ಬಿಎಸ್ಪಿ ಅಭ್ಯರ್ಥಿಗಳ ಮೂರನೆ ಪಟ್ಟಿ ಬಿಡುಗಡೆ
ಲಕ್ನೊ, ಜ.7: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 100 ಮಂದಿ ಅಭ್ಯರ್ಥಿಗಳ ತೃತೀಯ ಪಟ್ಟಿಯನ್ನು ಬಿಎಸ್‌ಪಿ ಬಿಡುಗಡೆ ಮಾಡಿದ್ದು ಇದರೊಂದಿಗೆ ಒಟ್ಟು 403 ಕ್ಷೇತ್ರಗಳ ಪೈಕಿ 300 ಕ್ಷೇತ್ರಗಳಿಗೆ ಬಿಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಂತಾಗಿದೆ. ಬಿಎಸ್‌ಪಿ ಬಿಡುಗಡೆ ಮಾಡಿದ ಪ್ರಥಮ ಪಟ್ಟಿಯಲ್ಲಿ 36 ಮುಸ್ಲಿಂ ಅಭ್ಯರ್ಥಿಗಳಿದ್ದರೆ , ದ್ವಿತೀಯ ಪಟ್ಟಿಯಲ್ಲಿ 22 ಮತ್ತು ಮೂರನೆ ಪಟ್ಟಿಯಲ್ಲಿ 24 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ರಾಜ್ಯದ ಒಟ್ಟು ಮತದಾರರ ಪೈಕಿ ಶೇ.20ರಷ್ಟು ಮುಸ್ಲಿಮರು ಇರುವ ಕಾರಣ ಅವರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಬಿಎಸ್‌ಪಿ ಪ್ರಕಟಿಸಿರುವ ಪಟ್ಟಿಯಲ್ಲಿ ನಿಚ್ಚಳವಾಗಿದೆ.
Next Story





