ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ವೈದ್ಯರ ಪ್ರತಿಭಟನೆ
.gif)
ಮಂಗಳೂರು, ಜ.7: ಕರ್ತವ್ಯ ನಿರತ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿಯ ಹಲ್ಲೆ ನಡೆಸಿದ ಉತ್ತರ ಕನ್ನಡ ಸಂಸದ ಅನಂತಕುಮಾರ್‌ರ ಕೃತ್ಯವನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ಇದರ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅತ್ತಾವರ ಐಎಂಎ ಹಾಲ್‌ನಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯ ವರೆಗೆ ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಡಾ.ರಾಘವೇಂದ್ರ ಭಟ್, ಮುಖಂಡರಾದ ಡಾ.ಶಾಂತರಾಮ ಶೆಟ್ಟಿ, ಡಾ.ಅಣ್ಣಯ್ಯ ಕುಲಾಲ್, ಡಾ.ಕೆ.ಆರ್.ಕಾಮತ್, ಡಾ.ದಿವಾಕರ್, ಡಾ.ಪ್ರಕಾಶ್ಚಂದ್ರ ಮತ್ತಿತತರರು ಪಾಲ್ಗೊಂಡಿದ್ದರು.
ಹಲ್ಲೆ ಆರೋಪಿ ಸಂಸದರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ವೈದ್ಯರು ಆಗ್ರಹಿಸಿದರು.
Next Story





