ಮಂಗಳೂರು : ಜ್ಯೋತಿಷ್ಯದ ಹೆಸರಲ್ಲಿ ಲೈಂಗಿಕ ಕಿರುಕುಳ , ವಂಚನೆ

ಮಂಗಳೂರು, ಜ.7 : ಮಂಗಳೂರಿನ ಅತ್ತಾವರದಲ್ಲಿರುವ ವೈಷ್ಣವಿ ಜ್ಯೋತಿಷ್ಯಾಲಯ ನಡೆಸುತ್ತಿರುವ ರಾಮಕೃಷ್ಣ ಶರ್ಮ ಎಂಬಾತ ಜ್ಯೋತಿಷ್ಯ ಕೇಳಲು ಬಂದಸಂದರ್ಭದಲ್ಲಿ ಯುವತಿಗೆ ಬ್ರಾಹ್ಮಣನೊಂದಿಗೆ ಮಲಗಬೇಕು ಎಂದು ಹೇಳುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಖಿಲ ಭಾರತ ವಿಚಾರವಾದಿ ವೇದಿಕೆಯ ಅಧ್ಯಕ್ಷರಾಗಿರುವ ನರೇಂದ್ರನಾಯಕ್ ಅವರು ಇತ್ತೀಚೆಗೆ ಜ್ಯೋತಿಷ್ಯಾಲಯದ ವಂಚನೆಯ ಬಗ್ಗೆ ಬಯಲಿಗೆಳೆಯವ ಉದ್ದೇಶದಿಂದ ಯುವತಿಯೊಬ್ಬಳನ್ನು ತನ್ನ ಮಗಳಂತೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಜ್ಯೋತಿಷಿಯು ಆಕೆಯ ಸಂತಾನ ಭಾಗ್ಯಕ್ಕೆ 10 ಸಾವಿರ ಹಣವನ್ನು ಕೇಳಿದ್ದನು. ಇದನ್ನು ಬಯಲಿಗೆಳೆದು ವೈಷ್ಣವಿ ಜ್ಯೋತಿಷ್ಯಾಲಯದ ರಾಮಕೃಷ್ಣ ಶರ್ಮನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದರು.
ಈ ಘಟನೆ ತಿಳಿದ ನಂತರ ಯುವತಿಯೊಬ್ಬಳು ನರೇಂದ್ರ ನಾಯಕ್ ಅವರಿಗೆ ಕರೆ ಮಾಡಿ ತನಗೂ ರಾಮಕೃಷ್ಣ ಶರ್ಮ ವಂಚನೆ ಮಾಡಿರುವ ಬಗ್ಗೆ ತಿಳಿಸಿದ್ದಾಳೆ. ಈ ಬಗ್ಗೆ ಆಕೆಯೊಂದಿಗೆ ಮಾತನಾಡಿದ ನರೇಂದ್ರ ನಾಯಕ್ಅವರು ವೈಷ್ಣವಿ ಜ್ಯೋತಿಷ್ಯಾಲಯದ ರಾಮಕೃಷ್ಣ ಶರ್ಮನ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಜ್ಯೋತಿಷ್ಯ ಕೇಳಲೆಂದು ಬರುವ ಅಮಾಯಕರನ್ನು ಪೂಜೆ, ಪರಿಹಾರದ ನೆಪದಲ್ಲಿ ಹಣ ದೋಚುವುದರೊಂದಿಗೆ , ಯುವತಿಯರನ್ನು ಲೈಂಗಿಕ ಶೋಷಣೆ ಮಾಡಲು ಯತ್ನಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಯುವತಿಯು ಬ್ರಾಹ್ಮಣನ ಜೊತೆ ಮಲಗಬೇಕೆಂದು ಜ್ಯೋತಿಷಿಯುಹೇಳಿದ್ದಕ್ಕೆ ಶಾಕ್ ಗೊಳಗಾದ ಯುವತಿಯು ಬೈದು ಆಕೆ ತನ್ನ ಹಣವನ್ನುವಾಪಾಸು ನೀಡುವಂತೆ ಆಗ್ರಹಿಸಿದ್ದಾಳೆ. ಇದೀಗ ಹಣಕ್ಕಾಗಿ ಮತ್ತೆ ಜ್ಯೋತಿಷ್ಯಾಲಯಕ್ಕೆ ಬಂದಾಗ ರಾಮಕೃಷ್ಣ ಶರ್ಮ ವಂಚನೆಯಲ್ಲಿ ಬಂಧನವಾಗಿದ್ದು ತಿಳಿದಿದೆ. ಇದೀಗ ಯುವತಿ ನರೇಂದ್ರ ನಾಯಕ್ ಅವರ ಮಾರ್ಗದರ್ಶನದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ಯುವತಿಯ ಆಡಿಯೋ ಕೇಳಿ







