ಎಲ್ಲೆಂದರಲ್ಲಿ ಕೈಕೊಡುತ್ತಿರುವ ಮುಲ್ಕಿ ಠಾಣೆಯ ಜೀಪು
ನಗೆಪಾಟಲಿಗೀಡಾಗುತ್ತಿರುವ ಪೊಲೀಸ್ ಇಲಾಖೆ

ಕೆಟ್ಟು ನಿಂತ ಪೊಲೀಸ್ ಜೀಪನ್ನು ಟ್ರಾಕ್ಟರ್ನ ಮೂಲಕ ಎಳೆದು ಸಾಗಿಸುತ್ತಿರುವುದು
ಮುಲ್ಕಿ, ಜ.8: ಮುಲ್ಕಿ ಠಾಣೆಯ ಪೊಲೀಸ್ ಜೀಪು ಆಗಾಗ್ಗೆ ಎಲ್ಲೆಂದರಲ್ಲಿ ಕೈಕೊಡುತ್ತಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ರವಿವಾರವೂ ಮುಲ್ಕಿ ಬಸ್ಸು ನಿಲ್ದಾಣದ ಬಳಿಯಲ್ಲಿ ಠಾಣೆಯ ಜೀಪು ಕೆಟ್ಟು ನಿಂತಿತ್ತು. ಬಳಿಕ ಟ್ರಾಕ್ಟರ್ ಮೂಲಕ ಎಳೆದುಕೊಂಡು ಠಾಣೆಯ ಬಳಿ ತಂದಿಡ ಲಾಗಿದೆ. ಪ್ರಸ್ತುತ ಮುಲ್ಕಿ ಠಾಣೆಯಲ್ಲಿ ಎರಡು ಜೀಪುಗಳಿದ್ದು, ಅದು ಸಾಧಾರಣ ಮಟ್ಟಿಗೆ ಓಡುತ್ತಿದೆ. ಆದರೆ, ಇನ್ನೊಂದು ಓಬಿರಾಯನ ಕಾಲದ ಜೀಪು ಮಾತ್ರ ಇಲ್ಲಿದೆ.
ಕಳೆದ ಕೆಲ ವರ್ಷಗಳ ಹಿಂದೆ ಪಣಂಬೂರಿನಲ್ಲಿ ನಡೆದ ಅಪಘಾತದ ವೇಳೆ ಮುಲ್ಕಿ ಠಾಣೆಯ ಪಿಸಿಆರ್ ಜೀಪು ಜಖಂ ಗೊಂಡಿತ್ತು. ಘಟನೆ ನಡೆದು ಹಲವು ವರ್ಷಗಳು ಕಳೆದರೂ ಈ ವರೆಗೂ ಮುಲ್ಕಿ ಠಾಣೆಗೆ ಪಿಸಿಆರ್ ವಾಹನ ಮರೀಚಿಕೆಯಾಗಿಯೇ ಉಳಿದಿದೆ.
ಪೊಲೀಸ್ ಜೀಪು ಆಗಾಗ್ಗೆ ಎಲ್ಲೆಂದರಲ್ಲಿ ಹಾಳಾಗಿ ನಿಲ್ಲುತ್ತಿರುವುದು ಸಾರ್ವಜನಿಕರ ದೃಷ್ಠಿಯಲ್ಲಿ ಪೊಲೀಸ್ ಇಲಾಖೆ ನಗೆ ಪಾಟಲಿಗಾಡುಗುವ ಜೊತೆಗೆ ಸಿಬ್ಬಂದಿ ಮುಜುಗರಕ್ಕೆ ಸಿಲುಕುವಂತೆ ಮಾಡಿದೆ.
ಕೂಡಲೇ ಮುಲ್ಕಿ ಠಾಣೆಗೆ ಹೊಸ ಜೀಪು ಪಿಸಿಆರ್ ಸಹಿತ ಹಳೇಯ ಜೀಪಿಗೆ ಬದಲಾಗಿ ನೂತನ ಜೀಪು ಮಂಜೂರು ಮಾಡುವಂತೆ ಮುಲ್ಕಿ ನಾಗರಿಕರು ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.





