Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸ್ವೀಕರಿಸಿ...

ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸ್ವೀಕರಿಸಿ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ಮೆರಿಲ್ ಸ್ಟ್ರೀಪ್

ವಾರ್ತಾಭಾರತಿವಾರ್ತಾಭಾರತಿ9 Jan 2017 3:44 PM IST
share
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸ್ವೀಕರಿಸಿ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ಮೆರಿಲ್ ಸ್ಟ್ರೀಪ್

ವಾಶಿಂಗ್ಟನ್, ಜ. 9: ಹಾಲಿವುಡ್‌ನಲ್ಲಿ ತನ್ನ ಜೀವಮಾನದ ಸಾಧನೆಗಾಗಿ ‘ಗೋಲ್ಡನ್ ಗ್ಲೋಬ್ಸ್’ ಪ್ರಶಸ್ತಿ ಪಡೆದ ಮೆರಿಲ್ ಸ್ಟ್ರೀಪ್, ಇದೇ ಸಂದರ್ಭದಲ್ಲಿ ತನ್ನ ಜೀವಮಾನದ ಭಾಷಣವೊಂದನ್ನು ಮಾಡಿದರು.

 ‘ಸೆಸಿಲ್ ಬಿ. ಡೆಮೈಲ್ ಪ್ರಶಸ್ತಿ’ಯನ್ನು ಸ್ವೀಕರಿಸಿದ ಬಳಿಕ ಸುಮಾರು 6 ನಿಮಿಷಗಳ ಕಾಲ ಮಾತನಾಡಿದ ನಟಿ, ಅಮೆರಿಕನ್ ಸಮಾಜದಲ್ಲಿ ಈಗ ಅತ್ಯಂತ ಹೆಚ್ಚು ಅವಹೇಳನಕ್ಕೆ ಒಳಗಾದ ಮೂರು ಘಟಕಗಳಾದ ಹಾಲಿವುಡ್, ವಿದೇಶೀಯರು ಮತ್ತು ಪತ್ರಿಕೆಗಳ ಮಹತ್ವವನ್ನು ಎತ್ತಿಹಿಡಿದರು.

2015ರಲ್ಲಿ ಅಂಗವಿಕಲ ಪತ್ರಕರ್ತರೊಬ್ಬರನ್ನು ಅವಹೇಳನಗೈದಿರುವುದಕ್ಕಾಗಿ ಮೆರಿಲ್ ಸ್ಟ್ರೀಪ್ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಖಂಡಿಸಿದರು. ಆದರೆ, ತನ್ನ ಭಾಷಣದಲ್ಲಿ ಒಮ್ಮೆಯೂ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ.

‘‘ಹೊರಗಿನವರು ಮತ್ತು ವಿದೇಶೀಯರಿಂದಾಗಿ ಹಾಲಿವುಡ್ ತೆವಳಿಕೊಂಡು ಸಾಗುತ್ತಿದೆ. ನಾವು ಅವರೆಲ್ಲರನ್ನು ಒದ್ದೋಡಿಸಿದರೆ, ಫುಟ್ಬಾಲ್ ಮತ್ತು ಸಮ್ಮಿಶ್ರ ಸಮರ ಕಲೆ (ಮಾರ್ಶಲ್ ಆರ್ಟ್ಸ್)ಗಳನ್ನು ಹೊರತುಪಡಿಸಿ ನಿಮಗೆ ನೋಡಲು ಏನೂ ಇರುವುದಿಲ್ಲ. ಫುಟ್ಬಾಲ್ ಮತ್ತು ಮಾರ್ಶಲ್ ಆರ್ಟ್ಸ್ ಕಲೆಗಳಲ್ಲ’’ ಎಂದು ಅವರು ಹೇಳಿದರು. ಆಗ ಸಭಿಕರಿಂದ ಭಾರೀ ಕರತಾಡನ ಮೊಳಗಿತು.

‘‘ಓರ್ವ ನಟ ಅಥವಾ ನಟಿಯ ಏಕೈಕ ಕೆಲಸವೆಂದರೆ ನಮ್ಮಿಂದ ಭಿನ್ನವಾಗಿರುವ ಜನರ ಬದುಕಿನೊಳಗೆ ಪ್ರವೇಶಿಸಿ ಆಗ ಏನಾಗುತ್ತದೆ ಎನ್ನುವುದನ್ನು ನೀವು ಅನುಭವಿಸುವಂತೆ ಮಾಡುವುದು. ಈ ವರ್ಷ ಇಂಥ ಹಲವಾರು ಪ್ರಬಲ ನಿರ್ವಹಣೆಗಳು ಹೊರಬಂದಿವೆ’’ ಎಂದರು.

ಇಂಥ ಒಂದು ನಿರ್ವಹಣೆಯಿಂದ ತಾನು ಈ ವರ್ಷ ದಂಗಾಗಿದ್ದೇನೆ ಎಂದು ಹೇಳಿದ ಸ್ಟ್ರೀಪ್, ‘‘ಆದರೆ, ನಾನು ದಂಗಾಗಿದ್ದು ಅದು ಒಳ್ಳೆಯದಿತ್ತು ಎಂದಲ್ಲ, ಅದರಲ್ಲಿ ಏನೂ ಒಳ್ಳೆಯದಿರಲಿಲ್ಲ ಎಂಬ ಕಾರಣಕ್ಕಾಗಿ’’ ಎಂದರು.

‘‘ನಮ್ಮ ದೇಶದ ಅತ್ಯಂತ ಗೌರವಾನ್ವಿತ ಆಸನದಲ್ಲಿ ಕುಳಿತುಕೊಳ್ಳಲು ಬಯಸಿರುವ ವ್ಯಕ್ತಿಯು ಅಂಗವಿಕಲ ವರದಿಗಾರರೊಬ್ಬರನ್ನು ಅವಮಾನ ಪಡಿಸಿದ ಘಟನೆಯಾಗಿತ್ತು ಅದು. ಸೌಲಭ್ಯಗಳು, ಅಧಿಕಾರ ಮತ್ತು ಪ್ರತಿಭಟಿಸುವ ಸಾಮರ್ಥ್ಯಗಳಲ್ಲಿ ಎಳ್ಳಷ್ಟೂ ಸಾಟಿಯಾಗದ ವ್ಯಕ್ತಿಯ ಚಲನೆಯನ್ನು ಈ ವ್ಯಕ್ತಿ ಮಾಡಿತೋರಿಸಿದರು’’ ಎಂದು ನುಡಿದರು.

‘ನ್ಯೂಯಾರ್ಕ್ ಟೈಮ್ಸ್’ನ ವರದಿಗಾರ ಸರ್ಗ್ ಕೊವಲೆಸ್ಕಿಯನ್ನು ತಾನು ಅವಮಾನಿಸಿದ್ದೇನೆ ಎಂಬ ಆರೋಪಗಳನ್ನು ಟ್ರಂಪ್ ಹಿಂದೆ ನಿರಾಕರಿಸಿದ್ದಾರೆ.

‘‘ನಾನು ಅದನ್ನು ನೋಡಿದಾಗ ನನ್ನ ಹೃದಯ ಒಡೆಯಿತು. ಅದನ್ನು ಈಗಲೂ ನನ್ನ ಮನಸ್ಸಿನಿಂದ ಹೊರದೂಡಲು ಸಾಧ್ಯವಾಗಿಲ್ಲ. ಯಾಕೆಂದರೆ, ಅದು ಸಿನೇಮಾವಲ್ಲ, ನಿಜ ಜೀವನ’’ ಎಂದು ಸ್ಟ್ರೀಪ್ ಹೇಳಿದರು.

‘‘ತನ್ನೊಳಗಿರುವ ಇಂಥ ಅವಮಾನಿಸುವ ಪ್ರವೃತ್ತಿಯನ್ನು ಸಾರ್ವಜನಿಕ ಜೀವನದಲ್ಲಿರುವ ಬಲಿಷ್ಠ ವ್ಯಕ್ತಿಯೊಬ್ಬ ಹೊರಜಗತ್ತಿಗೆ ತೋರಿಸಿದಾಗ, ಅದು ಎಲ್ಲರ ಬದುಕಿನೊಳಗೆ ಸೇರಿಕೊಳ್ಳುತ್ತದೆ. ಯಾಕೆಂದರೆ, ಇಂಥದ್ದನ್ನು ಮಾಡಲು ಅದು ಇತರ ಜನರಿಗೆ ಅನುಮೋದನೆ ನೀಡುತ್ತದೆ’’ ಎಂದರು.

‘‘ಇತರರನ್ನು ಪೀಡಿಸಲು ಅಧಿಕಾರದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸುವಾಗ, ನಾವೆಲ್ಲ ಸೋಲುತ್ತೇವೆ’’ ಎಂದು ಅವರು ಅಭಿಪ್ರಾಯಪಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X