ನಾದಿನಿಗೆ ಚುಂಬಿಸಿದ್ದ ಭಾವನ ಸೆರೆ

ಬೆಂಗಳೂರು, ಜ. 8 : ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಯುವತಿಯನ್ನು ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾಗಿದ್ದ ವಿಕೃತಕಾಮಿ ಆಕೆಯ ಭಾವನನ್ನು ರವಿವಾರ ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪಿ ಇರ್ಷಾದ್ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೆ.ಜಿ.ಹಳ್ಳಿಯಲ್ಲಿ ಬೆಳಗ್ಗೆ 6.30ರ ವೇಳೆಯಲ್ಲಿ ಯುವತಿಗೆ ಹಿಂದಿನಿಂದ ಓಡಿ ಬಂದು ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾಗಿರುವುದಾಗಿ ಆರೋಪಿಸಲಾಗಿತ್ತು. ಆದರೆ ಪೊಲೀಸರ ವಿಚಾರಣೆ ವೇಳೆ ಆತ ತನ್ನ ನಾಲಗೆ ಕಚ್ಚಿಲ್ಲ.ತಾನೇ ತನ್ನ ನಾಲಗೆ ಕಚ್ಚಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಳು.
ಯುವತಿಯ ಅಕ್ಕನನ್ನೇ ಮದುವೆಯಾಗಿದ್ದ ಇರ್ಷಾದ್‍ಗೆ ನಾದಿನಿ ಮೇಲೂ ವ್ಯಾಮೋಹವಿತ್ತು. ನಾದಿನಿಗೂ ಭಾವನ ಮೇಲೆ ಪ್ರೀತಿ ಇತ್ತು. ಆದ್ರೆ ಮನೆಯವರು ಒಪ್ಪಿಗೆ ನೀಡೋದಿಲ್ಲ ಎಂಬ ವಿಚಾರ ಗೊತ್ತಾಗಿ ಇಬ್ಬರೂ ಸೇರಿಕೊಂಡು ಇಂತಹ ಕಟ್ಟುಕತೆ ಸೃಷ್ಟಿಸಿರುವುದಾಗಿ ಪೊಲೀಸರ ಮುಂದೆ ಇರ್ಷಾದ್ ಬಾಯಿ ಬಿಟ್ಟಿದ್ದಾನೆ. ಯುವತಿಗೆ ಮಾನ ಹಾನಿಯಾದರೆ ಆಕೆಯನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ. ಇದು ತಮ್ಮ ಮದುವೆಗೆ ಅನುಕೂಲವಾಗಬಹುದು ಎಂಬ ಯೋಚನೆಯೊಂದಿಗೆ ಈ ನಾಟಕವಾಡಿರುವುದಾಗಿ ಇರ್ಷಾದ್ ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾನೆ.





