ಪಿಲಿಕುಳ: ಕರಕುಶಲ ಮಾರಾಟ ಮೇಳ ಉದ್ಘಾಟನೆ

ಮಂಗಳೂರು, ಜ. 7: ಭಾರತ ಸರಕಾರದ ಜವಳಿ ಮಂತ್ರಾಲಯದ ಕರಕುಶಲ ನಿಗಮದ ಪ್ರಾಯೋಜಕತ್ವದಲ್ಲಿ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‌ನಲ್ಲಿ ಜ. 15 ರವರೆಗೆ ನಡೆಯಲಿರುವ ಕರಕುಶಲ ಮಾರಾಟ ಮೇಳ ಇಂದು ಉದ್ಘಾಟನೆಗೊಂಡಿತು.
ಹಂಪಿ ವಿಶವ್ವಿದ್ಯಾನಿಲಯದ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಹಾಗೂ ಪಿಲಿಕುಳ ನಿಸರ್ಗಧಾಮದ ಗವರ್ನಿಂಗ್ ಕೌನ್ಸಿಲ್‌ನ ಸದಸ್ಯರಾದ ಪ್ರೊ. ಬಿ.ಎ. ವಿವೇಕ ರೈ ಮೇಳದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಶಲಕರ್ಮಿಗಳು ತಾವು ತಯಾರಿಸಿದ ಆಕರ್ಷಕ ಹಾಗೂ ಬಹು ಉಪಯೋಗಿ ಸಾಮಗ್ರಿಗಳನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ಮಾರಾಟಗಳಿಗೆ ಅನುವು ಮಾಡಿಕೊಟ್ಟಂತೆ. ಇಂತಹ ಮೇಳಗಳಿಗೆ ಅವರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಿಲಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ರಾವ್, ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಕರಕುಶಲ ಪ್ರಮೋಶನ್ ಅಧಿಕಾರಿ ಕಿರಣ್, ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಉದ್ಘಾಟನೆಗೊಂಡ ಮೇಳದಲ್ಲಿ ಪಾಂಡಿಚೇರಿ, ಬಿಹಾರ, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ರಾಜಸ್ತಾನ ಮುಂತಾದ ಕಡೆಗಳಿಂದ ಕುಶಲಕರ್ಮಿಗಳು ಪಾಲ್ಗೊಂಡಿದ್ದಾರೆ. ವೈಶಿಷ್ಟ ಪೂರ್ಣವಾದ ಕೈಬ್ಯಾಗುಗಳು, ಆಭರಣಗಳು, ಮಧುಬನಿ, ಝರಿ, ಸೀರೆಗಳು, ಸಿಲ್ಕ್ ಮತುತಿ ಹ್ಯಾಂಡ್‌ಲೂಂ, ಸೆಣಬಿನ ಬ್ಯಾಗ್, ಮರದ ಐಟಂಗಳು, ಕಲ್ಲಿನ ಕೆತ್ತನೆಗಳು, ಚನ್ನಪಟ್ಟಣ ಸಾಮಗ್ರಿಗಳು ರಾಜಸ್ತಾನ ಪಾದರಕ್ಷೆಗಳು, ಟೆರ್ರಾಕೋಟಾ, ರೆಡಿಮೇಡ್ ಬಟ್ಟೆಗಳು, ಇಳಕಲ್ ಸೀರೆಗಳು, ಶಾಲ್‌ಗಳು ಇವೇ ಮುಂತಾದ ಆಕರ್ಷಕ ಸಾಮಗ್ರಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
ಪ್ರದರ್ಶನದ ಸ್ಟಾಲುಗಳು ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ.







