ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಪ್ರಕರಣ: ಪ್ರವೀಣ್ ಖಾಂಡ್ಯ ಸಿಐಡಿ ವಶಕ್ಕೆ

ಚಿಕ್ಕಮಗಳೂರು, ಜ.7: ಡಿವೈಎಸ್ಪಿ ಕಲ್ಲಪ್ಪಹಂಡೀಭಾಗ್ ಆತ್ಮಹತ್ಯೆ ಹಾಗೂ ತೇಜಸ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯನನ್ನು ನ್ಯಾಯಾಲಯವು ಸಿಐಡಿ ವಶಕ್ಕೆ ಒಪ್ಪಿಸಿದೆ. ಇದೀಗ ಸಿಐಡಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಖಾಂಡ್ಯನನ್ನು ವಿಚಾರಣೆಗಾಗಿ ಸಿಐಡಿ ಡಿವೈಎಸ್ಪಿಧರಣೇಶ್ ನೇತೃತ್ವದ ತಂಡವು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಕರೆದೊಯ್ದಿದೆ.
2016 ಜುಲೈ 4ರಂದು ಖಾಂಡ್ಯ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಜು.5ರಂದು ಡಿವೈಎಸ್ಪಿಕಲ್ಲಪ್ಪಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ ಪ್ರವೀಣ್ ಖಾಂಡ್ಯ ಆ ಬಳಿಕ ಐದು ತಿಂಗಳುಗಳ ಕಾಲ ತಲೆ ಮರೆಸಿಕೊಂಡಿದ್ದನು. ಈ ನಡುವೆ ಆತ ಹೈಕೋಟ್‌ನಿಂದ ಜಾಮೀನು ಪಡೆದಿದ್ದ. ಕಳೆದೊಂದು ವಾರದ ಹಿಂದೆ ಬೇರೆ ಯಾವುದೋ ಪ್ರಕರಣದಲ್ಲಿ ಪೊಲೀಸರು ಖಾಂಡ್ಯನನ್ನನು ಬಂಧಿಸಿದ್ದರು.
Next Story





