.2 ಓವರ್ ಗಳಲ್ಲಿ 244 ರನ್ ಗಳಿಗೆ ಆಲೌಟಾಗಿದೆ.
ಆಸ್ಟ್ರೇಲಿಯದ ಹೇಝಲ್ ವುಡ್( 29ಕ್ಕೆ 3), ಒ ಕೇಫೆ (53ಕ್ಕೆ 3), ಲಿನ್ (100ಕ್ಕೆ 2) ಮತ್ತು (57ಕ್ಕೆ 1) ದಾಳಿಯ ಮುಂದೆ ರನ್ ಗಳಿಸಲು ಪರದಾಡಿದ ಪಾಕ್ ನ ಬ್ಯಾಟ್ಸ್ ಮನ್ ಗಳ ಪೈಕಿ ಸರ್ಫರಾಝ್ (72) ಇವರನ್ನು ಹೊರತುಪಡಿಸಿದರೆ ಇತರ ಯಾರಿಗೂ ಅರ್ಧ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಮತ್ತು ನಾಯಕ ಸ್ಟೀವ್ ಸ್ಮಿತ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Next Story





