ಮಿಜಾರು : ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ
.jpg)
ಮೂಡುಬಿದಿರೆ, ಜ.8 : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯ ಸ್ವಚ್ಛ ಭಾರತ ನಿರ್ಮಲ ಶ್ರದ್ಧಾ ಕಾರ್ಯಕ್ರಮದಂಗವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮಿಜಾರು ಬೈತರಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕಾಂಬೆಟ್ಟು ಸೋಮನಾಥೇಶ್ವರ ಆಡಳಿತ ಮಂಡಳಿಯ ಪದಾಧಿಕಾರಿಗಳು ದೇವಸ್ಥಾನದ ಆವರಣದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು.
ಯೋಜನೆಯ ಮೇಲ್ವೀಚಾರಕ ಪ್ರಮೋದ್ ಎ. ಅವರು ಅಭಿಯಾನದ ನೇತೃತ್ವವನ್ನು ವಹಿಸಿದ್ದರು.
ಒಕ್ಕೂಟದ ಅಧ್ಯಕ್ಷೆ ಜಯಂತಿ ರಾಮಣ್ಣ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಸುಂದರ ಶೆಟ್ಟಿ, ಸಮಾಜ ಸೇವಕ ಸುಧಾಕರ ಪೂಂಜಾ ಈ ಸಂದರ್ಭದಲ್ಲಿದ್ದರು.
100ಕ್ಕೂ ಅಧಿಕ ಮಂದಿ ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
Next Story





