Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅಲೆಮಾರಿ ಮಕ್ಕಳಿಗೆ ಶಿಕ್ಷಣ

ಅಲೆಮಾರಿ ಮಕ್ಕಳಿಗೆ ಶಿಕ್ಷಣ

ಯೋಗೇಶ್ ಮಾಸ್ಷರ್ಯೋಗೇಶ್ ಮಾಸ್ಷರ್7 Jan 2017 11:09 PM IST
share
ಅಲೆಮಾರಿ ಮಕ್ಕಳಿಗೆ  ಶಿಕ್ಷಣ

ಆಶ್ರಮ ಶಾಲೆಗಳು ಸ್ಥಾಪನೆಯಾದ ಉದ್ದೇಶವೇ ಈ ಬುಡಕಟ್ಟು ಮಕ್ಕಳಿಗೆ ವಸತಿ ಮತ್ತು ಶಿಕ್ಷಣವೆರಡನ್ನೂ ಒದಗಿಸಿ ಶಿಕ್ಷಿತರನ್ನಾಗಿ ಮಾಡುವುದು. ಆಶಯದ ದೃಷ್ಟಿಯಿಂದ ಅು ಸ್ಪಷ್ಟವಾಗಿದೆ ಮತ್ತು ಅಗತ್ಯವುಳ್ಳದ್ದಾಗಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗದೇ ಹೋಗಿರುವುದು ವ್ಯವಸ್ಥೆಯ ವೈಫಲ್ಯ. ಶಿಕ್ಷಕರ ಅಸಹಕಾರ.

ವಿಶೇಷ ಶೈಕ್ಷಣಿಕ ಯೋಜನೆಗಳು

ಅಲೆಮಾರಿ ಬುಡಕಟ್ಟುಗಳಿಂದ ಬಂದಿರುವಂತಹ ಮಕ್ಕಳಿಗೆ ಶಿಕ್ಷಣವನ್ನು ಕೊಡುವಂತಹ ಯೋಜನೆಯನ್ನು ಯಾವುದೇ ಸಂಘ ಸಂಸ್ಥೆಗಳು ಅಥವಾ ಸರಕಾರದ ಅಂಗಸಂಸ್ಥೆಗಳು ಹಾಕಿಕೊಳ್ಳುವಾಗ ಕೆಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿ ಆ ಸಮುದಾಯಗಳಿಗೆ ವಸತಿ, ಆಹಾರ, ಆರೋಗ್ಯ ಮತ್ತು ಶಿಕ್ಷಣದ ವ್ಯವಸ್ಥೆ ಯಾವ ಹಂತಗಳಲ್ಲಿದೆ ಎಂಬುದು.

ದಶಕಗಳಿಂದ ಬುಡಕಟ್ಟುಗಳ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು, ಅದರಲ್ಲೂ ಪಂಚವಾರ್ಷಿಕ ಯೋಜನೆಗಳಲ್ಲಿ ಗಮನಕ್ಕೆ ತಂದುಕೊಂಡರೂ, ಅನೇಕಾನೇಕ ಅಧ್ಯಯನ ಸಂಸ್ಥೆಗಳು ಅವುಗಳ ಸಲುವಾಗಿ ಕೆಲಸ ಮಾಡುತ್ತಿದ್ದರೂ, ಬುಡಕಟ್ಟಿನ ಬಹುಪಾಲು ಮಂದಿ ಇಂದಿಗೂ ಅಶಿಕ್ಷಿತರಾಗಿಯೇ ಉಳಿದಿರುವುದನ್ನು ನೋಡಿದರೆ ಈ ಯೋಜನೆಗಳೆಲ್ಲಾ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಮತ್ತು ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿದೆ ಎಂದು ಅರಿವಾಗುತ್ತದೆ.

ಶಿಕ್ಷಣವೆಂದರೆ ಹಳ್ಳಿ ಮತ್ತು ಪಟ್ಟಣಗಳಿಗೇ ಕೇಂದ್ರೀಕೃತವಾಗಿದ್ದು, ಹಳ್ಳಿ ಮತ್ತು ಪಟ್ಟಣಗಳಲ್ಲದೇ ಇರುವಂತಹ ಪ್ರದೇಶಗಳೂ ಇವೆ. ಅಲ್ಲಿಯೂ ಜನವಸತಿಗಳಿವೆ, ಅಲ್ಲಿಯೂ ಸಮುದಾಯಗಳಿವೆ, ಅಲ್ಲಿರುವವರಿಗೂ ಆಹಾರ, ಆರೋಗ್ಯ ಮತ್ತು ಶಿಕ್ಷಣ ಬೇಕೆಂಬ ಸಾಮಾನ್ಯ ಅರಿವೂ ನಮ್ಮ ಜನಪ್ರತಿನಿಗಳಿಗಾಗಲಿ, ಸರಕಾರಕ್ಕಾಗಲಿ, ಸರಕಾರದ ಅಂಗಸಂಸ್ಥೆಗಳಿಗಾಗಲಿ ಇಲ್ಲ ಎನ್ನುವುದು ನಮ್ಮ ದುರಂತ. ಆಹಾರ ಮತ್ತು ಆರೋಗ್ಯಕ್ಕಾದರೂ ಕೊಡುವಷ್ಟು ಒತ್ತು ಶಿಕ್ಷಣಕ್ಕೆ ಕೊಡುತ್ತಲೇ ಇಲ್ಲ ಎನ್ನುವುದು ನಿರ್ವಿವಾದ. ಮೊದಲನೆಯದಾಗಿ ಬುಡಕಟ್ಟುಗಳ ಜನರು ವಾಸಿಸುವ ಪ್ರದೇಶಗಳಲ್ಲಿ ಜನಸಂಖ್ಯೆ ವಿರಳವಾಗಿದ್ದು ಅವರಿಂದ ಮತ ಪಡೆಯುವ ವಿಷಯದಲ್ಲಿ ಅಷ್ಟೇನೂ ನೆರವಾಗದಿರುವುದೂ ಕೂಡಾ ಒಂದು ಮುಖ್ಯ ಕಾರಣ. ಆಹಾರ, ಆರೋಗ್ಯ ಮತ್ತು ವಸತಿಯು ದೊರೆಯದೇ ಇದ್ದ ಪಕ್ಷದಲ್ಲಿ ಕವಿ ಕವಿಯಾಗಿರಲಾರ, ಸಂತ ಸಂತನಾಗಿರಲಾರ ನಿಜ. ಆದರೆ, ಪೀಳಿಗೆಗಳಿಗೆ ಸರಿಯಾದ ಶಿಕ್ಷಣ ದೊರಕಿದ್ದೇ ಆದಲ್ಲಿ ತಮ್ಮ ಆರ್ಥಿಕ ಸಂಪನ್ಮೂಲವನ್ನು 

ಸಬಲಗೊಳಿಸಿಕೊಂಡು, ಆಹಾರ, ಆರೋಗ್ಯ ಮತ್ತು ವಸತಿಗಳನ್ನೂ ಸಮರ್ಥವಾಗಿ ನಿಭಾಯಿಸಿಕೊಳ್ಳಬಲ್ಲರು ಎಂಬ ಸಾಮಾನ್ಯ ಜ್ಞಾನವಿಲ್ಲದಂತಹ ವ್ಯವಸ್ಥೆಯಲ್ಲಿ ಬುಡಕಟ್ಟುಗಳ ಮಕ್ಕಳು ನಲುಗುತಿ್ತದ್ದಾರೆ.

ಮೊದಲನೆಯದಾಗಿ ಬುಡಕಟ್ಟು ಅಥವಾ ಅಲೆಮಾರಿ ಸಮುದಾಯಗಳ ಮಕ್ಕಳಿಗೆಂದು ವಿಶೇಷವಾದಂತಹ ಶಿಕ್ಷಣ ನೀತಿ ಇಲ್ಲ. ಆಶ್ರಮ ಶಾಲೆಗಳು ಇಂತಹ ಮಕ್ಕಳಿಗಾಗಿಯೇ ತೆರೆದಿರುವಂತದ್ದು. ಬುಡಕಟ್ಟು ಸಮುದಾಯಗಳು ಇರುವಂತಹ ಪ್ರದೇಶಗಳಲ್ಲಿ ಆಶ್ರಮ ಶಾಲೆಗಳನ್ನು ನಿರ್ಮಿಸಿದರು. ಕರ್ನಾಟಕದಲ್ಲಿ 115 ಆಶ್ರಮ ಶಾಲೆಗಳಿವೆ. ಆದರೆ ಅವುಗಳಲ್ಲಿ ಒಂದೇ ಒಂದು ಶಾಲೆಯೂ ಕೂಡಾ ಕ್ರಿಯಾಶೀಲವಾಗಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಮುಖ್ಯವಾಹಿನಿಯಲ್ಲಿರುವ ಶಿಕ್ಷಕರು ಅಲ್ಲಿಗೆ ಹೋಗಿ ಮಕ್ಕಳಿಗೆ ಕಲಿಸುವಂತಹ ಮನಸ್ಥಿತಿಯನ್ನು ಹೊಂದಿಲ್ಲ. ಅವರಿಗೆ ಅವರ ಅನುಕೂಲಕ್ಕಾಗಿ ಸಮೀಪದ ಗ್ರಾಮೀಣ ಮತ್ತು ಪಟ್ಟಣದ ಕೇಂದ್ರಗಳಕಡೆಗೇ ಒಲವನ್ನು ತೋರುತ್ತಾರೆ.

ಹಂಪಿಯ ಬುಡಕಟ್ಟು ಅಧ್ಯಯನ ವಿಭಾಗವು ಈ ಹಿಂದೆ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ನೀಡಿತ್ತು. ಇಂತಹ ಅಲೆಮಾರಿ ಸಮುದಾಯದ ಮಕ್ಕಳಿಗೆ ಕಲಿಸುವ ಪದ್ಧತಿಯ ಬಗ್ಗೆ ತರಬೇತಿ ಕೇಂದ್ರೀಕೃತವಾಗಿತ್ತು. ಏಕೆಂದರೆ ಈ ಮಕ್ಕಳಿಗೆ ಇರುವಂತಹ ಹಿನ್ನೆಲೆಗೂ ಗ್ರಾಮೀಣ ಮತ್ತು ಪಟ್ಟಣದಲ್ಲಿ ವಾಸವಿರುವಂತಹ ಜನರ ಬದುಕಿನ ಶೈಲಿಗೂ ತೀರಾ ವ್ಯತ್ಯಾಸವಿರುತ್ತದೆ. ಹಾಗಾಗಿಯೇ ಈ ಮಕ್ಕಳನ್ನು ನಿಭಾಯಿಸುವಲ್ಲಿ ನಮ್ಮ ಸಿದ್ಧ ಮಾದರಿಯ ಶೈಕ್ಷಣಿಕ ಪದ್ಧತಿಯ ದೃಷ್ಟಿಕೋನಗಳಿಂದ ಹೊರತಾಗಿ ನೋಡಬೇಕಾಗುತ್ತದೆ. ನಾವು ಅನುಸರಿಸುವ ಪಠ್ಯಕ್ರಮ ಮತ್ತು ಕಲಿಕೆಯ ಪದ್ಧತಿಗಳು ಅವರಿಗೆ ಅಪರಿಚಿತವಾಗಿರುವುದಲ್ಲದೇ, ಅನಗತ್ಯವೂ ಎನಿಸುವಂತಿರುತ್ತದೆ. ಹಾಗಾಗಿಯೇ ಸಾಮಾನ್ಯೀಕರಣಗೊಂಡಿರುವ ಶಿಕ್ಷಣ ದ್ಧತಿಯು ಅವರನ್ನು ತಲುಪುತ್ತಿಲ್ಲ.

ಹಂಪಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ಕೇಂದ್ರದ ಡಾ. ಎ.ಎಸ್. ಪ್ರಭಾಕರ್ ಈ ವಿಲ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲುತ್ತಾ ನೋವು ವ್ಯಕ್ತಪಡಿಸಿದರು. ಹಾಗೂ ಇವುಗಳ ಯಶಸ್ವೀ ಕಾರ್ಯಯೋಜನೆಗೆ ಅಗತ್ಯವಿರುವ ಇಚ್ಛಾಶಕ್ತಿ ಮತ್ತು ಸಿದ್ಧತೆಯ ಬಗ್ಗೆಯೂ ಆಸಕ್ತಿ ವಹಿಸುತ್ತಾ ಹಲವು ಸಂಗತಿಗಳನ್ನು ಹಂಚಿಕೊಂಡರು.

ಆಶ್ರಮ ಶಾಲೆಗಳು

ಕರುಣಾ ಟ್ರಸ್ಟ್ ಎಂಬುದಾಗಿ ಡಾ. ಸುದರ್ಶನ್ ಬಿಳಿಗಿರಿರಂಗನ ಬೆಟ್ಟದಲ್ಲಿ ಸ್ಥಾಪಿಸಿದರು. ಆದರೆ 20-30ವರ್ಷಗಳಿಂದ ಅಲ್ಲಿ ಚಟುವಟಿಕೆಗಳಿಂದ ಕೂಡಿರುವುದಾಗಿ ಹೇಳಿದ್ದರೂ ಒಬ್ಬನೇ ಹುಡುಗ ಪಿಯುಸಿ ದಾಟಿಲ್ಲ. ಅಂದರೆ ಅವರ ಯೋಜನೆಯು ಮತ್ತು ಚಟುವಟಿಕೆಗಳು ಯಾಂತ್ರಿಕವಾಗಿದ್ದು ಯಶಸ್ಸು ಕಂಡಿಲ್ಲ. ತಮ್ಮ ಶಿಕ್ಷಣದ ಪದ್ಧತಿಯಲ್ಲಿರುವಂತಹ ಲೋಪದೋಷಗಳನ್ನು ಅವರಿನ್ನೂ ಕಂಡುಕೊಂಡಿಲ್ಲವೆಂದರೆ, ಅವರು ತಮ್ಮ ಸೀಮಿತ ಶೈಕ್ಷಣಿಕ ಪದ್ಧತಿಯಿಂದ ಹೊರಗೆ ಬಂದು ನೋಡೇಇಲ್ಲ. ತಮ್ಮದರೊಳಗೆ ಅವರನ್ನು ಎಳೆದುಕೊಳ್ಳುವಂತಹ ವಿಲ ಯತ್ನವನ್ನು ಮಾಡುತ್ತಿದ್ದಾರೆ ಎಂದೇ ಅನಿಸುತ್ತದೆ. ಬಹುಶಃ ಬುಡಕಟ್ಟು ಜನರ ಮೇಲಿರುವ ಅನುಕಂಪ ಮಾತ್ರ ಸಾಲದು ಎಂಬ ಸತ್ಯ ಅವರಿಗೆ ಅರಿವಾಗಿಲ್ಲ. ಇನ್ನೂ ಮುಂದುವರಿದು ಚಿಂತಿಸಲು ಹೋದರೆ, ಕರುಣಾ ಟ್ರಸ್ಟ್ ತನ್ನದೇ ಆದಂತಹ ಆದರ್ಶ ಮತ್ತು ಧ್ಯೇಯ ಧೋರಣೆಗಳನ್ನು ಹೊಂದಿದ್ದು ಅದು ಅಲ್ಲಿನ ಜನರ ಸಂಸ್ಕೃತಿಗಾಗಲಿ, ಸಮುದಾಯಕ್ಕಾಗಲಿ ಹೊಂದುತ್ತಿಲ್ಲ.

ಆಶ್ರಮ ಶಾಲೆಗಳು ಸ್ಥಾಪನೆಯಾದ ಉದ್ದೇಶವೇ ಈ ಬುಡಕಟ್ಟು ಮಕ್ಕಳಿಗೆ ವಸತಿ ಮತ್ತು ಶಿಕ್ಷಣವೆರಡನ್ನೂ ಒದಗಿಸಿ ಶಿಕ್ಷಿತರನ್ನಾಗಿ ಮಾಡುವುದು. ಆಶಯದ ದೃಷ್ಟಿಯಿಂದ ಅದು ಸ್ಪಷ್ಟವಾಗಿದೆ ಮತ್ತು ಅಗತ್ಯವುಳ್ಳದ್ದಾಗಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗದೇ ಹೋಗಿರುವುದು ವ್ಯವಸ್ಥೆಯ ವೈಲ್ಯ. ಶಿಕ್ಷಕರ ಅಸಹಕಾರ.

ಬುಡಕಟ್ಟು ಮತ್ತು ಅಲೆಮಾರಿ ಮಕ್ಕಳಿಗೆ ಶಿಕ್ಷಣವನ್ನು ದೊರಕಿಸುವ ಹಿನ್ನೆಲೆಯಲ್ಲಿ 2005-06ರಲ್ಲಿ ಸರಕಾರಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಅಲೆಮಾರಿ ಸಮುದಾಯದ ಕುಟುಂಬಗಳು ಸಂಚರಿಸುವಂತಹ ಎಡೆಗಳಲ್ಲಿ ಮೊಬೈಲ್ ಲೈಬ್ರರಿ, ಶಾಲೆಗಳನ್ನು ಒದಗಿಸುವಂತಹ ಯೋಜನೆ ಅದರಲ್ಲಿತ್ತು. ಆದರೆ ಅದು ಅನುಷ್ಠಾನಕ್ಕೂಬರಲಿಲ್ಲ. ಕಾರ್ಯರೂಪಕ್ಕೂ ಬರಲಿಲ್ಲ.

ಈಗ ಹಾಕಿಕೊಂಡಿರುವಂತಹ ಸರಕಾರದ ಯೋಜನೆಗಳಲ್ಲಿ ಅಲೆಮಾರಿ ಮಕ್ಕಳಿಗೆ ಯಾವ ರೀತಿಯಲ್ಲಿಯೂ ಸಹಕಾರಿಯಾಗುವಂತಹ ಅಂಶಗಳಿಲ್ಲ. ಕಣ್ಣೊರೆಸುವ ತಂತ್ರಗಾರಿಕೆಯಷ್ಟೇ ಇರುವುದು. ಸೂಕ್ಷ್ಮ ಮನಸ್ಥಿತಿಯ, ವಿಶಿಷ್ಟ ಜೀವನ ಕ್ರಮದ ಅವರನ್ನು ತಲುಪುವಂತಹ ಶಿಕ್ಷಣವನ್ನು ರೂಪಿಸುವಲ್ಲಿ ಇಡೀ ವ್ಯವಸ್ಥೆಯು ವಿಲಗೊಂಡಿದೆ.

ಇಂತಹ ಮಕ್ಕಳಿಗೆಂದು ರೂಪಿಸಲಾಗಿರುವಂತಹ ಆಶ್ರಮ ಶಾಲೆಗಳನ್ನು ಕ್ರಿಯಾಶೀಲವಾಗಿರುವಂತಹ ಎನ್‌ಜಿಒಗಳಿಗೆ ಕೊಡುವಂತಹ ಪ್ರಕ್ರಿಯೆಯೂ ಆರಂಭವಾಗಿತ್ತು. ಆದರೆ ಅದೂ ಕೂಡ ವಿಲವಾಯಿತು. ತಮಗೆ ಲಾಭದಾಯಕವಲ್ಲದಂತಹ ಈ ಯೋಜನೆಗಳಲ್ಲಿ ಅವುಗಳು ಭಾಗಿಯಾಗಲಿಲ್ಲ, ಕೆಲಸ ಮಾಡಲಿಲ್ಲ. ಉತ್ತಮ ಕಟ್ಟಡಗಳಾಗಿ ಮೈದಳೆದಂತಹ ಆಶ್ರಮ ಶಾಲೆಗಳು ಈಗ ಬಹುತೇಕ ಹಂದಿಗೂಡುಗಳಂತೆ ಇವೆ.

ಆಶ್ರಮ ಶಾಲೆಯನ್ನೇ ದತ್ತು ತೆಗೆದುಕೊಂಡಂತಹ ಡಾ. ಸುದರ್ಶನ್‌ರವರ ಕರುಣಾ ಟ್ರಸ್ಟ್‌ನ ಮುಖ್ಯೋಪಾಧ್ಯಾಯಿನಿಯಾಗಿದ್ದಾಕೆ 25 ವರ್ಷಗಳಿಂದ ಈ ಮಕ್ಕಳು ಏನೂಂತಾನೇ ಅರ್ಥವಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರಂತೆ. ಅಂದರೆ ಅಲ್ಲಿ ಸ್ಪಷ್ಟವಾಗುವುದು ಏನೆಂದರೆ ಈ ಬುಡಕಟ್ಟಿನ ಮಕ್ಕಳನ್ನು ತಮ್ಮದೇ ಆದಂತಹ ಚೌಕಟ್ಟಿನ ಮತ್ತು ತಮ್ಮದೇ ಆದಂತಹ ಸಾಂಪ್ರದಾಯಿಕ ಮನಸ್ಥಿತಿಯಲ್ಲಿಯೇ ಉಪಚರಿಸುತ್ತಿದ್ದಾರೆ. ಅದರಿಂದ ಆಚೆಗೆ ಬಂದು ಅವರೊಡನೆ ಸಂವಹನವನ್ನೂ ನಡೆಸಿಲ್ಲ, ಸಂಪರ್ಕವನ್ನೂ ಸಾಸಿಲ್ಲ ಎಂದಾಯ್ತು.

ಮಕ್ಕಳ ಹಾಜರಾತಿ ಇಲ್ಲ ಎಂದು 2012ರಲ್ಲಿ ಸುಮಾರು ಆಶ್ರಮ ಶಾಲೆಗಳನ್ನು ಸರಕಾರವೇ ಮುಚ್ಚಿತು. ಇದರ ವಿರುದ್ಧವಾಗಿ ಮಾವಳ್ಳಿ ಶಂಕರ್‌ರವರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಆದರೆ ಸರಕಾರಿ ಅಕಾರಿಗಳು ಶಾಲೆಯನ್ನು ಮುಚ್ಚುತ್ತಿಲ್ಲ ಆದರೆ ತುಂಬಾ ವಿರಳವಾದಂತಹ ಹಾಜರಾತಿ ಇರುವುದರಿಂದ ಮಕ್ಕಳನ್ನು ಬೇರೆ ಶಾಲೆಗೆ ವರ್ಗಮಾಡಲಾಗಿದೆ ಎಂದು ಸಮಜಾಯಿಷಿ ಕೊಟ್ಟರು. ಆದರೆ ಆ ಮಕ್ಕಳು ನಿಜಕ್ಕೂ ಮುಂದೆ ಶಿಕ್ಷಣ ಪೆದವೇ ಎಂದು ತಿಳಿಯದೇ ಹೋಯಿತು.

ಎಂತಹ ಶಿಕ್ಷಣ ಬೇಕು?

    1.ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಆಧಾರವಾಗಿಟ್ಟುಕೊಂಡು ಅವರಿಗೆ ಅಗತ್ಯವಿರುವ ಶಿಕ್ಷಣ ಪದ್ಧತಿಯನ್ನು ರೂಪಿಸಬೇಕು.

    2.ನೈಸರ್ಗಿಕ ಸಂಪನ್ಮೂಲಗಳ ನಡುವೆ ಇರುವಂತಹ ಅವರನ್ನು ಅದೇ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ವಾಣಿಜ್ಯದ ಬಗ್ಗೆ ಅರಿವನ್ನು ಮೂಡಿಸಬೇಕು. ಅಲ್ಲದೇ ಅವರು ಅವುಗಳನ್ನು ವೈಜ್ಞಾನಿಕವಾಗಿ ಮತ್ತು ಶಾಸೀಯವಾಗಿ ತಿಳಿದುಕೊಳ್ಳುಂತಹ ನಿಟ್ಟಿನಲ್ಲಿ ಸಹಕರಿಸಬೇಕು.

    3.ಅವರ ಆಚಾರ ವಿಚಾರಗಳು ಹಳತೆಂದೋ ಅಥವಾ ಪ್ರಸ್ತುತ ಶಿಷ್ಟ ಸಮಾಜದ ವ್ಯಾಪ್ತಿಗೆ ಒಳಪಡುವುದಿಲ್ಲವೆಂದೋ ತಿರಸ್ಕರಿಸುವುದಾಗಲಿ ಅಥವಾ ಹೊಸ ಸಂಸ್ಕೃತಿಯನ್ನು ಹೇರುವುದಾಗಲಿ ಮಾಡಬಾರದು. ಅವರ ಮಾತಿನ ಶೈಲಿ, ಜೀವನ ಪದ್ಧತಿಗಳನ್ನು ಬದಲಾಯಿಸಲು ಯತ್ನಿಸದೇ ಅವುಗಳನ್ನು ಪ್ರೋತ್ಸಾಹಿಸಬೇಕು ಮತ್ತು ಅವುಗಳ ಉಳಿವಿಗೆ ಾಗೂ ಅಭಿವೃದ್ಧಿಗೆ ಸಹಕರಿಸಬೇಕು.

    4. ಅವರ ಅರಣ್ಯ ಜೀವನದ ತಂತ್ರಗಾರಿಕೆಯೊಂದಿಗೆ ಕಲೆ, ಅಡುಗೆ, ಆಹಾರ ಪದ್ಧತಿ, ಮದುವೆ ಮತ್ತು ಇತರ ವ್ಯಕ್ತಿಗತ ಒಡಂಬಡಿಕೆಗಳನ್ನು ಗೌರವಿಸುವುದಲ್ಲದೇ ಅವುಗಳನ್ನು ಅನುಸರಿಸುತ್ತಲೇ ಅವರ ವ್ಯಾಪ್ತಿಯ ಹೊರಗಿರುವ ಸಮಾಜದ ಬಗ್ಗೆಯೂ ಅರಿವನ್ನು ಉಂಟು ಮಾಡುವಂತಹ ಶಿಕ್ಷಣ ಪದ್ಧತಿ ಅದಾಗಿರಬೇಕು.

    5.ಬಹಳ ಸೂಕ್ಷ್ಮ ಮನಸ್ಥಿತಿಯವರಾದ ಅವರನ್ನು ಗ್ರಾಮೀಣ ಹಿನ್ನೆಲೆಯ ಅಥವಾ ಪಟ್ಟಣದ ಹಿನ್ನೆಲೆಯ ಮಕ್ಕಳನ್ನು ನೋಡುವಂತೆ ನೋಡಬಾರದು. ಅವರ ವಿಶ್ವಾಸವನ್ನು ಗಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ನಿಜ ಹೇಳಬೇಕೆಂದರೆ ಅವರ ಆಚಾರ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡಲೇಬಾರದು.

    6.ಪಟ್ಟಣ ವಾಸದ ಆಮಿಷಗಳನ್ನಾಗಲಿ, ಹಣ ಮತ್ತು ವೈಭವದ ಜೀವನದ ಆಮಿಷಗಳನ್ನಾಗಲಿ ಒಡ್ಡಿ ಸಿದ್ಧ ಮಾದರಿಯ ಶಿಕ್ಷಣ ಪದ್ಧತಿಯನ್ನು ಹೇರಲು ಹೋಗಬಾರದು.

    7.ಶಿಕ್ಷಣದ ನೆಪದಲ್ಲಿ ಕ್ರೆಸ್ತ ಮಿಷನರಿಗಳೂ ಮತ್ತು ಹಿಂದೂ ಸಂಘಟನೆಗಳು ತಮ್ಮ ಆಚಾರ ವಿಚಾರಗಳನ್ನು ಇಂತಹ ಮಕ್ಕಳ ಮೇಲೆ, ಮಕ್ಕಳ ಕುಟುಂಬದ ಮೇಲೆ ಹೇರುವುದುಂಟು. ಇದರಿಂದಾಗಿ ಅನೇಕ ಕುಂಟುಂಬಗಳು ಇಂಥಾ ಎನ್‌ಜಿಒಗಳು ಆಹ್ವಾನಿಸುವಂತಹ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ನಿರಾಕರಿಸುತ್ತವೆ.

    8.ಅಲೆಮಾರಿ ಮಕ್ಕಳಿಗೆ ತಲುಪಬೇಕಾಗಿರುವ ಶಿಕ್ಷಣ ಹೊರಗಿನಿಂದ ಅಲ್ಲ. ಒಳಗಿನಿಂದ. ನಿಜ ಹೇಳಬೇಕೆಂದರೆ ಅವರಿಗೆ ಮೂಲಭೂತವಾಗಿ ಅವರದೇ ಆದಂತಹ ಶಿಕ್ಷಣವಿರುತ್ತದೆ. ಅದನ್ನು ತಿಳಿಯುವ ಮೂಲಕ ಅದನ್ನೇ ವಿಸ್ತರಿಸುವ ಪ್ರಯತ್ನ ಮಾಡಬೇಕು. ಆಗ ಅವರೂ ಕೂಡಾ ಮುಖ್ಯವಾಹಿನಿಯ ಶಿಕ್ಷಣಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹೊರತಾಗಿ ಅವರಲ್ಲಿ ಮೂಲಭೂತವಾಗಿರುವಂತಹ ಸಹಜ ಮತ್ತು ನೈಸರ್ಗಿಕ ಕೌಶಲ್ಯಗಳನ್ನು ಕಡೆಗಣಿಸಿದ್ದೇ ಆದಲ್ಲಿ ಅವರಿಗೆ ನೀಡುವ ಶಿಕ್ಷಣವೂ ವಿಲವಾಗುತ್ತದೆ. ಅಲ್ಲದೇ, ಅವರಲ್ಲಿರುವ ಅರಿವನ್ನೂ ನಾಶ ಪಡಿಸಿದಂತಾಗುತ್ತದೆ.ಹೀಗಾಗಿ ಎಷ್ಟೋ ಕಾರಣಗಳಿಂದ ಆಶ್ರಮ ಶಾಲೆಗಳು ವಿಲವಾದವು. ಅವುಗಳ ಬಗ್ಗೆ ಮತ್ತಷ್ಟು ಅರಿಯೋಣ.

share
ಯೋಗೇಶ್ ಮಾಸ್ಷರ್
ಯೋಗೇಶ್ ಮಾಸ್ಷರ್
Next Story
X