ಸುಳ್ಯ : ಕರ್ತವ್ಯನಿರತ ವೈದ್ಯರ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆ

ಸುಳ್ಯ, ಜ.7 : ಹಾಸನ ಹಾಗೂ ಶಿರಸಿಯಲ್ಲಿ ರೋಗಿಗಳು ಕರ್ತವ್ಯ ನಿರತ ವೈದ್ಯರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಐಎಂಎ ಸುಳ್ಯ ಘಟಕದ ವತಿಯಿಂದ ಸುಳ್ಯ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆ ನಡೆಯಿತು.
ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತ ನಿರ್ದೇಶಕ ಡಾ.ಕೆ.ವಿ.ಚಿದಾನಂದ ಮಾತನಾಡಿ, ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ, ದೌರ್ಜನ್ಯವನ್ನು ರೋಗಿಗಳು ನಡೆಸಿದರೆ ವೈದ್ಯರು ಹಳ್ಳಿಗಳಿಗೆ ಹೋಗಿ ಸೇವೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡಬೇಕೆಂದು ಸರಕಾರವೇ ಆದೇಶ ಮಾಡುತ್ತದೆ. ಆದರೆ ರೋಗಿಗಳು ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿ ಅವರ ಆತ್ಮಸ್ಥೈರ್ಯವನ್ನು ಕುಂದಿಸುತ್ತಾರಾದರೆ ಕರ್ತವ್ಯ ಮಾಡುವುದು ಕಷ್ಟ ಸಾಧ್ಯವಾದೀತು. ಆದ್ದರಿಂದ ಹಾಸನದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ರೋಗಿಗಳು ಹಾಗೂ ಶಿರಸಿಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆಯವರು ಹಲ್ಲೆ ನಡೆಸಿದ ಕ್ರಮವನ್ನು ನಮ್ಮ ಸಂಘವು ಖಂಡಿಸುತ್ತದೆ ಹಾಗು ಅವರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ ಎಂದು ಅವರು ಹೇಳಿದರು.
ಬಳಿಕ ಉಪತಹಶೀಲ್ದಾರ್ ರಾಮಣ್ಣ ನಾಯ್ಕಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷೆ ಡಾ.ಸಾಯಿಗೀತಾ ಜ್ಞಾನೇಶ್, ಕಾರ್ಯದರ್ಶಿ ಡಾ.ಗೀತಾ ದೊಪ್ಪ, ಕೋಶಾಧಿಕಾರಿ ಡಾ.ನವ್ಯಾ, ವೈದ್ಯರುಗಳಾದ ಡಾ.ಕರುಣಾಕರ, ಡಾ.ಶ್ರೀ ಕೃಷ್ಣ ಭಟ್, ಡಾ.ರಾಜಾರಾಂ, ಡಾ.ವೀಣಾ, ಡಾ.ಗಣೇಶ್ ಭಟ್, ಡಾ.ರವಿಕಾಂತ್, ಡಾ.ರಂಗಯ್ಯ, ಡಾ.ಉಮಾಶಂಕರ ಬೋರ್ಕರ್, ಡಾ.ಸುಬ್ರಹ್ಮಣ್ಯ, ಡಾ.ಡಿ.ವಿ.ಲೀಲಾಧರ್, ಡಾ.ಹಿಮಕರ, ಡಾ.ರಾಮಚಂದ್ರ ಭಟ್ ಮತ್ತಿತರರಿದ್ದರು.







