ಕಾಪು ತಾಲೂಕು ರಚನೆಗೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

ಪಡುಬಿದ್ರೆ, ಜ.7: ಕಾಪು ಕ್ಷೇತ್ರವನ್ನು ತಾಲೂಕು ರಚನೆಗೆ ಆಗ್ರಹಿಸಿ ಕಾಪು ತಾಲೂಕು ಹೋರಾಟ ಸಮಿತಿಯು ಶನಿವಾರ ಉಡುಪಿ ಜಿಲ್ಲೆಯ ಗಡಿಭಾಗ ಹೆಜಮಾಡಿಯಿಂದ ಕಾಪುವಿನವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತು. ಶಾಸಕ ವಿನಯಕುಮಾರ್ ಸೊರಕೆ ಮತ್ತು ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ನೇತೃತ್ವದಲ್ಲಿ ಕಾಪು ಕ್ಷೇತ್ರವನ್ನು ತಾಲೂಕನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಸಾರ್ವಜನಿಕ ಜಾಗೃತಿಗಾಗಿ ಹೆಜಮಾಡಿಯಿಂದ ಉದ್ಯಾವರದವರೆಗೆ 2 ದಿನಗಳ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದ್ದು, ಹೆಜಮಾಡಿ ಪೇಟೆಯಲ್ಲಿ ಜಾಥಾಗೆ ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಬಳಿಕ ನೂರಾರು ಜನರು ಹೆಜಮಾಡಿಯಿಂದ ಕಾಪುವಿನವರೆಗೆ ಕಾಲ್ನಿಡಿಗೆ ಜಾಥಾ ನಡೆಸಿದರು.
ಹೆಜಮಾಡಿಯಿಂದ ಆರಂಭಗೊಂಡ ಮೊದಲ ದಿನದ ಜಾಥಾವು ಹೆಜಮಾಡಿ, ಪಡುಬಿದ್ರೆ, ಎರ್ಮಾಳು, ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಮೂಲಕ ಕಾಪು ಪೇಟೆಗೆ ತಲುಪಿತು. ನಾಳೆ ಕಾಪುವಿನಲ್ಲಿ ಆರಂಭಗೊಳ್ಳುವ ಜಾಥಾವು ಕಟಪಾಡಿ, ಉದ್ಯಾವರದವರೆಗೆ ನಡೆಯಲಿದೆ. ಈ ಸಂದರ್ಭ ಕಾಪು ಶಾಸಕ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕ್ರೆಸ್ತ ಧರ್ಮಗುರು ಾ.್ರಾಂಸಿಸ್ ಕ್ಸೇವಿಯರ್ ಗೋಮ್ಸ್, ಕನ್ನಂಗಾರ್ ಜುಮಾ ಮಸೀದಿಯ ಧರ್ಮಗುರು ಅಶ್ರ್ ಸಖಾಫಿ ಕಿನ್ಯ, ಯು.ಪಿ.ಉಪಾಧ್ಯಾಯ ಮಾತನಾಡಿದರು.
ಕಾಪು ತಾಲೂಕು ಹೋರಾಟ ಸಮಿತಿಯ ಲೀಲಾಧರ ಶೆಟ್ಟಿ, ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ದೀಪಕ್ ಎರ್ಮಾಳು, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ದಿವಾಕರ ಶೆಟ್ಟಿ, ಶಶಿಧರ ಶೆಟ್ಟಿ, ನವೀನ್ ಎನ್.ಶೆಟ್ಟಿ, ಸುೀರ್ ಹೆಗ್ಡೆ, ಗುಲಾಂ ಮುಹಮ್ಮದ್, ಕನ್ನಂಗಾರ್ ಜುಮಾ ಮಸೀದಿಯ ಅಧ್ಯಕ್ಷ ಎಚ್.ಬಿ.ಮುಹಮ್ಮದ್, ವಾಮನ ಕೋಟ್ಯಾನ್, ಗಣೇಶ್ ಆಚಾರ್ಯ ಉಚ್ಚಿಲ, ಕಿಶೋರ್ ಕುಮಾರ್ ಎರ್ಮಾಳು, ಗಣೇಶ್ ಕೋಟ್ಯಾನ್, ಜಿತೇಂದ್ರ ಪುರ್ಟಾಡೋ, ದಮಯಂತಿ ವಿ. ಅಮೀನ್, ವೈ. ಸುಕುಮಾರ್, ಅಬ್ದುಲ್ ಹಮೀದ್ ಹೆಜಮಾಡಿ, ಹನ್ೀ ಹೆಜಮಾಡಿ ಉಪಸ್ಥಿತರಿದ್ದರು.







