ಲೈಂಗಿಕ ಕಿರುಕುಳ ಆರೋಪಿ ಜ್ಯೋತಿಷಿಗಾಗಿ ಪೊಲೀಸರಿಂದ ತೀವ್ರ ಶೋಧ

ಮಂಗಳೂರು, ಜ.9 : ಯುವತಿಯೊಬ್ಬಳಿಗೆ ಸಮಸ್ಯೆ ಪರಿಹಾರಕ್ಕೆ ಬ್ರಾಹ್ಮಣ ಯುವಕನೊಂದಿಗೆ ಮಲಗಬೇಕೆಂದು ಸಲಹೆ ನೀಡಿದ್ದ ಮಂಗಳೂರು ಅತ್ತಾವರದ ವೈಷ್ಣವಿ ಜ್ಯೋತಿಷ್ಯಾಲಯದ ಜ್ಯೋತಿಷಿ ರಾಮಕೃಷ್ಣ ಶರ್ಮ ನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಮಕೃಷ್ಣ ಶರ್ಮ ಯುವತಿಯೊಬ್ಬಳಿಗೆ ಆಕೆಯ ಸಮಸ್ಯೆ ಪರಿಹಾರಕ್ಕೆ ಈ ರೀತಿಯ ಸಲಹೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಮಕೃಷ್ಣ ಶರ್ಮ ಇದಕ್ಕು ಮುಂಚೆ ವಿಚಾರವಾದಿ ನರೇಂದ್ರ ನಾಯಕ್ ಅವರ ಕಾರ್ಯುಚರಣೆಯಲ್ಲಿ ಸುಳ್ಳು ಜ್ಯೋತಿಷ್ಯ ಹೇಳುವ ಮೂಲಕ ಸಿಕ್ಕಿಬಿದ್ದಿದ್ದ. ಈತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ರಾಮಕೃಷ್ಣ ಶರ್ಮ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದನು.
ಇದೀಗ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿರುವುದರಿಂದ ಜಾಮೀನು ಪಡೆದು ನಾಪತ್ತೆಯಾಗಿರುವ ರಾಮಕೃಷ್ಣ ಶರ್ಮನನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
Next Story





