ಜನರನ್ನು ಕೊಳ್ಳೆ ಹೊಡೆದ ಪ್ರಧಾನಿಯಿಂದ ಅಭಿವೃದ್ಧಿ ಯೋಜನೆಗಳ ಘೋಷಣೆ: ಯೆಚೂರಿ

ತಿರುವನಂತಪುರಂ,ಜ.8: ಪ್ರಧಾನಿ ಘೋಷಿಸುವ ಅಭಿವೃದ್ಧಿ ಯೋಜನೆಗಳು, ಜೇಬು ಕೊಳ್ಳೆಹೊಡೆದ ವ್ಯಕ್ತಿಯೇ. ಕೊಳ್ಳೆಹೊಡೆದ ಹಣದಿಂದ ಹಣಕಳಕೊಂಡವರಿಗೆ ಸಹಾಯ ಮಾಡುವಂತಿದೆ ಎಂದು ಸಿಪಿಐ ಪ್ರಧಾನಕಾರ್ಯದರ್ಶಿ ಸೀತರಾಂ ಯೆಚೂರಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಸಮೀಪಿಸಿದ್ದು, ಕೋಮುವಾದ ಕೆರಳಿಸಿ ವೋಟು ಕಬಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಪ್ಪು ಹಣ ಬಿಳಿ ಮಾಡುವುದೆಂದು ನೋಟು ಅಮಾನ್ಯಗೊಳಿಸಿದ ತನ್ನ ಕ್ರಮವನ್ನು ಪ್ರಧಾನಿ ಜನರ ಮುಂದೆ ಸಮರ್ಥಿಸಿಕೊಂಡಿದ್ದರು. ರಿಸರ್ವ್ ಬ್ಯಾಂಕ್‌ನ ಲೆಕ್ಕಕಿಂತ ಹೆಚ್ಚಿನ ಹಣ ಬ್ಯಾಂಕ್‌ಗೆ ಜಮೆಯಾಗುತ್ತಿದೆಯೇ ಎಂದು ಯಾರೂ ಸಂಶಯಿಸಿಯಾರು. ಆದರೆ ಹಾಗೆ ಆಗಿಲ್ಲ.ನೋಟು ಅಮಾನ್ಯ ಕ್ರಮದಿಂದ ದೇಶದ ಆದಾಯಕ್ಕೆ ಹಾನಿಯಾಗಿಲ್ಲ ಎನ್ನುತ್ತಾರೆ. ಸೆಪ್ಟಂಬರ್‌ವರೆಗಿನ ಲೆಕ್ಕವನ್ನು ಹೇಳಿ ಆದಾಯ ಹೆಚ್ಚಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಯೆಚೂರಿ ಹೇಳಿದ್ದಾರೆ.
ಧಾರ್ಮಿಕ ಸೌಹಾರ್ದ, ಜಾತ್ಯತೀತತೆ ನಾಶಪಡಿಸಿ ಜನರನ್ನು ವಿಭಜಿಸುವ ಕೋಮು ಅಜೆಂಡಾಗಳನ್ನು ಆರೆಸ್ಸೆಸ್ ಜಾರಿಗೊಳಿಸಲು ಯತ್ನಿಸುತ್ತಿದೆ. ಇದನ್ನು ಎಲ್ಲರೂ ಸೇರಿ ತಡೆಯಬೇಕಿದೆ. ತ್ರಿವಳಿ ತಲಾಕ್ ವಿಷಯದಲ್ಲಿ ಬಿಜೆಪಿ ತನ್ನ ಕೋಮು ಅಜೆಂಡಾ ಜಾರಿಗೆ ತರಲು ಯತ್ನಿಸುತ್ತಿದೆ. ದಿಲ್ಲಿ ಚುನಾವಣೆಯಲ್ಲಿ ಜನರು ಬಿಜೆಪಿಗೆ ಒಂದನೆ ತಲಾಕನ್ನು, ಬಿಹಾರದಲ್ಲಿ ಜನರು ಎರಡನೆ ತಲಾಕ್ ಹೇಳಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಜನರು ಮೂರನೆ ತಲಾಕ್ ಕೊಡಲಿದ್ದಾರೆ ಎಂದು ಯೆಚೂರಿ ಮಾರ್ಮಿಕವಾಗಿ ಹೇಳಿದರು. ಅವರು ಸಿಪಿಐಎಂ ಕೇಂದ್ರ ನಾಯಕರ ಸಭೆಯ ಪ್ರಯುಕ್ತ ಪುತ್ತರಿಕಂಡಂ ಮೈದಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎ.ಕೆ. ಬಾಲನ್, ಥಾಮಸ್ ಐಸಾಕ್,ಕೆ.ಕೆ. ಶೈಲಜಾ ಮುಂತಾದವರು ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.







