ಟಿಬೆಟ್‌ನಲ್ಲಿ ಚೀನಾದಿಂದ ಜಗತ್ತಿನ ಅತ್ಯಂತ ಎತ್ತರದ ಟೆಲಿಸ್ಕೋಪ್

ಬೀಜಿಂಗ್, ಜ. 7: ಜಗತ್ತಿನ ಅತ್ಯಂತ ಎತ್ತರದ ಗುರುತ್ವಾಕರ್ಷಕ ಅಲೆ ಟೆಲಿಸ್ಕೋಪ್‌ಗಳನ್ನು ಚೀನಾವು ಟಿಬೆಟ್‌ನಲ್ಲಿ ಸ್ಥಾಪಿಸುತ್ತಿದೆ. 18.8 ಮಿಲಿಯ ಡಾಲರ್ (ಸುಮಾರು 128 ಕೋಟಿ ರೂಪಾಯಿ) ವೆಚ್ಚದ ಯೋಜನೆಯಡಿ, ಮೊದಲ ಟೆಲಿಸ್ಕೋಪನ್ನು ಟೆಬೆಟ್‌ನ ನಗರಿ ರಾಜ್ಯದ ಶಿಕಾನ್ಹೆ ಪಟ್ಟಣದಲ್ಲಿ ನಿರ್ಮಿಸುವ ಕಾಮಗಾರಿ ಆರಂಭಗೊಂಡಿದೆ.
ವಿಶ್ವದ ಯಾವುದೇ ಮೂಲೆಯಿಂದಾದರೂ ಹೊರಹೊಮ್ಮುವ ಅತ್ಯಂತ ಕ್ಷೀಣ ಪ್ರತಿಧ್ವನಿಗಳನ್ನಾದರೂ ಗುರುತಿಸುವ ಸಾಮರ್ಥ್ಯವನ್ನು ಈ ಟೆಲಿಸ್ಕೋಪ್‌ಗಳು ಹೊಂದಿವೆ. ಈ ಪ್ರತಿಧ್ವನಿಗಳು ‘ಬಿಗ್ ಬ್ಯಾಂಗ್’ ಸಿದ್ಧಾಂತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಭಾರತದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯ ಸಮೀಪ ಸಮುದ್ರ ಮಟ್ಟದಿಂದ 5,250 ಮೀಟರ್ ಎತ್ತರದಲ್ಲಿ ಸ್ಥಾಪನೆಗೊಳ್ಳುತ್ತಿರುವ ಟೆಲಿಸ್ಕೋಪ್‌ಗಳು ಉತ್ತರ ಗೋಳಾರ್ಧದಲ್ಲಿ ಗುರುತ್ವಾಕರ್ಷಣ ಅಲೆಗಳ ಕುರಿತು ನಿಖರ ಮಾಹಿತಿಗಳನ್ನು ಸಂಗ್ರಹಿಸಲಿದೆ.
Next Story





