ಹೊಟ್ಟೆಯಲ್ಲೇ ಬಟ್ಟೆ ಬಿಟ್ಟ ವೈದ್ಯರು !
ಆಸ್ಪತ್ರೆಗೆ ಆರೂವರೆ ಲಕ್ಷ ರೂ. ದಂಡ

ಕೊಟ್ಟಾಯಂ,ಜ. 9: ಶಸ್ತ್ರಕ್ರಿಯೆ ನಡೆಸಿದಾಗ ಹೊಟ್ಟೆಯಲ್ಲಿ ರಕ್ತದಿಂದ ಒದ್ದೆಯಾದ ಬಟ್ಟೆ ಮರೆತು ಹೊಲಿಗೆ ಹಾಕಿದ ಖಾಸಗಿ ಆಸ್ಪತ್ರೆಗೆ ಆರೂವರೆ ಲಕ್ಷ ರೂಪಾಯಿ ದಂಡ ವಿಧಿಸಿ ಜಿಲ್ಲಾ ಬಳಕೆ ದಾರರ ವೇದಿಕೆ ತೀರ್ಪು ನೀಡಿದೆ. ಕುರ್ಯನ್ ಎಂಬವರ ಪತ್ನಿ ಶೆರ್ಲಿ ಎಂಬವರಿಗೆ 2007ರಲ್ಲಿ ಕೋಟ್ಟಯಂ ನಗರದ ಪ್ರಮುಖ ಭಾರತ್ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆದಿತ್ತು. ಶಸ್ತ್ರಕ್ರಿಯೆ ವೇಳೆ ರಕ್ತವಿದ್ದ ಬಟ್ಟೆ ಹೊಟ್ಟೆಯೊಳಗೆ ಬಾಕಿಯಾಗಿತ್ತು. ಒಂದು ವಾರದ ನಂತರ ಶೆರ್ಲಿಗೆ ಹೊಟ್ಟೆನೋವು ಕಂಡು ಬಂದು ಎರ್ನಾಕುಲಂ ಆಸ್ಪತ್ರೆಯಲ್ಲಿ ಹೊಟ್ಟೆಯೊಳಗೆ ಬಟ್ಟೆ ಉಳಿದುಕೊಂಡಿದ್ದು ಆರೋಗ್ಯ ತಪಾಸಣೆವೇಳೆ ಕಂಡು ಬಂದಿತ್ತು. ನಂತರ ಅಲ್ಲಿ ಆಪರೇಷನ್ ನಡೆಸಿ ಬಟ್ಟೆಯನ್ನು ಹೊರತೆಗೆಯಲಾಯಿತು. ಶೆರ್ಲಿ 2007 ಜುಲೈ ಮೂರರಂದು ಬಳಕೆದಾರವೇದಿಕೆಗೆ ದೂರಿತ್ತರು. ಹತ್ತುವರ್ಷ ದೀರ್ಘ ಹೋರಾಟದಲ್ಲಿ ಬಳಕೆದಾರರ ವೇದಿಕೆ ಶಸ್ತ್ರಕ್ರಿಯೆ ನಡೆಸಿದ ಆಸ್ಪತ್ರೆ ಹಾಗೂ ವೈದ್ಯರನ್ನು ಒಂದನೆ ಎರಡನೆ ಆರೋಪಿಗಳೆಂದು ಗುರುತಿಸಿ ತಪ್ಪಿಸ್ಥರೆಂದು ತೀರ್ಪು ನೀಡಿದೆ. ಎರ್ನಾಕುಲಂ ಆಸ್ಪತ್ರೆಯಲ್ಲಿ ಶೆರ್ಲಿಯ ಎರಡನೆ ಶಸ್ತ್ರಕ್ರಿಯೆಗೆ ತಗಲಿದ ವೆಚ್ಚ ಸಹಿತ ನಷ್ಟ ಪರಿಹಾರ ಆರೂವರೆ ಲಕ್ಷರೂಪಾಯಿ ನೀಡಬೇಕೆಂದು ತಪ್ಪಿತಸ್ಥರಿಗೆ ಬಳಕೆದಾರರ ವೇದಿಕೆ ಸೂಚಿಸಿದೆ. ಪ್ರಕರಣದ ವಿರುದ್ಧ ಮೇಲ್ಮನವಿ ಹೋಗುವೆವೆಂದು ಆಸ್ಪತ್ರೆಯ ಅಧಿಕಾರಿಗಳುತಿಳಿಸಿದ್ದಾರೆ.
ರಕ್ತವಿದ್ದ ಬಟ್ಟೆಯಿಂದಾಗಿ ಶೆರ್ಲಿಯ ಕರುಳಿಗೆ ಹಾನಿ ಸಂಭವಿಸಿತ್ತು. ಕರುಳಿನ ಭಾಗವನ್ನು ತೆರವುಗೊಳಿಸಬೇಕಾಯಿತು. ಆರೋಗ್ಯ ಸಮಸ್ಯೆಯಿಂದ ಶೆರ್ಲಿ ಉದ್ಯೋಗಕ್ಕೆ ಹೋಗುವುದು ನಿಲ್ಲಿಸಬೇಕಾಯಿತು. ಇವೆಲ್ಲವನ್ನೂ ತೀರ್ಪಿನಲ್ಲಿ ವೇದಿಕೆ ಪರಿಗಣಿಸಿದೆ.ಶೆರ್ಲಿಯ ಹೊಟ್ಟೆಯಲ್ಲಿ ರಕ್ತವಿದ್ದ ಬಟ್ಟೆ ನಾವು ಇಟ್ಟಿಲ್ಲ. ಶೆರ್ಲಿಗೆ ಆ ಕಾರಣದಿಂದ ಎರಡನೆ ಶಸ್ತ್ರಚಿಕಿತ್ಸೆ ನಡೆದುದಲ್ಲ. ನಮ್ಮ ವಾದವನ್ನು ವೇದಿಕೆ ಆಲಿಸಿಲ್ಲ ಎಂದು ಆರೋಪಿಸ್ಥಾನದಲ್ಲಿರುವ ಭರತ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.







