Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನಗದು ಸಮಾಜದಿಂದ ಕಡಿಮೆ ನಗದಿನತ್ತ ದೇಶ...

ನಗದು ಸಮಾಜದಿಂದ ಕಡಿಮೆ ನಗದಿನತ್ತ ದೇಶ ದಾಪುಗಾಲು : ಪ್ರಕಾಶ್ ಜಾವಡೇಕರ್

ಯುವಜನತೆ ಬದಲಾವಣೆಯ ಹರಿಕಾರರಾಗಲು ಜಾವಡೇಕರ್ ಕರೆ

ವಾರ್ತಾಭಾರತಿವಾರ್ತಾಭಾರತಿ8 Jan 2017 5:56 PM IST
share
ನಗದು ಸಮಾಜದಿಂದ ಕಡಿಮೆ ನಗದಿನತ್ತ  ದೇಶ ದಾಪುಗಾಲು : ಪ್ರಕಾಶ್ ಜಾವಡೇಕರ್

ಮಣಿಪಾಲ, ಜ.8: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶ ನಗದು ಸಮಾಜದಿಂದ ಕಡಿಮೆ ನಗದು (ಕ್ಯಾಶ್ಲೆಸ್ ) ಸಮಾಜವಾಗುವತ್ತ ದಾಪುಗಾಲು ಹಾಕುತಿದ್ದು, ದೇಶದ ಯುವಜನತೆ ಈ ಬದಲಾವಣೆಯ ಹರಿಕಾರರಾಗುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಮಣಿಪಾಲ ವಿವಿ ವತಿಯಿಂದ ಪಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಚೈತ್ಯ ಸಭಾಂಗಣದಲ್ಲಿ ಮಣಿಪಾಲ ವಿವಿಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನುದ್ದೇಶಿಸಿ ‘ಡಿಜಿಟಲ್ ಸಾಕ್ಷರತಾ ಕಾರ್ಯಾಚರಣೆ’ (ಡಿಜಿಟಲ್ ಲಿಟರಷಿ ಕ್ಯಾಂಪೇನ್) ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.

ಇತ್ತೀಚಿನ ವರ್ಷಗಳಲ್ಲಿ ದೇಶ ಅಲ್ಪಸಮಯದಲ್ಲಿ ಸಾಧಿಸಿದ ಪ್ರಗತಿಯ ವಿವರಗಳನ್ನು ನೀಡಿದ ಸಚಿವರು, ಡಿಜಿಟಲ್ ಸಾಕ್ಷರತಾ ಕಾರ್ಯಾಚರಣೆಯ ಫಲಿತಾಂಶವನ್ನು ಅತಿ ಶೀಘ್ರದಲ್ಲಿ  ನೋಡಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 ಕ್ಯಾಶ್‌ ಲೆಸ್ ನ ಪ್ರಯೋಜನಗಳನ್ನು ಪಟ್ಟಿ ಮಾಡಿ ಒಂದೊಂದನ್ನೇ ವಿದ್ಯಾರ್ಥಿಗಳಿಗೆ ವಿವರಿಸಿದ ಪ್ರಕಾಶ್ ಜಾವಡೇಕರ್, ಈ ಕಲ್ಪನೆಯನ್ನು ದೈನಂದಿನ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶದಲ್ಲಿ ಮಹತ್ವದ ಬದಲಾವಣೆ ಅತಿ ಶೀಘ್ರವಾಗಿ ಘಟಿಸುವಂತೆ ನೋಡಿಕೊಳ್ಳುವಂತೆ ಕಿವಿಮಾತು ಹೇಳಿದರು.

 ಡಿಜಿಟಲ್ ಇಂಡಿಯಾ ಕಾರ್ಯಾಚರಣೆಯ ಸಂಪೂರ್ಣ ವಿವರಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (ಎಂಎಚ್‌ಆರ್‌ಡಿ) ವೆಬ್‌ಸೈಟ್ ನಲ್ಲಿದೆ. ಅವುಗಳನ್ನು ಸಂಪೂರ್ಣವಾಗಿ ಮನನ ಮಾಡಿಕೊಂಡು ಅದರ ಭಾಗವಾಗಲು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು. ಮೊದಲು ನೀವು, ಬಳಿಕ ನಿಮ್ಮ ಕುಟುಂಬ ಅದಾದನಂತರ ನಿಮ್ಮ ಆಸುಪಾಸಿನ 10 ಕುಟುಂಬಗಳು ಲೆಸ್‌ಕ್ಯಾಶ್‌ಗೆ ಪರಿವರ್ತನೆಗೊಳ್ಳುವಂತೆ ನೋಡಿಕೊಳ್ಳಿ ಎಂದು ಜಾವಡೇಕರ್ ತಿಳಿಸಿದರು.

ನಗದಿನಿಂದ ಪ್ಲಾಸ್ಟಿಕ್ ಮನಿ ಅಲ್ಲಿಂದ ಡಿಜಿಟಲ್‌ಗೆ ಭಾರತದ ಪ್ರಗತಿ ಅತ್ಯುತ್ತಮವಾಗಿದೆ. ಯುವ ಜನತೆಯಿಂದ ಈ ಬದಲಾವಣೆಗಳು ಅತಿ ಶೀಘ್ರ ವಾಗಿ ಮಾಡಲು ಸಾಧ್ಯವಾಗಲಿದೆ. ನಮ್ಮ ಈ ಬದಲಾವಣೆಯ ಕರೆಗೆ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ಇಂದಿನವರೆಗೆ 2.35 ಲಕ್ಷ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದವರು ಹೇಳಿದರು.

ಹಣವೆಂದರೆ....: ಹಣವೆಂದರೆ ಏನು ಎಂದು ಪ್ರಶ್ನಿಸಿದ ಸಚಿವರು, ಹಣವೆಂದರೆ ನಗದಲ್ಲ. ಹಣವೆಂಬುದು ವಿನಿಮಯದ ಮಾಧ್ಯಮ. ಶತಮಾನಗಳ ಮೊದಲಿನಿಂದ ಹಣವೆಂಬುದು ಮೊದಲು ನಾಣ್ಯದ ರೂಪ ದಲ್ಲಿತ್ತು. ಬಳಿಕ ಅದು ಕಾಗದ ರೂಪ ತಳೆಯಿತು. ಅನಂತರ ಪ್ಲಾಸ್ಟಿಕ್ ಈಗ ಡಿಜಿಟಲ್ ರೂಪಕ್ಕೆ ಬಂದು ನಿಂತಿದೆ. ಇದರಿಂದ ಈಗ ನೀವು ಕುಳಿತಲ್ಲೇ ಮೊಬೈಲ್ ಮೇಲೆ ಬೆರಳನ್ನು ಆಡಿಸುವುದರಿಂದ ಹಣದ ವಿನಿಮಯ ಮಾಡಿಕೊಳ್ಳಬಹುದು ಎಂದರು.

ತಂತ್ರಜ್ಞಾನದ ಬಳಕೆಯಿಂದ ಇಂದು ಡಿಜಿಟಲ್ ಎಂಬುದು ಅತ್ಯಂತ ಸರಳವಾಗಿದೆ. ಈ ಮೊದಲು ಪೆಟ್ರೋಲ್ ಬಂಕ್‌ಗಳಲ್ಲಿ ಶೇ.20ರಷ್ಟು ಮಾತ್ರ ಡಿಜಿಟಲ್ ವ್ಯವಹಾರ ನಡೆಯುತ್ತಿದ್ದರೆ, ಕಳೆದೆರಡು ತಿಂಗಳಿಂದ ಇದರ ಪ್ರಮಾಣ ಶೇ.70ಕ್ಕೇರಿದೆ. ಇದನ್ನೇ ನಾವು ಎಲ್ಲಾ ಕ್ಷೇತ್ರಗಳಲ್ಲೂ ಮಾಡಲು ಹೊರಟಿದ್ದೇವೆ. ತರಕಾರಿ ವ್ಯಾಪಾರಿಗಳು, ಪಾನ್‌ವಾಲಾಗಳು, ಜಿನಸಿನ ವ್ಯಾಪಾರಿಗಳು ಎಲ್ಲರೂ ಡಿಜಿಟಲ್ ವ್ಯವಹಾರ ನಡೆಸಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಜಾವಡೇಕರ್ ವಿವರಿಸಿದರು.

ಇದನ್ನು ನಾವು ದಾಖಲೆ ಸಮಯದಲ್ಲಿ ಮಾಡಲು ಸಾಧ್ಯವಿದೆ. ಆದರೆ ಸಮಸ್ಯೆ ಇರುವುದು ನಮ್ಮ ಆಲೋಚನಾ ಶೈಲಿ (ಮೈಂಡ್‌ಸೆಟ್)ಯಲ್ಲಿ. ದೇಶ ಕಡಿಮೆ ನಗದು ಸಮಾಜವೆನಿಸಿಕೊಳ್ಳಲು ನಾವು ಆಲೋಚಿಸುವ ರೀತಿಯಲ್ಲಿ ಬದಲಾವಣೆಯಾಗಬೇಕಾಗಿರುವುದು ಅತೀ ಮುಖ್ಯ. ನೀವು ದೇಶದಲ್ಲಿ ಭಾರೀ ಬದಲಾವಣೆಯನ್ನು ಕಾಣುತ್ತಿದ್ದೀರಿ. ಇದು ಮಾಮೂಲು ಬದಲಾವಣೆಯಲ್ಲ ಎಂದರು.

ಸ್ವಾತಂತ್ರಕ್ಕೂ ಪೂರ್ವದಲ್ಲಿ ಗಾಂಧೀಜಿ ನೀಡಿದ ಕರೆಯಂತೆ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟದ ಸೈನಿಕರಾದರು. ದೇಶ ಸ್ವತಂತ್ರವಾಯಿತು. ಅದೇ ರೀತಿ ದೇಶದಲ್ಲಿ ಇಂದು ನಗದು ಸಮಾಜದಿಂದ ಕಡಿಮೆ ನಗದು ಸಮಾಜದತ್ತ ಬದಲಾವಣೆಯಾಗಬೇಕಾಗಿದೆ. ಇದರ ಯಶಸ್ಸು ವಿದ್ಯಾರ್ಥಿಗಳ ಮೇಲೆ ನಿಂತಿದೆ ಎಂದು ಪ್ರಕಾಶ್ ಜಾವಡೇಕರ್ ನುಡಿದರು.

ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರು , ಕುಲಪತಿ ಡಾ.ಎಚ್.ವಿನೋದ್ ಭಟ್ ವಂದಿಸಿದರು.

ಡಾ.ರಂಜನ್ ಪೈ, ಮೋಹನದಾಸ್ ಪೈ ಮುಂತಾದವರು ಉಪಸ್ಥಿತರಿದ್ದರು.

ಸಚಿವರಿಂದ ಉದ್ಘಾಟನೆ:

ಹೊಟೇಲ್ ವ್ಯಾಲಿವ್ಯೆನಲ್ಲಿ ಮಣಿಪಾಲ ವಿವಿಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಬಳಿಕ ಮಣಿಪಾಲ ದಂತ ವಿಜ್ಞಾನ ಕಾಲೇಜು ಅಭಿವೃದ್ಧಿ ಪಡಿಸಿರುವ ಎರಡು ಸೌಲಭ್ಯಗಳನ್ನು ಉದ್ಘಾಟಿಸಿದರು.

ಮೊದಲು ಸೆಂಟರ್ ಫಾರ್ ಫುಲ್‌ವೌತ್ ಇಂಪ್ಲಾಂಟ್ ರೀಹೆಬಿಲಿಟೇಶನ್ ವಿದ್ ಡೆಂಟಲ್ ಇಂಪ್ಲಾಂಟ್‌ನ್ನು ಉದ್ಘಾಟಿಸಿದ ಸಚಿವರು , ಅನಂತರ ಕೋನ್ ಬೀಮ್ ಕಂಪ್ಯೂಟೆಡ್ ಟೋಮೋಗ್ರಫಿಯನ್ನು (ಸಿಬಿಸಿಟಿ) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಡೀನ್ ಡಾ.ನಿರ್ಮಲಾ ಎಸ್.ರಾವ್ ಉಪಸ್ಥಿತರಿದ್ದರು.

 ಫುಲ್‌ವೌತ್ ಇಂಪ್ಲಾಂಟ್ ಕೇಂದ್ರದಲ್ಲಿ ತನ್ನೆಲ್ಲಾ ಹಲ್ಲುಗಳನ್ನು ಅಥವಾ ಹೆಚ್ಚಿನ ಹಲ್ಲುಗಳನ್ನು ಕಳೆದುಕೊಂಡ ವ್ಯಕ್ತಿಗೆ ಕೃತಕ ಹಲ್ಲುಗಳನ್ನು ಕಸಿ ಮಾಡಲು ಸಾಧ್ಯವಾಗಲಿದೆ. ಸಿಬಿಸಿಟಿ ಸೌಲಭ್ಯ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ರೋಗಿಗಳಿಗೆ ವರದಾನವಾಗಿದ್ದು, ಇದರಿಂದ 3ಡಿ ಇಮೇಜ್ ಮೂಲಕ ಪರಿಣಾಮಕಾರಿಯಾಗಿ ಕೈಗಟಕುವ ದರದಲ್ಲಿ ಹಲ್ಲಿನ ಚಿಕಿತ್ಸೆ ನಡೆಸಲು ಸಾದ್ಯವಾಗಲಿದೆ ಎಂದು ಡೀನ್ ಸಚಿವರಿಗೆ ವಿವರಿಸಿದರು.

ಭಾರತದಲ್ಲೇ ಅತಿ ಹೆಚ್ಚು ನಗದು

ವಿಶ್ವದ ಎಲ್ಲಾ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಲ್ಲಿನ ಒಟ್ಟು ಜಿಡಿಪಿಯ ಶೇ.3ರಿಂದ 4ರಷ್ಟು ವ್ಯವಹಾರ ಮಾತ್ರ ನಗದು ರೂಪದಲ್ಲಿ ನಡೆಯುತ್ತಿದೆ. ಆದರೆ ಭಾರತದಲ್ಲಿ ಇದು ಶೇ.12ರಷ್ಟಿದೆ. ಆದುದರಿಂದ ನಾವು ಇದನ್ನು ಕಡಿಮೆಗೊಳಿಸಲೇ ಬೇಕಾಗಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.

ದೇಶದಲ್ಲಿ 109 ಕೋಟಿ ಆಧಾರ್ ಕಾರ್ಡುಗಳಿವೆ, 100 ಕೋಟಿ ಮೊಬೈಲ್ ಪೋನ್‌ಗಳಿವೆ, 147 ಕೋಟಿ ಬ್ಯಾಂಕ್ ಸೇವಿಂಗ್ ಖಾತೆಗಳಿವೆ. 1.35 ಲಕ್ಷ ಬ್ಯಾಂಕ್ ಶಾಖೆಗಳಿವೆ. 1.55 ಲಕ್ಷ ಅಂಚೆ ಕಚೇರಿಗಳಿವೆ, 1.25 ಲಕ್ಷ ಬ್ಯುಸಿನೆಸ್ ಪ್ರತಿನಿಧಿಗಳಿದ್ದರೆ, 1.25 ಲಕ್ಷ ಎಸಿಟಿ ಸೇವಾ ಕೇಂದ್ರಗಳಿವೆ. ಕಳೆದ 25 ತಿಂಗಳಲ್ಲಿ 25 ಕೋಟಿ ಜನಧನ್ ಖಾತೆಗಳನ್ನು ತೆರೆಯಲಾಗಿದೆ. ದೇಶದ 16 ಕೋಟಿ ಮನೆಗಳಲ್ಲಿ ಟಿವಿಗಳಿವೆ, ಇವುಗಳಲ್ಲಿ 6 ಕೋಟಿ ಡಿಟಿಎಚ್ ಸೇವೆ ಹೊಂದಿದ್ದರೆ, 10 ಕೋಟಿ ಕೇಬಲ್ ಹಾಗೂ ಸೆಟ್‌ಟಾಪ್ ಬಾಕ್ಸ್ ಸಂಪರ್ಕ ಹೊಂದಿದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X