ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕೇಜ್ರಿವಾಲ್ ಚಾಣಾಕ್ಷ ನಡೆ.!

ಲಕ್ನೋ,ಜ.8: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸ್ಪರ್ಧಿಸುವುದಿಲ್ಲ. ಆದರೆ ಬಿಜೆಪಿಯನ್ನು ಮಣಿಸಲು ರಣತಂತ್ರ ರೂಪಿಸಲಿದೆ.
ಪಂಜಾಬ್ ಮತ್ತು ಗೋವಾದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಎಎಪಿಯ ಎಲ್ಲ ನಾಯಕರು ಉತ್ತರ ಪ್ರದೇಶದ ಚುನಾವಣೆ ಕಡೆಗೆ ಗಮನ ಹರಿಸಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
ಬಿಜೆಪಿಯು ಐನೂರು ಹಾಗೂ ಸಾವಿರ ರೂ. ನೋಟು ನಿಷೇಧದ ಯಶಸ್ಸನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಲಿದೆ. ಆದರೆ ಇದೊಂದು ಕೇಂದ್ರದ ಆಡಳಿತಾರೂಢ ಬಿಜೆಪಿ ಸರಕಾರದ ದೊಡ್ಡ ಹಗರಣವಾಗಿದೆ ಎಂದು ಎಎಪಿ ವಕ್ತಾರ ವೈಭವ್ ಮಹೇಶ್ವರಿ ತಿಳಿಸಿದ್ದಾರೆ.
ಎಎಪಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ತಂತ್ರ ರೂಪಿಸುತ್ತಿದ್ದು, ಎಎಪಿಯ ಎಲ್ಲ ನಾಯಕರು ಬಿಜೆಪಿಯನ್ನು ಮಣಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಿದ್ದಾರೆಂದು ವೈಭವ್ ಮಹೇಶ್ವರಿ ಮಾಹಿತಿ ನೀಡಿದ್ದಾರೆ.
Next Story





