ನೋಟು ಅಮಾನ್ಯದ ವಿರುದ್ಧ ಸಿಐಟಿಯು ಧರಣಿ

ಮಂಗಳೂರು, ಜ.9: ಕೇಂದ್ರ ಸರಕಾರ 500 ಮತ್ತು 1,000 ರೂ. ನೋಟುಗಳನ್ನು ರದ್ದುಗೊಳಿಸಿದ ಬಳಿಕ ದೇಶದಲ್ಲಿ ಕಾರ್ಮಿಕ ವರ್ಗವು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.
ನೋಟು ಅಮಾನ್ಯ ಮತ್ತು ಕೇಂದ್ರದ ಜನ ವಿರೋಧಿ ನೀತಿಗಳ ವಿರುದ್ಧ ಸಿಐಟಿಯು ನೇತೃತ್ವದಲ್ಲಿ ಸೋಮವಾರ ದ.ಕ. ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ನಡೆದ ಧರಣಿಯನ್ನುಉದ್ದೇಶಿಸಿ ಅವರು ಮಾತನಾಡಿದರು.
ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.
ಸಿಐಟಿಯು ಜಿಲ್ಲಾ ಮುಖಂಡರಾದ ಯು. ಬಿ. ಲೋಕಯ್ಯ, ಯೋಗೀಶ್ ಜಪ್ಪಿನಮೊಗರು, ಸದಾಶಿವದಾಸ್, ಜಯಂತ್ ನಾಯ್ಕಿ, ರಾಧಾ ಮೂಡುಬಿದಿರೆ, ಜಯಂತಿ ಬಿ. ಶೆಟ್ಟಿ, ಸಂತೋಷ್ ಶಕ್ತಿನಗರ, ಸಂಜೀವ ಬಂಗೇರ, ಬಾಬು ದೇವಾಡಿಗ, ರೋಹಿಣಿ, ಜನಾರ್ದನ ಕುತ್ತಾರ್, ವಸಂತಿ, ಜಯಲಕ್ಷ್ಮೀ, ಸಂತೋಷ್ ಆರ್. ಎಸ್, ಸೀತಾರಾಮ್ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
...







