4 ಮನೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ
ಮುಂಡಗೋಡ, ಜ.8: ಅಕಸ್ಮಿಕ ಬೆಂಕಿ ತಗುಲಿ 4 ಮನೆಗಳು ಸುಟ್ಟು ಸುಮಾರು 8 ಲಕ್ಷ ರೂ. ಹಾನಿಯಾದ ಘಟನೆ ತಾಲೂಕಿನ ಕಾತೂರ ಪಂಚಾಯತಿ ವ್ಯಾಪ್ತಿಯ ಶಿಂಗ್ನಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ದೇವರಿಗೆ ಹಚ್ಚಿದ ದೀಪದಿಂದಲೇ ಬೆಂಕಿ ಹತ್ತಲು ಕಾರಣವೆನ್ನಲಾಗುತ್ತಿದೆ.
ಪ್ರಭು ಶಿವಪ್ಪಗೌಡ ಪಾಟೀಲ, ಜಗನ್ನಾಥ ಶಿವಪ್ಪಗೌಡ ಪಾಟೀಲ, ದೇವೆಂದ್ರ ಶಂಭುಗೌಡಾ ಪಾಟೀಲ ಹಾಗೂ ಸರೋಜಾ ಕುಬೇರಗೌಡ ಪಾಟೀಲ ಎಂಬವರ ಮನೆಗಳು ಬೆಂಕಿಗೆ ಆಹುತಿಯಾಗಿದೆ.
ಘಟನಾ ಸ್ಥಳಕ್ಕೆ ಮುಂಡಗೋಡ, ಹಾನಗಲ್ ಹಾಗೂ ಶಿರಸಿಯ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು.
ಮುಂಡಗೋಡ ಠಾಣಾ ಪಿಎಸ್ಸೈ ಲಕ್ಕಪ್ಪ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಘಟನಾ ಸ್ಥಳಕ್ಕೆ ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಸದಸ್ಯ ಎಲ್.ಟಿ.ಪಾಟೀಲ, ರವಿಗೌಡಾ ಪಾಟೀಲ, ಜಯಮ್ಮ ಕೃಷ್ಣಾಪಾಟೀಲ ಮುಂತಾದ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ
Next Story





