ಓಂ ಪುರಿ ಸಾವಿನ ಸುತ್ತ ಸಂಶಯ !

ಮುಂಬೈ, ಜ.8: ಓಂಪುರಿಯ ಸಾವಿನ ಬಗ್ಗೆ ಮುಂಬೈ ಪೊಲೀಸರು ಆಕಸ್ಮಿಕ ಮರಣದ ವರದಿಯನ್ನು (ಎಡಿಆರ್) ದಾಖಲಿಸಿದ್ದಾರೆ. ವರದಿಗಳ ಪ್ರಕಾರ ಆರಂಭದ ಪೋಸ್ಟ್ ಮಾರ್ಟಂ ವರದಿಯಲ್ಲಿ ಸಾವಿಗೆ ಕಾರಣ ಪತ್ತೆಯಾಗಿಲ್ಲ ಎಂದು ಬರೆಯಲಾಗಿದೆ. ಹೀಗಾಗಿ ಸಾವಿನ ಸುತ್ತ ಊಹಾಪೋಹಗಳು ಎದ್ದಿದ್ದವು. ಈ ನಡುವೆ ಪೊಲೀಸರು ಓಂಪುರಿಯವರ ಮನೆ ಕೆಲಸದವರು ಮತ್ತು ವಾಹನ ಚಾಲಕನನ್ನು ವಿಚಾರಣೆ ನಡೆಸಿರುವುದಾಗಿ ವರದಿಯಾಗಿದೆ.
1950 ಅಕ್ಟೋಬರ್ 18ರಂದು ಹರಿಯಾಣದ ಅಂಬಾಲದಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಓಂಪುರಿ ಹಲವು ಪ್ರಶಸ್ತಿ ವಿಜೇತ ಸಿನೆಮಾಗಳಲ್ಲಿ ನಟಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ವಿವಿಧ ಭಾಷಾ ಸಿನೆಮಾಗಳಲ್ಲಿ ನಟಿಸಿದ ಹಿರಿಮೆ ಅವರದು.
Next Story





