ದಂತ ವೈದ್ಯರು ನಗಿಸಿ ನೀಡಿದ ಕೃತಿ ಚಿತ್ರಾನ್ನ

ಮೂಲದಲ್ಲಿ ವಿನೋದವನ್ನೇ ಜೀವಾಳವಾಗಿಸಿಕೊಂಡ ಬರಹಗಳು ಇವಾದುದರಿಂದ ಇವುಗಳನ್ನು ಕಥೆಯೆಂದೇ ಕರೆದು ಓದಬೇಕಿಲ್ಲ. ಇಡೀ ಸಂಕಲನದುದ್ದಕ್ಕೂ ಹಾಸ್ಯದ ಘಟನೆಗಳೇ ಹೆಚ್ಚಿದ್ದು ಸಂಕಲನ ಕೈಗೆತ್ತಿಕೊಂಡಾಗಿಂದ ನಾವು ನಗಲೇ ಬೇಕಾಗುತ್ತದೆ (ಹಲ್ಲು ಕಾಣುವಷ್ಟು ದೊಡ್ಡ ನಗುವೇ ಉಕ್ಕುತ್ತದೆ!) ಕಾಸರಗೋಡಿನ ಹಿರಿಯ ದಂತ ವೈದ್ಯ ಡಾ॥
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಯಾವುದೇ ಸಾಹಿತ್ಯ ಪ್ರಕಾರವನ್ನು ಶಾಸ್ತ್ರೀಯವಾಗಿ ಅಭ್ಯಸಿಸದ ಅನ್ಯಶಾಸ್ತ್ರಗಳಾದ ವಿಜ್ಞಾನ, ಗಣಿತ, ಅರ್ಥಶಾಸ್ತ್ರ...ಗಳೇ ಮೊದಲಾದ ಸಾಹಿತ್ಯೇತರ ಕ್ಷೇತ್ರದವರ ಕೊಡುಗೆ ಗಣನೀಯವಾಗಿದೆ. ಇವರ ಬರಹಗಳ ಜೀವಾಳ ಇರುವುದೇ ಜೀವನಾನುಭವದ ನಿರೂಪಣೆಯಲ್ಲಿ. ಅನುಭವದ ವಿಸ್ತಾರ ದೊಡ್ಡದಾದಷ್ಟೂ, ಆಳ ಹೆಚ್ಚಿದಷ್ಟೂ ಬರವಣಿಗೆಯ ತೂಕ ಹೆಚ್ಚುತ್ತದೆ. ಯಾವುದೇ ಭಾಷೆಯ ಸಾಹಿತ್ಯದ ಒಟ್ಟಂದ ಹೆಚ್ಚುವುದೇ ಈ ಬಗೆಯ ಕ್ಷೇತ್ರ ವೈವಿಧ್ಯತೆಯಿಂದ ಎಂಬುದು ಒಪ್ಪಿತವಾದ ವಿಚಾರವಾಗಿದೆ.
ವೈದ್ಯಕೀಯ ವಿಚಾರಗಳು ಪಠ್ಯದಂತೆ ಬರೆಯಲ್ಪಟ್ಟರೆ ನಮಗೆ ರುಚಿಸುವುದು ಕಡಿಮೆ ಆದರೆ ಅದೇ ಹೊರಣವನ್ನು ಸಾಹಿತ್ಯದ ಚೌಕಟ್ಟಿನಲ್ಲಿ ಕಥೆ, ಕವಿತೆ, ವಿನೋದ, ಲೇಖನ, ಸಿನೆಮಾ, ನಾಟಕಗಳಂತಹ ಆಕರ್ಷಕ ಮಾಧ್ಯಮಗಳಲ್ಲಿ ಸೆರೆಹಿಡಿದು ಕೊಟ್ಟಾಗ ಜನರಿಗೆ ರುಚಿಸುವುದಷ್ಟೇ ಅಲ್ಲ ತಮ್ಮ ಮೂಲ ಉದ್ದೇಶವನ್ನೂ ಯಶಸ್ವಿಯಾಗಿ ನೆರವೇರಿಸಿಕೊಳ್ಳುವುದರಲ್ಲಿ ಅವು ಸಫಲವಾಗುತ್ತವೆ.
ಇಂತಹ ಒಂದು ಸಾರ್ಥಕ ಸುಂದರ ಪ್ರಯೋಗ ‘ಚಿತ್ರಾನ್ನ’ವೆಂಬ ಕಥಾಸಂಕಲನ. ಇತ್ತೀಚೆಗೆ ಮಂಗಳೂರಿನಲ್ಲಿ ಬಿಡುಗಡೆಗೊಂಡಿದೆ.. ಹಲ್ಲುಗಳನ್ನು ‘ಕಟ್ಟಿಕೊಡುವ’ ದಂತವೈದ್ಯರುಗಳ ಒಂದು ತಂಡ ಉತ್ತಮ ಸಂವೇದನೆಯ ಸುಂದರ ದಂತ ಕತೆಗಳನ್ನು ಇಲ್ಲಿ ‘ಕಟ್ಟಿಕೊಟ್ಟಿದ್ದಾರೆ’. ಇಂಥದೊಂದು ಸಾಹಿತ್ಯಕ ಪ್ರಯತ್ನಕ್ಕೆ ಮುಂದಾಗಿರುವವರು ಮಂಗಳೂರಿನ ಸಾಹಿತ್ಯಾಸಕ್ತ ದಂತ ವೈದ್ಯ ಡಾ. ಮುರಲೀ ಮೋಹನ ಚೂಂತಾರು. ಒಟ್ಟು 32 ದಂತಕತೆಗಳನ್ನು (ಮಾನವನ ಹಲ್ಲು 32 ತಾನೆ?) ಹೊಂದಿರುವ ಈ ಸಂಕಲನದಲ್ಲಿ ಹಿರಿಯ ನುರಿತ ವೈದ್ಯರಿಂದ ಹಿಡಿದು ಇನ್ನೂ ದಂತವೈದ್ಯಕೀಯ ವಿದ್ಯಾರ್ಥಿ ವೈದ್ಯರ ಕತೆಗಳ ತನಕದ ಕೊಡುಗೆಗಳಿವೆ. ಎಲ್ಲ ವೈದ್ಯರೂ ತಮ್ಮ ಬರಹಗಳ ನಿರೂಪಣೆಗೆ ಯಾವ ಕಲ್ಪನೆಯನ್ನು ಬಳಸದೆ ತಮ್ಮ ವೃತ್ತಿ ಜೀವನದ ನೈಜ ಅನುಭವಗಳನ್ನೇ ಹೇಳಿರುವುದು ಈ ಸಂಕಲನದ ವೈಶಿಷ್ಟ್ಯ. ಪ್ರತೀಕತೆಯಲ್ಲೂ ವಿದ್ಯಾರ್ಥಿ ಜೀವನದ ತಮ್ಮ ರೋಚಕ ಕನಸುಗಳು, ತಮ್ಮನ್ನು ರೂಪಿಸಿದ ಗುರುಗಳ, ಹಿರಿಯರ ಸಂಸ್ಮರಣೆ, ತಮ್ಮ ವೃತ್ತಿಯಲ್ಲಿ ನೈಪುಣ್ಯ ಸಾಧಿಸಲು ನೆರವಿತ್ತ ಸಹೋದ್ಯೋಗಿಗಳ, ರೋಗಿಗಳ ನೆನಪುಗಳು, ತಮ್ಮಿಂದ ಚಿಕಿತ್ಸೆ ಪಡೆದ ರೋಗಿಗಳು ಕೃತಜ್ಞತೆ ಸಲ್ಲಿಸುವ ಮುಗ್ಧರೀತಿ, ಪ್ರಾರಂಭಿಕ ದಿನಗಳಲ್ಲಿ ತಾವು ಎಸಗಿದ ಚಿಕಿತ್ಸಾ ಪದ್ಧತಿಯಲ್ಲಿ ತಪ್ಪಿದ ಅನಾಹುತಗಳಿಗಾಗಿ ಭಗವಂತನ ಸ್ಮರಣೆ.... ಮೊದಲಾದ ಮಾನವೀಯ ಸಂವೇದನೆಗಳು ಗಾಢವಾಗಿದೆ. ಮುಗ್ಧ ರೋಗಿಗಳ ವಿಕ್ಷಿಪ್ತ ನಡವಳಿಕೆಗಳನ್ನು ವಿನೋದ ಪೂರ್ಣವಾಗಿ ನೆನಪಿಸಿಕೊಳ್ಳಲಾಗಿದೆಯಾದರೂ ಎಲ್ಲಿಯೂ ಅಮಾನವೀಯ ಗೇಲಿಯ ಬಳಕೆಯಾಗಿಲ್ಲವೆಂಬುದು ಜನಸಾಮಾನ್ಯರು ವೈದ್ಯರ ಮೇಲಿಟ್ಟಿರುವ ಗೌರವಾದರಗಳಿಗೆ ಚ್ಯುತಿ ಬಾರದ ರೀತಿಯ ನಿರೂಪಣೆಗಳೇ ಇವೆ ಎಂಬುದು ಈ ಎಲ್ಲ ಬರಹಗಾರರಲ್ಲಿ ನಾವು ಮೆಚ್ಚಬೇಕಾದ ಅಂಶವಾಗಿದೆ. ಇದೊಂದು ‘ವೈದ್ಯ-ರೋಗಿ’ ಸಂಬಂಧದಲ್ಲಿರುವ ಅವ್ಯಕ್ತ ಬಾಂಧವ್ಯವನ್ನು ತೆರೆದಿಡುವ ಹೃದ್ಯ ಅನುಭವ ನೀಡುವ ಸ್ವಾರಸ್ಯಕರ ಓದಿನ ಅನುಭವ ನೀಡುವ ಸಾರ್ಥಕ ಕೃತಿ.
ತಮ್ಮ ‘ಅವಸರವೇ ಅಪಘಾತಕ್ಕೆ ಕಾರಣ’ವೆಂಬ ಶೀರ್ಷಿಕೆಯ ಕತೆಯಲ್ಲಿ ಡಾ॥
ರೋಗಿಗಳು ತಮ್ಮ ಕೆಲಸವಾದ ಮೇಲೆ ಡಾಕ್ಟರ್‌ಗೆ ಹಣ ಕೊಡದೇ ಸತಾಯಿಸುವ(ಬಿಸ್ಕೆಟ್ ಪೊಟ್ಟಣ ತಂದಿಡುವ) ಹಲ್ಲು ಸೆಟ್ಟು ಹಾಕಿಸಿಕೊಂಡು ಮರೆತೇ ಬಿಡುವ ಸಂದರ್ಭಗಳಲ್ಲಿ ಸಿಟ್ಟು ಬಂದರೂ ತಮ್ಮ ವೃತ್ತಿಧರ್ಮ ಬಿಡದೇ ಚಿಕಿತ್ಸೆ ನೀಡುವ ಚಿತ್ರಣ ನೋಡಿ ನನಗೆ ಬರುತ್ತಿದ್ದ ಕೋಪದಲ್ಲಿ ಆತನ ಪತ್ನಿಗೆ ಅರಿವಳಿಕೆ ಚುಚ್ಚುಮದ್ದು ನೀಡದೇ ಹಲ್ಲು ಕೀಳುವಷ್ಟು ರೋಷ ನನ್ನೊಳಗಿತ್ತು. ಒಂದೆರಡು ಕ್ಷಣ ಅವಡು ಗಚ್ಚಿ ಸಾವರಿಸಿಕೊಂಡು ಶಾಂತವಾಗಿ ಎಲ್ಲಾ ರೋಗಿಗಳ ಹಾಗೆ ನೋಡಿ ಹಲ್ಲು ಕಿತ್ತು ನೋವನ್ನು ಶಮನ ಮಾಡಿ ರೋಗಿಯ ಆನಂದ ಬಾಷ್ಪದಲ್ಲಿ ಸಾರ್ಥಕತೆ ಕಂಡುಕೊಳ್ಳುವ ಚಿತ್ರಣ ಹೃದಯ ಕಲುಕುವಂತಿದೆ.
ಯಾವುದೇ ದಂತ ವೈದ್ಯನಿಗೆ ಆರಂಭದ ದಿನಗಳು ಯಾತನಾಮಯ ದಿನಗಳಾಗಿರುತ್ತವೆ. ಆಗಲೇ ಜಿಪುಣ ರೋಗಿ ಧನಿಕನಾದರೂ ಮೋಸ ಮಾಡಿದರೆ ನಿಜಕ್ಕೂ ಅಘಾತಕಾರಿ. ಅಂತಹ ಸಂದರ್ಭದಲ್ಲೂ ವೃತ್ತಿ ಧರ್ಮ ಮೇಲೆತ್ತಿ ಹಿಡಿದ ವೈದ್ಯೆಯ ಅನಿಸಿಕೆಗಳು ವೈದ್ಯ ವೃತ್ತಿಗೆ ಗೌರವ ತರುವಂತಿವೆ. (ಡಾ॥
‘ನನ್ನ ನೆನಪಿನಂಗಳದಲ್ಲಿ ಅರಳಿದ ಹೂಗಳು’’..ಸಂಕಲನದ ಒಂದು ಉತ್ತಮ ಕಥೆ. ವೃತ್ತಿಯ ಅಧ್ಯಯನದ ಜತೆಗೆ ಈ ಹಿರಿಯ ವೈದ್ಯರಿಗೆ (ಡಾ॥
ಕೃತಿಯ ಉದ್ದಕ್ಕೂ ಇಂಥ ಅಂತರಂಗಕ್ಕೆ ಮುಟ್ಟುವ ಮಾನವೀಯ ಮೌಲ್ಯಗಳ ಸ್ಪರ್ಶವಿರುವ ಹೇರಳ ಅನುಭವಗಳು ದೊರಕುತ್ತವೆ. ಡಾ ಹರಿಕೃಷ್ಣರ ‘ಕರ್ಮಣ್ಯೇವಾಧಿಕಾರಸ್ತೇ’ ಕಥೆ ಒಂದೊಳ್ಳೆ ವಿನೋದ ಲೇಖನದ ಓದನ್ನು ಒದಗಿಸುತ್ತದೆ. ಮಧ್ಯರಾತ್ರಿ ಬರುವ ‘ಯಮ’ರ್ಜನ್ಸಿಕಾಲ್ ಅವರ ಇಡೀ ರಾತ್ರಿಯನ್ನು ಹಾಳು ಮಾಡಿದ ರೀತಿ, ತಾನು ಚಿಕಿತ್ಸೆಯನ್ನೇ ಮಾಡದ ರೋಗಿಯೊಬ್ಬನ ಹೆಂಡತಿ ಕೇವಲ ‘ಬಾಯ್ಬಲ’ದಿಂದ ಡಾಕ್ಟರಿಗೆ ಚಳ್ಳೆ ಹಣ್ಣು ತಿನ್ನಿಸುವ ಪರಿ ನಗೆಯುಕ್ಕಿಸುತ್ತದೆ.
‘ಅಪರಾಧಿ ನಾನಲ್ಲ’ ಎಂದು ಸಾಬೀತು ಪಡಿಸಲಿಕ್ಕಾದರೂ ನಾನೀಗ ಮಧ್ಯರಾತ್ರಿಯಲ್ಲಿ ಕ್ಲೀನಿಕ್‌ಗೆ ಹೋಗಲೇಬೇಕಿತ್ತು. ವೃತ್ತಿಧರ್ಮ ನನ್ನನ್ನು ಹಿಂದಿನಿಂದ ತಳ್ಳಲು, ಕುತೂಹಲ ಮುಂದಿನಿಂದ ಎಳೆಯುತ್ತಿತ್ತು (ಪುಟ 34, ಕರ್ಮಣ್ಯೇವಾಧಿಕಾರಸ್ತೇ) ವೈದ್ಯ ವೃತ್ತಿಯಲ್ಲಿ ಹಾಸ್ಯಪ್ರಜ್ಞೆಯೂ ಒಂದು ರೀತಿಯ ಚೇತೋಹಾರಿ ಚಿಕಿತ್ಸೆಯೇ ಎಂಬುದನ್ನು ಸಾಬೀತುಪಡಿಸಿದ ಕಥೆ ಇದು.
ಮೂಲದಲ್ಲಿ ವಿನೋದವನ್ನೇ ಜೀವಾಳವಾಗಿಸಿಕೊಂಡ ಬರಹಗಳು ಇವಾದುದರಿಂದ ಇವುಗಳನ್ನು ಕಥೆಯೆಂದೇ ಕರೆದು ಓದಬೇಕಿಲ್ಲ. ಇಡೀ ಸಂಕಲನದುದ್ದಕ್ಕೂ ಹಾಸ್ಯದ ಘಟನೆಗಳೇ ಹೆಚ್ಚಿದ್ದು ಸಂಕಲನ ಕೈಗೆತ್ತಿಕೊಂಡಾಗಿಂದ ನಾವು ನಗಲೇ ಬೇಕಾಗುತ್ತದೆ (ಹಲ್ಲು ಕಾಣುವಷ್ಟು ದೊಡ್ಡ ನಗುವೇ ಉಕ್ಕುತ್ತದೆ!) ಕಾಸರಗೋಡಿನ ಹಿರಿಯ ದಂತ ವೈದ್ಯ ಡಾ॥
ತನ್ನ ಕೆಳದವಡೆಯ ಆಳವಾದ ತೂತಿಗೆ ಸ್ಟೀಲ್ ತೆಳು ಪೇಪರನ್ನು ಉಂಡೆ ಮಾಡಿಸಿ ತುರುಕಿಕೊಂಡು ಬಂದ ರೋಗಿ, ತನ್ನ ಅಲುಗಾಡುವ ಹಲ್ಲುಗಳಿಗೆ ತಾನೇ ಬೆಳ್ಳಿ ಸರಿಗೆಯಿಂದ ನೆಯ್ದುಕೊಂಡ ಚಿನಿವಾರ, ರೋಗಿಯನ್ನು ಕರೆದುಕೊಂಡು ಬಂದಾತನ ಬಳಿ, ‘‘ಹಲ್ಲು ಕೀಳುವಾಗ ರಕ್ತ ಬರುತ್ತದಾದ್ದರಿಂದ ನೋಡಲು ಭಯವಾಗಬಹುದು ನೀವು ಹೊರಗೆ ಕುಳಿತುಕೊಳ್ಳಿ’’ ಎಂದರೆ ‘‘ನಾನು ನೋಡುವುದು ಬಿಡಿ ರಕ್ತವನ್ನು ಕುಡಿಯಲೂ ತಯಾರಿದ್ದೇನೆ’’ ಎಂದುಲಿದು ತನ್ನ ಮೂಲದ ಬಗ್ಗೆ ಒಂದು ಐಡಿಯಾ ಕೊಟ್ಟ ವ್ಯಕ್ತಿ, ಹಲ್ಲು ಕೀಳಿಸಲು ಬಂದ ಮದ್ಯವ್ಯಸನಿಗಳು ನಿರ್ಮಿಸುವ ದೃಶ್ಯ, ನೋವು ನಿವಾರಕಗಳಿಲ್ಲದೆ ‘‘ಹಲ್ಲು ಕೀಳಿ’’ ಎಂದು ಚಾಲೆಂಜ್ ಮಾಡಿದ ಯೋಗ ಸಾಧಕ (ಹಾಗೇ ಮಾಡಿದಾಗ ಎರಡೂ ಕಣ್ಣಲ್ಲಿ ನೀರಂತೆ), ಹಲ್ಲು ಕೀಳಿಸಲು ಬಂದ ಪ್ರಸೂತಿ ತಜ್ಞೆ ಹಲ್ಲು ಕೀಳಿಸುವಾಗ ಧೈರ್ಯಕ್ಕೆ ಗಂಡನ ಕೈ ಹಿಡಿದುಕೊಳ್ಳುವ ದೃಶ್ಯ, ಇದ್ದಷ್ಟೂ ಹಣವನ್ನು ಡಾಕ್ಟರ್ ಕೈ ಮೇಲಿಟ್ಟ ಕುಡುಕ, ತಮ್ಮ ಹಲ್ಲನ್ನು ತಾವೇ ಕಿತ್ತುಕೊಂಡ ಕೊಡಗಿನ ದಂತ ವೈದ್ಯರು..... ಧಾರಾಳ ನಗುವನ್ನು ಒದಗಿಸುವ ಬರಹ ಇದು.
ಕರ್ನಾಟಕದ ವಿವಿಧ ಭಾಗಗಳ ದಂತ ವೈದ್ಯರುಗಳ ಬರೆದ ವಿವಿಧ ಪ್ರದೇಶದ ಜನರ ವೈಶಿಷ್ಟ್ಯಗಳನ್ನು ಚಿತ್ರಿಸುವ ಕಥೆಗಳು ಇಲ್ಲಿವೆ. ಸಿರಸಿಯ ಡಾ ನಾರಾಯಣ ಭಟ್ಟರು ಮಲೆನಾಡಿನ ಕೃಷಿಕ ರೋಗಿಗಳ ಮುಗ್ಧತೆಗೆ ಕನ್ನಡಿ ಹಿಡಿದಿದ್ದಾರೆ ) ಗಾರೆ ಮೇಸ್ತ್ರಿಯಿಂದ ಹಲ್ಲಿನ ಕುಳಿಗೆ ಸಿಮೆಂಟು ತುಂಬಿಸಿಕೊಂಡು ಬಂದ ರೋಗಿ, ‘‘ಬಾಯೊಳಗೆ ಅರಿವಳಿಕೆ ಇಂಜಕ್ಷನ್ ಬೇಡ ಬಲ ಭುಜಕ್ಕೆ ಕೊಟ್ಟು ಹಲ್ಲು ಕೀಳಿ’’ ಎಂದು ಅಪ್ಪಣೆ ಕೊಡಿಸುವ ರೋಗಿಗಳು ಮಧ್ಯರಾತ್ರಿ ಕಾಂಪೌಂಡು ಹಾರಿ ಬಂದು ಬಾಗಿಲು ಬಡಿಯುವ ದಂತ ಪೀಡಿತರು, ಹಲ್ಲಿನ ಚಿಕಿತ್ಸೆ ಮಾಡಿದ ವೈದ್ಯರಿಗೇ ಟೋಪಿ ಹಾಕುವ ಬುದ್ಧಿವಂತ ರೋಗಿಗಳು, ಹತ್ತೇ ರೂಪಾಯಿ ಎಂದರೆ ಇಪ್ಪತ್ತು ಇಟ್ಟು ಹೋಗುವ ‘ತಿಕ್ಕಲು’ ರೋಗಿಗಳು, ಸ್ಕಿಜೋಪ್ರೀನಿಯಾ ಎಂಬ ಭ್ರಮೆಯಿಂದ ಬಳಲುವ ಮಾನಸಿಕ ರೋಗಿ ‘‘ತಾನು ಬ್ರಹ್ಮನಾಗಿ ಬಿಟ್ಟಿದ್ದೇನೆ ನಾಲ್ಕು ತಲೆ ಹುಟ್ಟು ಬಿಟ್ಟಿದೆ, ಈಗ ಬಲಗಡೆ ತಲೆಯ ಬಾಯಲ್ಲಿ ಎಡಗಡೆ ಹಲ್ಲಿಗೆ ಹುಳುಕಾಗಿದೆ ಬೆಳ್ಳಿ ಹಾಕಿ ತುಂಬಿ ಡಾಕ್ಟ್ರೆ’’ ಎಂದು ವೈದ್ಯರಿಗೇ ತಲೆ ಕೆಡುವ ಹಾಗೆ ಮಾಡುವುದು.....‘‘ಕಿತ್ತ ಹಲ್ಲನ್ನೇ ಪುನಃ ಡಾಕ್ಟ್ರರ್‌ಗೆ ತಂದುಕೊಟ್ಟು ಬೇರೆಯವರಿಗೆ ಕಟ್ಟಿ ಕೊಡಿ’’ ಎನ್ನುವ ಶಿಖಾಮಣಿಗಳು, ಚಿಕಿತ್ಸೆಗೆಂದು ಬಂದ ಮಗು ಕಿಟಾರನೆ ಕಿರುಚಿ ಕ್ಲೀನಿಕ್‌ನಿಂದ ಹೊರಗೋಡಿ ನೂರಾರು ಜನ ಅದನ್ನು ಹಿಡಿಯಲು ಹೊರಟಾಗ ನಿರ್ಮಾಣವಾಗುವ ದೃಶ್ಯ..... ಹೀಗೆ ಇಡೀ ಪುಸ್ತಕವನ್ನು ಓದಿ ಮುಗಿಸುವಾಗ ನಮಗೆ ನಕ್ಕು ಹಗುರಾಗುವ ನೂರಾರು ದೃಶ್ಯಗಳು ಪಾತ್ರಗಳು ಕಂಡು ಬಂದು ನಗುವಿನ ಥೆರಪಿಗೆ ಒಳಗಾಗಿ ಗೆಲುವಾಗಿ ಬಿಡುತ್ತೇವೆ. ದಂತ ವೈದರೇ ಎಚ್ಚರೆಚ್ಚರ (ಡಾ॥
ಹೀಗೆ ಓದುಗರನ್ನು ನಗಿಸುತ್ತಲೇ ಆಳದಲ್ಲಿರುವ ಮಾನವೀಯ ಗುಣಗಳನ್ನು ಅನಾವರಣಗೊಳಿಸುವ ಈ ಕಥೆಗಳು ಓರ್ವ ಹಾಸ್ಯ ಲೇಖಕಿಯಾದ ನನಗೆ ಅತೀವ ಸಂತಸವನ್ನು ನೀಡಿವೆ. ‘‘ನಗುವೂ ನೋವು ನಿವಾರಕ’’ ಎನ್ನುತ್ತಾರೆ. ಈ ಕೃತಿಯಲ್ಲಿ ಧಾರಾಳ ನಗುವಿದೆ. ವೈದ್ಯರೆಂದರೆ ನಮ್ಮ ನೋವು ನೀಗಿಸಲು ಬಂದವರು ತಾನೆ? ಅವರೇ ನಗೆಯುಕ್ಕಿಸಿದ್ದಾರೆ. ಅಂದ ಬಳಿಕ ನಗುವಿನ ಡಬಲ್ ಧಮಾಕಾ! ಸಂಕೋಚ ಪಡದೇ ನಕ್ಕು (ಹಲ್ಲುಕಾಣುವಂತೇ ನಗಿರಿ) ಹಗುರಾಗಿ.
ತಮ್ಮ ಬಿಡುವಿರ ‘‘ದಂತೋತ್ಖನನ’’ ಕಾಯಕದ ನಡುವೆಯೂ ಸುಂದರವಾದ ಅನುಭವಗಳನ್ನು ನಮ್ಮೆದುರು ತೆರೆದಿಟ್ಟು ನಮ್ಮ ಮನಸ್ಸನ್ನು ಹಗುರಾಗಿಸಿದ ಎಲ್ಲ ಮೂವತ್ತೆರಡು ಹಿರಿ ಕಿರಿಯ ದಂತ ವೈದ್ಯರನ್ನೂ ನಾನು ಎಲ್ಲ ಕನ್ನಡ ಓದುಗರ ಪರವಾಗಿ ಅಭಿನಂದಿಸುತ್ತೇನೆ. ಈ ಕೃತಿ ವೈದ್ಯರ ಬಳಗದಲ್ಲಷ್ಟೇ ಅಲ್ಲ ಓದುಗರ ವಲಯದಲ್ಲೂ ಸಂಚಲನ ಮೂಡಿಸಬಲ್ಲ ಸಾಮರ್ಥ್ಯ ಹೊಂದಿರುವುದರಿಂದ ಸಾಹಿತ್ಯಲೋಕದಲ್ಲಿ ಇದರ ಸೂಕ್ತ ಪ್ರವೇಶವಾಗಿ ಸಂಪಾದಕರ ಶ್ರಮ ಸಾರ್ಥಕವಾಗಲಿ ಎಂದು ಹಾರೈಸುತ್ತೇನೆ. ‘ಚಿತ್ರಾನ್ನ’ ಕೃತಿಗಾಗಿ ಸಂಪರ್ಕ ಡಾ. ಮುರಲಿ ಮೋಹನ ಚೂಂತಾರು
9845135787







