ಹಲ್ಲೆ ಪ್ರಕರಣ : ಆರೋಪಿ ಸೆರೆ

ಕಾಸರಗೋಡು, ಜ.9 : ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಳಂಗರೆ ಕೆ . ಕೆ ಪುರದ ಇಮ್ತಿಯಾಜ್ (31) ಎಂದು ಗುರುತಿಸಲಾಗಿದೆ.
ನವಂಬರ್ 28ರಂದು ಗಾಂಜಾ ಮಾರಾಟದ ಬಗ್ಗೆ ಪ್ರಶ್ನಿಸಿದ ಕಾರಣಕ್ಕಾಗಿ ಮುಸ್ತಾಕ್ (33) ಎಂಬವರ ಮೇಲೆ ಆರೋಪಿಯು ಹಲ್ಲೆ ನಡೆಸಿದ್ದನು.
ಈ ಹಿನ್ನಲೆಯಲ್ಲಿ ಇಮ್ತಿಯಾಜ್ ವಿರುದ್ಧ ಕೇಸು ದಾಖಲಿಸಲಾಗಿತ್ತು .
Next Story





