15 ಲ.ರೂ ಮೌಲ್ಯದ ನಿಷೇಧಿತ ಅಲ್‌ಪ್ರಜೋಲಂ ವಶ,ಇಬ್ಬರ ಸೆರೆ

ಥಾಣೆ,ಜ.7: ಥಾಣೆ ಜಿಲ್ಲೆಯ ಅಂಬರನಾಥ್‌ನಲ್ಲಿ 15 ಲಕ್ಷ ರೂ.ಮೌಲ್ಯದ ಸುಮಾರು ಆರು ಕೆ.ಜಿ.ನಿಷೇಧಿತ ದ್ರವ್ಯ ಅಲ್‌ಪ್ರಜೋಲಂ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮಾಹಿತಿಯ ಮೇರೆಗೆ ಅಂಬರನಾಥ್‌ನ ಬುವಾಪಾಡಾ ಎಂಬಲ್ಲಿ ದಾಳಿ ನಡೆಸಿದ ಪೊಲೀಸರು ತಳಮಳ ನಿವಾರಕವಾಗಿರುವ,ಮಾದಕ ದ್ರವ್ಯ ಎಂದೇ ಪರಿಗಣಿಸಲಾಗಿರುವ ಈ ಔಷಧಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದರು. ಅಮಿತ್ ಭೀಮರಾವ್ ಗೋಡಬೋಲೆ ಮತ್ತು ಲವಕುಶ ಪಪ್ಪು ಗುಪ್ತಾ ಬಂಧಿತ ಅರೋಪಿಗಳಾಗಿದ್ದಾರೆ. ಈ ದ್ರವ್ಯವನ್ನು ಮಾರಾಟಕ್ಕಾಗಿ ತಂದಿದ್ದಾಗಿ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ. ಪೊಲೀಸರೀಗ ಈ ನಿಷೇಧಿತ ದ್ರವ್ಯದ ಮೂಲಕ್ಕಾಗಿ ಜಾಲಾಡುತ್ತಿದ್ದಾರೆ.
ಮಾನಸಿಕ ಉದ್ವೇಗ,ತಳಮಳ,ಆತಂಕಗಳನ್ನು ನಿವಾರಿಸಲು ಶಮನಕಾರಿಯಾಗಿ ಅಲ್‌ಪ್ರಜೋಲಂ ಅನ್ನು ಬಳಸಲಾಗುತ್ತಿದ್ದು, ಮಾದಕ ದ್ರವ್ಯದ ಗುಣವನ್ನು ಹೊಂದಿದೆ.
Next Story





